ಸೌತ್ ಆಫ್ರಿಕಾ ವಿರುದ್ದ 3ನೇ ಟಿ20 ಗೆದ್ದ ಟೀಂ ಇಂಡಿಯಾ, ಸರಣಿಯಲ್ಲಿ 2-1 ಮುನ್ನಡೆ, ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ 3ನೇ ಟಿ20 ಪಂದ್ಯದಲ್ಲಿ 7 ವಿಕೆಟ್ ಗೆಲುವು ದಾಖಲಿಸಿದೆ.

ಧರ್ಮಶಾಲಾ (ಡಿ.18) ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಸರಣಿ ತೀವ್ರ ಕುತೂಹಲಕ್ಕೆ ಕಾರಣವಾಗುತ್ತಿದೆ. ಮೊದಲ ಪಂದ್ಯ ಭಾರತ ಗೆದ್ದುಕೊಂಡಿದ್ದರೆ,2ನೇ ಪಂದ್ಯ ಸೌತ್ ಆಫ್ರಿಕಾ ಗೆದ್ದುಕೊಂಡಿತ್ತು. ಇದೀಗ ಕಮ್‌ಬ್ಯಾಕ್ ಮಾಡಿದ ಭಾರತ 3ನೇ ಟಿ20 ಪಂದ್ಯ ಗೆದ್ದುಕೊಂಡಿದೆ. ಮಾರಕ ಬೌಲಿಂಗ್ ದಾಳಿ ಮೂಲಕ 117 ರನ್‌ಗೆ ಸೌತ್ ಆಫ್ರಿಕಾ ಕಟ್ಟಿಹಾಕಿದ ಭಾರತ, ಈ ಕುರಿಯನ್ನು15.5 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು.7 ವಿಕೆಟ್ ಗೆಲುವು ದಾಖಲಿಸಿದ ಭಾರತ 5 ಪಂದ್ಯಗಳ ಟಿ20 ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.

118 ರನ್ ಟಾರ್ಗೆಟ್

ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ , 118 ರನ್ ಟಾರ್ಗೆಟ್ ಪಡೆದಿತ್ತು. ಸುಲಭ ಟಾರ್ಗೆಟ್ ಪಡೆದ ಟೀಂ ಇಂಡಿಯಾ ಅಷ್ಟೇ ಉತ್ತಮ ಆರಂಭ ಪಡೆದಿತ್ತು. ಅಭಿಷೇಕ್ ಶರ್ಮಾ ಹಾಗೂ ಶುಬಮನ್ ಗಿಲ್ ಮೊದಲ ವಿಕೆಟ್‌ಗೆ 60 ರನ್ ಜೊತೆಯಾಟ ನೀಡಿದರು. ಅಭಿಷೇಕ್ ಶರ್ಮಾ 18 ಎಸೆತದಲ್ಲಿ 3 ಬೌಂಡರಿ ಹಾಗೂ ಮೂರು ಸಿಕ್ಸರ್ ಮೂಲಕ 45 ರನ್ ಸಿಡಿಸಿದರು. ಇತ್ತ ಶುಬಮನ್ ಗಿಲ್ 28 ರನ್ ಸಿಡಿಸಿ ಔಟಾದರು. ಇತ್ತ ನಾಯಕ ಸೂರ್ಯಕುಮಾರ್ ಯಾದವ್ 12 ರನ್ ಸಿಡಿಸಿ ಔಟಾದರು.

ತಿಲಕ್ ವರ್ಮಾ ಹಾಗೂ ಶಿವಂ ದುಬೆ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದರು. ವರ್ಮಾ ಅಜೇಯ 25 ರನ್ ಸಿಡಿಸಿದರು. ಭಾರತ 15.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಸೌತ್ ಆಫ್ರಿಕಾ ಇನ್ನಿಂಗ್ಸ್

ಸೌತ್ ಆಫ್ರಿಕಾ ವಿರುದ್ದದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ದಿಟ್ಟ ಬೌಲಿಂಗ್ ಪ್ರದರ್ಶನ ನೀಡಿತ್ತು. ಸೌತ್ ಆಫ್ರಿಕಾ ತಂಡವನ್ನು ಕೇವಲ 117ರನ್‌ಗೆ ಆಲೌಟ್ ಮಾಡುವಲ್ಲಿ ಭಾರತ ಯಶಸ್ವಿಯಾಗಿತ್ತು. ಟೀಂ ಇಂಡಿಯಾ ಪರ 6 ಪ್ರಮುಖ ಬೌಲರ್ಸ್ ವಿಕೆಟ್ ಕಬಳಿಸಿದ್ದಾರೆ. ಸೌತ್ ಆಫ್ರಿಕಾ ನಾಯಕ ಆ್ಯಡಿನ್ ಮರ್ಕ್ರಮ್ ಹೊರತುಪಡಿಸಿ ಇನ್ಯಾರು ಹೋರಾಟ ನೀಡಲಿಲ್ಲ. ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ ಸಾಧಾರಣ ಮೊತ್ತಕ್ಕೆ ಆಲೌಟ್ ಆಗಿತ್ತು. ಆ್ಯಡಿನ್ ಮರ್ಕ್ರಮ್ 46 ಎಸೆತದಲ್ಲಿ 61 ರನ್ ಸಿಡಿಸಿದ್ದರು. ಕ್ವಿಂಟನ್ ಡಿಕಾಕ್ ರೀಜಾ ಹೆಂಡ್ರಿಕ್ಸ್, ಡೀವಾಲ್ಡ್, ಸ್ಟಬ್ಸ್ ಸೇರಿದಂತೆ ಸೌತ್ ಆಫ್ರಿಕಾ ಬ್ಯಾಟರ್ ಅಬ್ಬರಿಸಲಿಲ್ಲ. ಹೀಗಾಗಿ 20 ಓವರ್‌ಗಳಲ್ಲಿ 117 ರನ್‌ಗೆ ಆಲೌಟ್ ಆಗಿತ್ತು.

ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಅಬ್ಬರಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 175 ರನ್ ಸಿಡಿಸಿತ್ತು. 176 ರನ್ ಟಾರ್ಗೆಟ್ ಪಡೆದ ಸೌತ್ ಆಫ್ರಿಕಾ , ಭಾರತದ ದಾಳಿಗೆ ತತ್ತರಿಸಿತ್ತು. 12.3 ಓವರ್‌ಗಳಲ್ಲಿ ಕೇವಲ 74 ರನ್‌ಗೆ ಆಲೌಟ್ ಆಗಿತ್ತು. ಮೊದಲ ಟಿ20 ಪಂದ್ಯದಲ್ಲಿ ಭಾರತ 101 ರನ್ ಗೆಲುವು ದಾಖಲಿಸಿತ್ತು. ಆದರೆ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿತ್ತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಸೌತ್ ಆಫ್ರಿಕಾ 213 ರನ್ ಸಿಡಿಸಿತ್ತು. ಟಾರ್ಗೆಟ್ ಚೇಸ್ ಮಾಡಲು ವಿಫಲವಾದ ಟೀಂ ಇಂಡಿಯಾ 162 ರನ್‌ಗೆ ಆಲೌಟ್ ಆಗಿತ್ತು. ಸೌತ್ ಆಫ್ರಿಕಾ 51 ರನ್ ಗೆಲುವು ಕಂಡಿತ್ತು.