Asianet Suvarna News Asianet Suvarna News

Vijay Hazare Trophy 2021 : ಚೊಚ್ಚಲ ದೇಶೀಯ ಪ್ರಶಸ್ತಿ ಗೆದ್ದ ಹಿಮಾಚಲ ಪ್ರದೇಶ!

ಶುಭಮ್ ಅರೋರಾ ಸೂಪರ್ ಶತಕ
ವಿಜೆಡಿ ನಿಯಮದ ಅನ್ವಯ 11 ರನ್ ಗೆಲುವು
ಫೈನಲ್ ನಲ್ಲಿ ನಿರಾಸೆ ಅನುಭವಿಸಿದ ತಮಿಳುನಾಡು ತಂಡ
 

Himachal Pradesh stun Tamil Nadu to clinch maiden Vijay Hazare Trophy title san
Author
Bengaluru, First Published Dec 26, 2021, 9:21 PM IST

ಜೈಪುರ (ಡಿ. 26): ಭರ್ಜರಿ ನಿರ್ವಹಣೆ ತೋರಿದ ಹಿಮಾಚಲ ಪ್ರದೇಶ (Himachal Pradesh ) ತಂಡ ವಿಜೆಡಿ  (VJD Method)ನಿಯಮದ ಅನ್ವಯ 11 ರನ್ ಗಳಿಂದ ತಮಿಳುನಾಡು ( Tamil Nadu) ತಂಡವನ್ನು ಸೋಲಿಸುವ ಮೂಲಕ ಚೊಚ್ಚಲ ಬಾರಿಗೆ ದೇಶೀಯ ಕ್ರಿಕೆಟ್ ಟೂರ್ನಿಯೊಂದರಲ್ಲಿ ಚಾಂಪಿಯನ್ ಆಗಿದೆ. ಶುಭಮ್ ಅರೋರಾ (136 ರನ್, 131 ಎಸೆತ, 13 ಬೌಂಡರಿ, 1 ಸಿಕ್ಸರ್)  ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಹಿಮಾಚಲ ಪ್ರದೇಶ ವಿಜಯ್ ಹಜಾರೆ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ (Vijay Hazare Trophy 2021-22 ) ಚಾಂಪಿಯನ್ ಪಟ್ಟವೇರಿತು. ಗೆಲುವಿಗೆ 315 ರನ್ ಗಳನ್ನು ಬೆನ್ನಟ್ಟಿದ್ದ ಹಿಮಾಚಲ ಪ್ರದೇಶ ತಂಡ 47.3 ಓವರ್ ಗಳಲ್ಲಿ 4 ವಿಕೆಟ್ ಗೆ 299 ರನ್ ಬಾರಿಸಿದ್ದ ವೇಳೆ ಪಂದ್ಯಕ್ಕೆ ಮಂದಬೆಳಕು ಅಡ್ಡಿಪಡಿಸಿತು. ಆ ಬಳಿಕ ವಿಜೆಡಿ ನಿಯಮದ ಅನ್ವಯ ಹಿಮಾಚಲ ಪ್ರದೇಶ ತಂಡವನ್ನು 11 ರನ್ ಗಳಿಂದ ವಿಜಯಿ ಎಂದು ಘೋಷಣೆ ಮಾಡಲಾಯಿತು. ದಿನೇಶ್ ಕಾರ್ತಿಕ್ ಅವರ ಶತಕದ ಸಾಹಸವನ್ನು ಮೆಟ್ಟಿನಿಂತ ಶುಭಮ್ ಅರೋರಾ ಹಿಮಾಚಲ ಪ್ರದೇಶದ ಪಾಲಿಗೆ ಹೀರೋ ಎನಿಸಿಕೊಂಡರು.

