10 ವರ್ಷದಿಂದ ಧೋನಿ ಜೊತೆ ಮಾತನಾಡಿಲ್ಲ ಹರ್ಭಜನ್! ಕಾರಣ ಏನು?

ಮಾಜಿ ಕ್ರಿಕೆಟರ್ ಧೋನಿ ಹಾಗೂ ಹರ್ಭಜನ್ ಸಿಂಗ್ ಮಧ್ಯೆ ಎಲ್ಲವೂ ಸರಿ ಇಲ್ಲ. ಅದು ಮತ್ತೊಮ್ಮೆ ಸಾಭಿತಾಗಿದೆ. ಧೋನಿಗೆ ಸಂಬಂಧಿಸಿದಂತೆ ಮತ್ತೊಂದು ಶಾಕಿಂಗ್ ಹೇಳಿಕೆಯನ್ನು ಹರ್ಭಜನ್ ಸಿಂಗ್ ನೀಡಿದ್ದಾರೆ. 
 

harbhajan singh statement on ms dhoni roo

ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ (Indian Former spinner Harbhajan Singh) ಕೂಲ್ ಕ್ಯಾಪ್ಟನ್ ಎಂದೇ ಹೆಸರಾಗಿರುವ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಬಗ್ಗೆ ಅಚ್ಚರಿಯ ವಿಷ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ಧೋನಿ ಜೊತೆ ತಾನು ಮಾತನಾಡುವುದಿಲ್ಲ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. ಸ್ನೇಹಿತರು ಎರಡು ರೀತಿ ಇರ್ತಾರೆ. ಯಾರು ನನ್ನ ಫೋನ್ ರಿಸೀವ್ ಮಾಡ್ತಾರೋ ಅವರಿಗೆ ಮಾತ್ರ ನಾನು ಫೋನ್ ಮಾಡ್ತೇನೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. 

ಹರ್ಭಜನ್ ಸಿಂಗ್ ಹಾಗೂ ಮಹೇಂದ್ರ ಸಿಂಗ್ ಧೋನಿ, 2007ರ ಟಿ -20 ವಿಶ್ವಕಪ್ (World Cup) ಹಾಗೂ 2011ರ ಏಕದಿನ ವಿಶ್ವಕಪ್ ನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸಂದರ್ಶನವೊಂದರಲ್ಲಿ ಹರ್ಭಜನ್ ಸಿಂಗ್, ಧೋನಿ ಬಗ್ಗೆ ಮಾತನಾಡಿದ್ದಾರೆ. ನಾನು ಧೋನಿ ಜೊತೆ ಮಾತನಾಡುವುದಿಲ್ಲ. ಮಾತು ನಿಲ್ಲಿಸಿ ಸುಮಾರು 10 ವರ್ಷ ಕಳೆದಿದೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ICC Champions Trophy: ಪಾಕಿಸ್ತಾನದ ಮರ್ಯಾದೆ ಕಳೆದ ಭಾರತ, ನೆರೆ ರಾಷ್ಟ್ರಕ್ಕೆ ಬಿಸಿಸಿಐ ಮತ್ತೊಂದು ಶಾಕ್!

ನಾನು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದಲ್ಲಿ ಆಡ್ತಿದ್ದ ಸಮಯದಲ್ಲಿ ನಮ್ಮಿಬ್ಬರ ಮಧ್ಯೆ ಮಾತುಕತೆ ಆಗ್ತಿತ್ತು. ಅದಾಗಿ ಈಗ ಹತ್ತು ವರ್ಷ ಕಳೆದಿದೆ ಎಂದು ಬಜ್ಜಿ ಹೇಳಿದ್ದಾರೆ. ಧೋನಿ ಜೊತೆ ಮಾತು ನಿಲ್ಲಿಸಲು ನನ್ನ ಬಳಿ ಯಾವುದೇ ಕಾರಣವಿಲ್ಲ. ಧೋನಿ ಬಳಿ ಇದ್ರೂ ಇರಬಹುದು ಎಂದು ಹರ್ಭಜನ್ ಹೇಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ನಾನು ಆಟವಾಡ್ತಿದ್ದ ವೇಳೆಯೂ ನಾವಿಬ್ಬರು ಮೈದಾನದಲ್ಲಿ ಮಾತ್ರ ಮಾತನಾಡ್ತಿದ್ದೆವು. ಮೈದಾನದಿಂದ ಹೊರಗೆ ಮಾತಿರಲಿಲ್ಲ. ನಾನು ಅವರ ರೂಮ್ ಗೆ ಹೋಗ್ತಿರಲಿಲ್ಲ, ಅವರು ನನ್ನ ರೂಮ್ಗೆ ಬರ್ತಿರಲಿಲ್ಲ ಎಂದಿದ್ದಾರೆ ಬಜ್ಜಿ. ನನಗೆ ಅವರ ಬಗ್ಗೆ ಯಾವುದೇ ವಿರೋಧವಿಲ್ಲ. ಅವರಿಗೂ ಇಲ್ಲದಿರಬಹುದು. ಒಂದ್ವೇಳೆ ಇದ್ರೆ ಅವರು ಹೇಳ್ಬಹುದಿತ್ತು. ನನ್ನ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ ಅವರು ಈ ಮೊದಲೇ ಹೇಳ್ತಿದ್ರು ಎಂದು ಹರ್ಭಜನ್ ಹೇಳಿದ್ದಾರೆ. 

ನಾನು ಧೋನಿಗೆ ಎಂದೂ ಫೋನ್ ಮಾಡುವ ಪ್ರಯತ್ನ ನಡೆಸಿಲ್ಲ ಎಂದು ಹರ್ಭಜನ್ ಹೇಳಿದ್ದಾರೆ. ನನ್ನ ಫೋನ್ ರಿಸೀವ್ ಮಾಡುವವರಿಗೆ ಮಾತ್ರ ನಾನು ಫೋನ್ ಮಾಡ್ತೇನೆ. ನನ್ನ ಸ್ನೇಹಿತರ ಜೊತೆ ನಾನು ಸಂಪರ್ಕದಲ್ಲಿ ಇರ್ತೇನೆ. ನಾನು ಒಂದೆರಡು ಬಾರಿ ಕರೆ ಮಾಡಿದ್ರೂ ನಿಮ್ಮಿಂದ ಉತ್ತರ ಬಂದಿಲ್ಲ ಎಂದಾಗ ನಾನು ಮತ್ತೆ ಕರೆ ಮಾಡಲು ಹೋಗೋದಿಲ್ಲ. ನನಗೆ ಎಷ್ಟು ಅವಶ್ಯವೋ ಅಷ್ಟಕ್ಕೆ ಅವರನ್ನು ಸೀಮಿತಗೊಳಿಸುತ್ತೇನೆ. ಸಂಬಂಧವು ಯಾವಾಗಲೂ ಎರಡೂ ