ಭಾರತದ ಭವಿಷ್ಯದ ತಾರೆಯನ್ನು ಗುರುತಿಸಿದ ವಿಶ್ವಕಪ್‌ ಹೀರೋ.. ! ಆದ್ರೆ ಗಿಲ್, ಜೈಸ್ವಾಲ್, ಇಶಾನ್ ಕಿಶನ್ ಅಲ್ಲವೇ ಅಲ್ಲ..!

ಅಂತಾರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆ ಪಂದ್ಯದಲ್ಲೇ ಮಿಂಚಿದ ಪ್ರತಿಭಾನ್ವಿತ ಬ್ಯಾಟರ್
ಭಾರತದ ಭವಿಷ್ಯದ ತಾರೆ ಎಂದು ಬಣ್ಣಿಸಿದ ಮಾಜಿ ಕ್ರಿಕೆಟಿಗ ಆರ್‌ ಪಿ ಸಿಂಗ್
ಅಷ್ಟಕ್ಕೂ ಆರ್‌ ಪಿ ಸಿಂಗ್ ಹೇಳಿದ ಆ ಕ್ರಿಕೆಟಿಗ ಯಾರು ಗೊತ್ತಾ?

India World Cup Winning Star RP Singh Finds Future Hidden In This Youngster kvn

ಪೋರ್ಟ್‌ ಆಫ್ ಸ್ಪೇನ್‌(ಆ.05): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತದ ಯುವ ಪಡೆ ಕಣಕ್ಕಿಳಿದಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ, ಮೊದಲ ಪಂದ್ಯದಲ್ಲೇ 4 ರನ್‌ಗಳ ವಿರೋಚಿತ ಸೋಲು ಅನುಭವಿಸಿದೆ. ಈ ಸೋಲಿನ ಹೊರತಾಗಿಯೂ ಟೀಂ ಇಂಡಿಯಾ ಪಾಲಿಗೆ ಒಂದು ಹೊಸ ಅಸ್ತ್ರ ಸಿಕ್ಕಿದೆ. ವೆಸ್ಟ್ ಇಂಡೀಸ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಪ್ರತಿಭಾನ್ವಿತ ಯುವ ಬ್ಯಾಟರ್ ತಿಲಕ್‌ ವರ್ಮಾ ಭಾರತ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ತಾವಾಡಿದ ಮೊದಲ ಪಂದ್ಯದಲ್ಲೇ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ತಾವೆಷ್ಟು ಅಪಾಯಕಾರಿ ಬ್ಯಾಟರ್ ಆಗಬಲ್ಲೇ ಎನ್ನುವ ಸುಳಿವನ್ನು ಬಿಚ್ಚಿಟ್ಟಿದ್ದಾರೆ.

ಈಗಾಗಲೇ ಕಳೆದ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ತಮ್ಮದೇ ಆದ ಛಾಪು ಮೂಡಿಸಿರುವ ತಿಲಕ್ ವರ್ಮಾ, ದೇಶಿ ಕ್ರಿಕೆಟ್‌ನಲ್ಲೂ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಅಂತಾರಾಷ್ಟ್ರೀಯ ಪಾದಾರ್ಪಣೆ ಪಂದ್ಯದಲ್ಲಿ ತಾವೆದುರಿಸಿದ ಎರಡನೇ ಎಸೆತದಲ್ಲೇ ಮಾರಕ ವೇಗಿ ಅಲ್ಜಾರಿ ಜೋಸೆಫ್ ಬೌಲಿಂಗ್‌ನಲ್ಲಿ ನೇರವಾಗಿ ಡೀಪ್‌ ಸ್ಕ್ವೇರ್ ಲೆಗ್‌ನತ್ತ ಚೆಂಡನ್ನು ಸಿಕ್ಸರ್‌ಗಟ್ಟಿದ್ದರು. ಇದಾದ ಮರು ಎಸೆತದಲ್ಲೇ ತಿಲಕ್ ವರ್ಮಾ, ಡೀಪ್‌ ಮಿಡ್‌ ವಿಕೆಟ್‌ನತ್ತ ಸಿಕ್ಸರ್‌ ಬಾರಿಸಿ ಅಬ್ಬರಿಸಿದ್ದರು.

ಅನಗತ್ಯ ರೆಸ್ಟ್​ನಿಂದ ಇನ್​ಫಾರ್ಮ್ ಕೊಹ್ಲಿಯ ರಿದಮ್​ಗೆ ಬ್ರೇಕ್..?