ಸವಾಯ್ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಮುಖಾಮುಖಿಯಲ್ಲಿ ತಮಿಳುನಾಡು ತಂಡ, ದಿನೇಶ್ ಕಾರ್ತಿಕ್ (116 ರನ್, 103 ಎಸೆತ, 8 ಬೌಂಡರಿ, 7 ಸಿಕ್ಸರ್) ಭರ್ಜರಿ ಶತಕ, ಶಾರುಖ್ ಖಾನ್ (42ರನ್, 21 ಎಸೆತ, 3 ಬೌಂಡರಿ, 3 ಸಿಕ್ಸರ್) ಹಾಗ ನಾಯಕ ವಿಜಯ್ ಶಂಕರ್ (22 ರನ್, 16 ಎಸೆತ, 1 ಬೌಂಡರಿ, 1 ಸಿಕ್ಸರ್) ಸಾಹಸದಿಂದ 49.4 ಓವರ್ ಗಳಲ್ಲಿ 314 ರನ್ ಪೇರಿಸಿತು. ಪ್ರತಿಯಾಗಿ ಹಿಮಾಚಲ ಪ್ರದೇಶ ಆರಂಭಿಕ ಆಟಗಾರ ಶುಭಮ್ ಅರೋರಾ (Shubham Arora) ಸಾಹಸಿಕ ಶತಕ, ಅಮಿತ್ ಕುಮಾರ್ (74ರನ್, 79 ಎಸೆತ, 6 ಬೌಂಡರಿ) ಆಕರ್ಷಕ ಅರ್ಧಶತಕದ ನೆರವಿನಿಂದ 47.3 ಓವರ್ ಗಳಲ್ಲಿ 4 ವಿಕೆಟ್ ಗೆ 299 ರನ್ ಪೇರಿಸಿತು. ಕೊನೆಯ 15 ಎಸೆತಗಳಲ್ಲಿ 16  ರನ್ ಗಳಿಸಬೇಕಿದ್ದಾಗ ಅಂಪೈರ್ ಗಳು ಮಂದಬೆಳಕಿನ ಕಾರಣ ನೀಡಿ ಪಂದ್ಯವನ್ನು ಮುಕ್ತಾಯ ಮಾಡಿದರು. ಇದು ವಿಜಯ್ ಹಜಾರೆ ಟ್ರೋಫಿಯಲ್ಲಿ ಮಾತ್ರವಲ್ ರಿಷಿ ಧವನ್ (Rishi Dhawan) ನೇತೃತ್ವದ ಹಿಮಾಚಲ ಪ್ರದೇಶ ತಂಡಕ್ಕೆ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿಯೇ ಚೊಚ್ಚಲ ಪ್ರಶಸ್ತಿ ಎನಿಸಿದೆ.

ಮೊತ್ತ ಬೆನ್ನಟ್ಟಿದ ಹಿಮಾಚಲ ಪ್ರದೇಶ ತಂಡ ಉತ್ತಮ ಆರಂಭ ಪಡೆಯಿತಾದರೂ 9 ರಿಂದ 15ನೇ ಓವರ್ ನ ಅಂತರದಲ್ಲಿ ಮೂರು ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿತು. ಆದರೆ, 24 ವರ್ಷದ ಶುಭಮ್ ಅರೋರಾ ಏಕಾಗ್ರತೆ ಮಾತ್ರ ಒಂಚೂರು ಕಡಿಮೆಯಾಗಲಿಲ್ಲ.
 


ಲಿಸ್ಟ್ ಎ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕ ಬಾರಿಸುವ ಹಾದಿಯಲ್ಲಿ 4ನೇ ವಿಕೆಟ್ ಗೆ ಅಮಿತ್‌ ಕುಮಾರ್ (Amit Kumar) ಜೊತೆ 148 ರನ್ ಗಳ ಅಮೂಲ್ಯ ಜೊತೆಯಾಟವಾಡಿ ತಂಡದ ಗೆಲುವನ್ನು ಖಚಿತಪಡಿಸಿದರು. 42ನೇ ಓವರ್ ನಲ್ಲಿ ಶುಭಮ್ ಗೆ ಜೊತೆಯಾದ ನಾಯಕ ರಿಷಿ ಧವನ್, 23 ಎಸೆತಗಳಲ್ಲಿ 42 ರನ್ ಸಿಡಿಸುವ ಮೂಲಕ ಅವರ ಮೇಲಿನ ಒತ್ತಡವನ್ನು ಕಡಿಮೆ ಮಾಡಿ ತಂಡದ ಗೆಲುವಿಗೆ ನೆರವು ನೀಡಿದರು.

