Ind vs WI 2nd T20I: ಐಪಿಎಲ್‌ ಸ್ಟಾರ್ಸ್‌ಗೆ ಇಂದು ಪುಟಿದೇಳುವ ಗುರಿ..!

ಪ್ರಾವಿಡೆನ್ಸ್‌ನಲ್ಲಿಂದು ಭಾರತ-ವೆಸ್ಟ್ ಇಂಡೀಸ್ ಎರಡನೇ ಟಿ20 ಪಂದ್ಯ
ಈಗಾಗಲೇ ಮೊದಲ ಪಂದ್ಯದಲ್ಲಿ ಮುಗ್ಗರಿಸಿರುವ ಹಾರ್ದಿಕ್ ಪಾಂಡ್ಯ ಪಡೆ
ಎರಡನೇ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಲು ತುದಿಗಾಲಲ್ಲಿ ನಿಂತ ಟೀಂ ಇಂಡಿಯಾ

Hardik Pandya Led Team India take on West Indies T20I Test in 2nd Match kvn

ಪ್ರಾವಿಡೆನ್ಸ್‌(ಆ.06): ಭಾರತದ ‘ಐಪಿಎಲ್‌ ಸ್ಟಾರ್‌’ಗಳು ವಿಂಡೀಸ್‌ ವಿರುದ್ಧ ಭಾನುವಾರ ನಡೆಯಲಿರುವ 2ನೇ ಟಿ20 ಪಂದ್ಯದಲ್ಲಿ ತಮ್ಮ ‘ಘನತೆ’ ಉಳಿಸಿಕೊಳ್ಳಬೇಕಾದ ಒತ್ತಡದಲ್ಲಿದ್ದು, ಸುಧಾರಿತ ಆಟದ ಮೂಲಕ ಭಾರತ ಸರಣಿಯಲ್ಲಿ ಸಮಬಲ ಸಾಧಿಸಲು ನೆರವಾಗಬೇಕಿದೆ.

ಮೊದಲ ಪಂದ್ಯದಲ್ಲಿ 4 ರನ್‌ಗಳಿಂದ ಸೋತಿದ್ದ ಭಾರತ(Indian Cricket Team), ಡೆತ್ ಓವರ್‌ಗಳಲ್ಲಿ ಪರಿಣಾಮಕಾರಿ ಬ್ಯಾಟಿಂಗ್‌ ನಡೆಸುವ ಅವಶ್ಯಕತೆ ಇದ್ದು, 3ನೇ ಸ್ಪಿನ್ನರ್‌ ಬದಲು ಒಬ್ಬ ಹೆಚ್ಚುವರಿ ಬ್ಯಾಟರ್‌ನೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಶುಭ್‌ಮನ್‌ ಗಿಲ್‌ ಹಾಗೂ ಇಶಾನ್‌ ಕಿಶನ್‌ ಏಷ್ಯಾಕಪ್‌ ಹಾಗೂ ವಿಶ್ವಕಪ್‌ಗೂ ಮುನ್ನ ಲಯ ಉಳಿಸಿಕೊಳ್ಳುವುದು ಬಹಳ ಮುಖ್ಯ. ಮೊದಲ ಪಂದ್ಯದಲ್ಲಿ ಭಾರತಕ್ಕೆ ಬ್ಯಾಟರ್‌ಗಳ ಕೊರತೆ ಎದುರಾಯಿತು. ಇದರಿಂದಾಗಿ ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ರನ್ನು ಆಡಿಸಬೇಕಾದ ಒತ್ತಡಕ್ಕೆ ಭಾರತಕ್ಕೆ ಸಿಲುಕಬಹುದು.

Ind vs WI ಟೀಂ ಇಂಡಿಯಾ ಸೋಲಿಸಿದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ.! ಮಾಡಿದ ಎಡವಟ್ಟು ಒಂದೆರಡಲ್ಲ..!

ಟಿ20 ಕ್ರಿಕೆಟ್‌ನ ವಿಶ್ವ ನಂ.1 ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌(Suryakumar Yadav) ಈ ಪ್ರವಾಸದಲ್ಲಿ ಸತತ ವೈಫಲ್ಯ ಕಾಣುತ್ತಿದ್ದು, ಇನ್ನುಳಿದ 4 ಪಂದ್ಯಗಳಲ್ಲಿ ಮಿಂಚುವ ಮೂಲಕ ಆತ್ಮವಿಶ್ವಾಸ ಮರಳಿ ಪಡೆಯಲು ಎದುರು ನೋಡುತ್ತಿದ್ದಾರೆ. ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡದ ಸಂಜು ಸ್ಯಾಮ್ಸನ್‌ ಕೂಡ ಬಾಕಿ ಇರುವ ಪಂದ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಲು ಕಾತರಿಸುತ್ತಿದ್ದಾರೆ.

ಏಕದಿನ ವಿಶ್ವಕಪ್‌(ICC ODI World Cup 2023) ವರ್ಷದಲ್ಲಿ ಟಿ20 ಸರಣಿ ಅಷ್ಟಾಗಿ ಮಹತ್ವ ಪಡೆಯದಿದ್ದರೂ, ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ಸೂಕ್ತ ಆಟಗಾರರನ್ನು ಗುರುತಿಸಲು ಇಂತಹ ಸರಣಿಗಳು ಸಹಕಾರಿಯಾಗಬಹುದು. ಈ ನಿಟ್ಟಿನಲ್ಲಿ ಭಾರತ ಕೆಲ ಯುವ ಆಟಗಾರರನ್ನು ಪರೀಕ್ಷಿಸಲು ಮುಂದಾಗಿದ್ದು, ಪಾದಾರ್ಪಣಾ ಪಂದ್ಯದಲ್ಲೇ ತಿಲಕ್‌ ವರ್ಮಾ ತಾವು ಅಂ.ರಾ. ಕ್ರಿಕೆಟ್‌ಗೆ ಸಿದ್ಧರಿರುವುದಾಗಿ ತೋರಿಸಿಕೊಟ್ಟಿದ್ದಾರೆ.