ತಿಲಕ್ ವರ್ಮಾ ಅವರ ಬ್ಯಾಟಿಂಗ್ ಶೈಲಿಯನ್ನು ವಿಶ್ಲೇಷಿಸಿದ, ಚೊಚ್ಚಲ ಟಿ20 ವಿಶ್ವಕಪ್ ಹೀರೋ ಆರ್‌ ಪಿ ಸಿಂಗ್, "ಈತ ಟೀಂ ಇಂಡಿಯಾದ ಭವಿಷ್ಯದ ಸೂಪರ್ ಸ್ಟಾರ್" ಎಂದು ವರ್ಣಿಸಿದ್ದಾರೆ. "ಇದೊಂದು ನಿಜಕ್ಕೂ ಅತ್ಯದ್ಭುತ ಇನಿಂಗ್ಸ್ ಆಗಿತ್ತು. ಭಾರತ ಕ್ರಿಕೆಟ್ ತಂಡದ ಭವಿಷ್ಯ ಈತನ ಬಳಿಯಿದೆ ಎಂದು ನನಗನಿಸುತ್ತಿದೆ. ನಾವೆಲ್ಲರೂ ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟರ್‌ಗಳನ್ನು ಎದುರು ನೋಡುತ್ತಿದ್ದೆವು. ಈಗ ತಿಲಕ್ ವರ್ಮಾ, ಆ ಕೊರತೆ ನೀಗಿಸುವ ಭರವಸೆ ಮೂಡಿಸಿದ್ದಾರೆ. ಅವರು ಸಿಕ್ಸರ್‌ ಮೂಲಕವೇ ತಮ್ಮ ರನ್ ಖಾತೆ ತೆರೆದರು ಹಾಗೂ ಮರು ಎಸೆತದಲ್ಲಿ ಮತ್ತೊಂದು ಸಿಕ್ಸರ್ ಚಚ್ಚಿದರು. ಇನ್ನು ಅವರು ಬಾರಿಸಿದ ಮೂರನೇ ಸಿಕ್ಸರ್‌ ನನಗೆ ಮತ್ತಷ್ಟು ಖುಷಿ ಕೊಟ್ಟಿತು. ಎಕ್ಸ್‌ಟ್ರಾ ಕವರ್ ಭಾಗದಲ್ಲಿ ಸಿಕ್ಸರ್ ಬಾರಿಸುವುದು ಸುಲಭದ ಮಾತಲ್ಲ" ಎಂದು ಆರ್ ಪಿ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. 

ಪ್ರೀತಿ ಬಲೆಯಲ್ಲಿ National Crush ಸ್ಮೃತಿ ಮಂಧನಾ..! ಆ ಲಕ್ಕಿ ಹುಡುಗ ಯಾರು ಗೊತ್ತಾ?

ವೆಸ್ಟ್ ಇಂಡೀಸ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ತಿಲಕ್‌ ವರ್ಮಾ ಕೇವಲ 22 ಎಸೆತಗಳನ್ನು ಎದುರಿಸಿ ಚುರುಕಿನ 39 ರನ್ ಸಿಡಿಸಿದ್ದರು. ಇದರ ಹೊರತಾಗಿಯೂ ನಿರಂತರವಾಗಿ ವಿಕೆಟ್ ಕಳೆದುಕೊಂಡ ಪರಿಣಾಮ ಟೀಂ ಇಂಡಿಯಾ 4 ರನ್ ಅಂತರದಲ್ಲಿ ವೆಸ್ಟ್ ಇಂಡೀಸ್‌ಗೆ ಶರಣಾಯಿತು. ಭಾರ​ತಕ್ಕೆ 30 ಎಸೆ​ತ​ದಲ್ಲಿ ಗೆಲ್ಲಲು ಕೇವಲ 37 ರನ್‌ ಬೇಕಿತ್ತು. ಆದರೆ 16ನೇ ಓವರ್‌ ಪಂದ್ಯದ ಗತಿ ಬದ​ಲಿ​ಸಿತು. ಹಾರ್ದಿಕ್‌ ಹಾಗೂ ಸ್ಯಾಮ್ಸನ್‌ ಇಬ್ಬರೂ ಔಟಾ​ದರು. ಇದು ತಂಡದ ಸೋಲಿಗೆ ಪ್ರಮುಖ ಕಾರ​ಣ​ವೆ​ನಿ​ಸಿ​ತು.

Latest Videos
Follow Us:
Download App:
  • android
  • ios