ಕೇವಲ 16 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಹಾರ್ದಿಕ್ ದಾಖಲೆ, ಸೌತ್ ಆಫ್ರಿಕಾಗೆ 232 ರನ್ ಟಾರ್ಗೆಟ್ ನೀಡಲಾಗಿದೆ. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಟೀಂ ಇಂಡಿಯಾ 5ನೇ ಹಾಗೂ ಅಂತಿಮ ಟಿ20 ಪಂದ್ಯ ಗೆದ್ದು ಟ್ರೋಫಿ ಗೆಲುವಿನ ವಿಶ್ವಾಸದಲ್ಲಿದೆ.
ಅಹಮ್ಮದಾಬಾದ್ (ಡಿ.19) ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಸರಣಿಯ ಕೊನೆಯ ಹಾಗೂ 5ನೇ ಟಿ20 ಪಂದ್ಯ ಕುತೂಹಲ ಘಟ್ಟ ತಲುಪಿದೆ. ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಸೇರಿದಂತೆ ಇತರರ ಸ್ಫೋಟಕ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 232 ರನ್ ಸಿಡಿಸಿದೆ. ಹಾರ್ದಿಕ್ ಪಾಂಡ್ಯ ದಾಖಲೆ ನಿರ್ಮಿಸಿದ್ದಾರೆ. ಸೌತ್ ಆಫ್ರಿಕಾ ತಂಡಕ್ಕೆ ಸರಣಿ ಉಳಿಸಿಕೊಳ್ಳಲು ಪಂದ್ಯ ಗೆಲ್ಲಲಬೇಕು. ನಾಲ್ಕನೇ ಟಿ20 ಪಂದ್ಯ ಮಂಜು ಕಾರಣ ರದ್ದಾಗಿತ್ತು. ಹೀಗಾಗಿ ಇಂದಿನ ಪಂದ್ಯ ಭಾರಿ ಮಹತ್ವ ಪಡೆದಿದೆ. ಸರಣಿಯಲ್ಲಿ 2-1 ಮುನ್ನಡೆಯಲ್ಲಿರುವ ಟೀಂ ಇಂಡಿಯಾ ಟ್ರೋಫಿ ಗೆಲುವಿನ ವಿಶ್ವಾಸದಲ್ಲಿದೆ.
ತಿಲಕ್ ವರ್ಮಾ-ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್
ತಿಲಕ್ ವರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟ ಟೀಂ ಇಂಡಿಯಾದ ಬೃಹತ್ ಮೊತ್ತಕ್ಕೆ ಕಾರಣವಾಯಿತು. ಇಬ್ಬರು ಸತತ ಬೌಂಡರಿ ಸಿಕ್ಸರ್ ಮೂಲಕ ಸೌತ್ ಆಫ್ರಿಕಾ ಬೌಲರ್ಸ್‌ಗೆ ತಲೆನೋವಾದರು. ತಿಲಕ್ ವರ್ಮಾ ಹಾಫ್ ಸೆಂಚುರಿ ಸಿಡಿಸಿದ ಬೆನ್ನಲ್ಲೇ ಹಾರ್ಧಿಕ್ ಪಾಂಡ್ಯ ಅರ್ಧಶತಕ ಸಿಡಿಸಿದ್ದಾರೆ. ವಿಶೇಷ ಅಂದರೆ ಹಾರ್ದಿಕ್ ಕೇವಲ 16 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ಭಾರತದ ಪರ ಅತೀವೇಗದಲ್ಲಿ ಹಾಫ್ ಸೆಂಚುರಿ ಸಿಡಿಸಿ 2ನೇ ಬ್ಯಾಟ್ಸ್‌ಮನ್ ಅನ್ನೋ ದಾಖಲೆ ಬರೆದಿದ್ದಾರೆ.
ಟಿ20ಯಲ್ಲಿ ಅತೀವೇಗದ ಹಾಫ್ ಸೆಂಚುರಿಸಿ ಸಿಡಿಸಿದ ಭಾರತದ ಸಾಧಕರು
- ಯುವರಾಜ್ ಸಿಂಗ್ (12 ಎಸೆತ) vs ಇಂಗ್ಲೆಂಡ್, 2007
- ಹಾರ್ದಿಕ್ ಪಾಂಡ್ಯ (16 ಎಸೆತ) vs ಸೌತ್ ಆಫ್ರಿಕಾ, 2025
- ಅಭಿಷೇಕ್ ಶರ್ಮಾ (17 ಎಸೆತ) vs ಇಂಗ್ಲೆಂಡ್, 2025
- ಕೆಲ್ ರಾಹುಲ್ (18 ಎಸೆತ) vs ಸ್ಕಾಟ್‌ಲೆಂಡ್, 2021
- ಸೂರ್ಯಕುಮಾರ್ ಯಾದವ್ (18 ಎಸೆತ) ಸೌತ್ ಆಫ್ರಿಕಾ, 2022
ಇತ್ತ ಸಂಜು ಸ್ಯಾಮನ್ಸ್ ಹಾಗೂ ಅಭಿಷೇಕ್ ಶರ್ಮಾ ಉತ್ತಮ ಆರಂಭ ನೀಡಿದ್ದರು. ಮೊದಲ ವಿಕೆಟ್‌ಗೆ ಈ ಜೋಡಿ 63 ರನ್ ಸಿಡಿಸಿತ್ತು. ಸ್ಯಾಮ್ಸನ್ 22 ಎಸೆತದಲ್ಲಿ 37 ರನ್ ಸಿಡಿಸಿದರು. ಅಭಿಷೇಕ್ ಶರ್ಮಾ 21 ಎಸೆತದಲ್ಲಿ 34 ರನ್ ಸಿಡಿಸಿ ಔಟಾದರು. ಇತ್ತ ನಾಯಕ ಸೂರ್ಯ ಕುಮಾರ್ ಯಾದವ್ ನಿರಾಸೆ ಅನುಭವಿಸಿದರು. ಸೂರ್ಯ ಕುಮಾರ್ ಯಾದವ್ ಕೇವಲ 5 ರನ್ ಸಿಡಿಸಿ ಔಟಾದರು. ಹಾರ್ದಿಕ್ ಪಾಂಡ್ಯ 63 ರನ್ ಸಿಡಿಸಿದರೆ, ತಿಲಕ್ ವರ್ಮಾ ಅಜೇಯ 73 ರನ್ ಸಿಡಿಸಿ ರನೌಟ್ ಆದರೆ. ಈ ಮೂಲಕ 5 ವಿಕೆಟ್ ನಷ್ಟಕ್ಕೆ 231 ರನ್ ಸಿಡಿಸಿತು.