ಭಾರತದ ಭವಿಷ್ಯದ ತಾರೆಯನ್ನು ಗುರುತಿಸಿದ ವಿಶ್ವಕಪ್‌ ಹೀರೋ.. ! ಆದ್ರೆ ಗಿಲ್, ಜೈಸ್ವಾಲ್, ಇಶಾನ್ ಕಿಶನ್ ಅಲ್ಲವೇ ಅಲ್ಲ..!

ಹಿರಿಯ ವೇಗಿಗಳ ಅನುಪಸ್ಥಿತಿಯಲ್ಲಿ ಅರ್ಶ್‌ದೀಪ್‌ ಸಿಂಗ್‌ ಹಾಗೂ ಮುಕೇಶ್‌ ಕುಮಾರ್‌ ಮೊದಲ ಪಂದ್ಯದಲ್ಲಿ ತಕ್ಕಮಟ್ಟಿಗಿನ ಪ್ರದರ್ಶನ ನೀಡಿದ್ದರು. ಇನ್ನು ಬ್ಯಾಟಿಂಗ್‌ ಕೂಡ ಮಾಡಬಲ್ಲರು ಎನ್ನುವ ಕಾರಣಕ್ಕೆ ಅಕ್ಷರ್‌ ಪಟೇಲ್‌ ಆಡುವ ಹನ್ನೊಂದರಲ್ಲಿ ಉಳಿಯುವುದು ಬಹುತೇಕ ಖಚಿತ. ಆಗ, ಒಂದು ಸ್ಥಾನಕ್ಕಾಗಿ ಕುಲ್ದೀಪ್‌ ಹಾಗೂ ಚಹಲ್‌ ನಡುವೆ ಸ್ಪರ್ಧೆ ಏರ್ಪಡಲಿದೆ.

ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ಒತ್ತಡ ನಿರ್ವಹಣೆಯಲ್ಲಿ ಮೇಲುಗೈ ಸಾಧಿಸಿದ್ದ ವಿಂಡೀಸ್‌, ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ತಂಡದಲ್ಲಿರುವ ‘ಟಿ20 ತಜ್ಞ’ ಆಟಗಾರರು ಸಂಘಟಿತ ಆಟವಾಡಿದರೆ, ಭಾರತಕ್ಕೆ ಮತ್ತೊಂದು ಸೋಲು ಎದುರಾದರೂ ಅಚ್ಚರಿಯಿಲ್ಲ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಇಶಾನ್ ಕಿಶನ್‌, ಶುಭ್‌ಮನ್‌ ಗಿಲ್‌, ಯಶಸ್ವಿ ಜೈಸ್ವಾಲ್‌, ಸೂರ್ಯಕುಮಾರ್ ಯಾದವ್, ತಿಲಕ್‌ ವರ್ಮಾ, ಹಾರ್ದಿಕ್‌ ಪಾಂಡ್ಯ(ನಾಯಕ), ಸಂಜು ಸ್ಯಾಮ್ಸನ್‌, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್/ಯುಜುವೇಂದ್ರ ಚಹಲ್‌, ಅರ್ಶ್‌ದೀಪ್‌ ಸಿಂಗ್, ಮುಕೇಶ್‌ ಕುಮಾರ್.

ವಿಂಡೀಸ್‌: ಬ್ರೆಂಡನ್ ಕಿಂಗ್‌, ಕೈಲ್‌ ಮೇಯರ್ಸ್‌, ಚಾರ್ಲ್ಸ್‌, ನಿಕೋಲಸ್ ಪೂರನ್‌, ಶಿಮ್ರೊನ್ ಹೆಟ್ಮೇಯರ್‌, ರೋವ್ಮನ್ ಪೋವೆಲ್‌(ನಾಯಕ), ಜೇಸನ್ ಹೋಲ್ಡರ್‌, ರೊಮ್ಯಾರಿಯೊ ಶೆಫರ್ಡ್‌, ಅಕೇಲ್ ಹೊಸೈನ್‌, ಅಲ್ಜಾರಿ ಜೋಸೆಫ್‌, ಮೆಕಾಯ್‌.

ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಜಿಯೋ ಸಿನಿಮಾ, ಡಿಡಿ ಚಂದನ, ಡಿಡಿ ಸ್ಪೋರ್ಟ್ಸ್‌.

ಪಿಚ್‌ ರಿಪೋರ್ಟ್

ಇಲ್ಲಿನ ಪಿಚ್‌ ನಿಧಾನಗತಿಯ ಪಿಚ್‌ ಆಗಿದ್ದು, ಕಳೆದ 3 ಟಿ20 ಪಂದ್ಯಗಳ ಮೊದಲ ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 146, 157, 163 ರನ್‌ ದಾಖಲಾಗಿತ್ತು. ಇಲ್ಲಿ ಇನ್ನಿಂಗ್ಸ್‌ನುದ್ದಕ್ಕೂ ತಾಳ್ಮೆಯುತ ಆಟದ ಅವಕಶ್ಯತೆ ಇದೆ. ಸ್ಪಿನ್ನರ್‌ಗಳು ನಿರ್ಣಾಯಕ ಪಾತ್ರ ವಹಿಸಬಹುದು. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯೂ ಇದೆ.

Latest Videos
Follow Us:
Download App:
  • android
  • ios