Vijay Hazare Trophy 2021: ಫೈನಲ್‌ನಲ್ಲಿಂದು ತಮಿಳುನಾಡು-ಹಿಮಾಚಲ ಪ್ರದೇಶ ಫೈಟ್‌
ತಮಿಳುನಾಡು ತಂಡದ ಬ್ಯಾಟಿಂಗ್ ನಲ್ಲಿ ಮಿಂಚಿದ್ದ ದಿನೇಶ್ ಕಾರ್ತಿಕ್ (Dinesh Karthik)ಅವರ ಸುಲಭದ ಕ್ಯಾಚ್ ಅನ್ನು ವಿಕೆಟ್ ಹಿಂದೆ ಕೈಚೆಲ್ಲಿದ್ದ ಶುಭಮ್ ಅರೋರಾ, ಬ್ಯಾಟಿಂಗ್ ವೇಳೆ ಅದರ ಸೇಡು ತೀರಿಸಿಕೊಂಡರು. 54 ರನ್ ಪಡೆದಿದ್ದ ವೇಳೆ ಶುಭಮ್ ರಿಂದ ಜೀವದಾನ ಪಡೆದಿದ್ದ ದಿನೇಶ್ ಕಾರ್ತಿಕ್ ಆ ಬಳಿಕ ಅದ್ಭುತ ಶತಕ ಸಿಡಿಸಿದ್ದರು. 15ನೇ ಓವರ್  ವೇಳೆಗೆ 40 ರನ್ ಗೆ 4 ವಿಕೆಟ್ ಕಳೆದುಕೊಂಡಿದ್ದ ತಮಿಳುನಾಡು ತಂಡಕ್ಕೆ ದಿನೇಶ್ ಕಾರ್ತಿಕ್ ಹಾಗೂ ಬಾಬಾ ಇಂದ್ರಜಿತ್ ( Indrajith) ಆಸರೆಯಾದರು.

Natasa Stankovic Pregnant: ಹಾರ್ದಿಕ್ ಪಾಂಡ್ಯ ಪತ್ನಿ ಮತ್ತೆ ಪ್ರೆಗ್ನೆಂಟಾ? ಬೇಬಿ ಬಂಪ್
167ಎಸೆತಗಳಲ್ಲಿ 202 ರನ್ ಜೊತೆಯಾಟವಾಡಿ ತಮಿಳುನಾಡು ತಂಡದ ದೊಡ್ಡ ಮೊತ್ತಕ್ಕೆ ಕಾರಣರಾದರು. 71 ಎಸೆತ ಎದುರಿಸಿದ ಬಾಬಾ ಇಂದ್ರಜಿತ್ 8 ಬೌಂಡರಿ, 1 ಸಿಕ್ಸರ್ ನೊಂದಿಗೆ 80 ರನ್ ಬಾರಿಸಿ 42ನೇ ಓವರ್ ನಲ್ಲಿ ಔಟಾದರು. ಆ ಬಳಿಕ ಶಾರುಖ್ ಖಾನ್ ಹಾಗೂ ವಿಜಯ್ ಶಂಕರ್ ಸೂಪರ್ ಇನ್ನಿಂಗ್ಸ್ ಮೂಲಕ ತಮಿಳುನಾಡು 310 ರನ್ ಗಳ ಗಡಿ ದಾಟಿತ್ತು.

ತಮಿಳುನಾಡು: 49.4 ಓವರ್ ಗಳಲ್ಲಿ 314 (ದಿನೇಶ್ ಕಾರ್ತಿಕ್ 116, ಬಾಬಾ ಇಂದ್ರಜಿತ್ 80, ಪಂಕಜ್ ಜೈಸ್ವಾಲ್ 59ಕ್ಕೆ 4), ಹಿಮಾಚಲ ಪ್ರದೇಶ: 47.3 ಓವರ್ ಗಳಲ್ಲಿ 4 ವಿಕಟ್ ಗೆ 299 (ಶುಭಮ್ ಅರೋರಾ 136*, ಅಮಿತ್ ಕುಮಾರ್ 74, ವಾಷಿಂಗ್ಟನ್ ಸುಂದರ್ 47ಕ್ಕೆ 1 ). ವಿಜೆಡಿ ನಿಯಮದ ಅನ್ವಯ ಹಿಮಾಚಲ ಪ್ರದೇಶಕ್ಕೆ 11 ರನ್ ಗೆಲುವು

Follow Us:
Download App:
  • android
  • ios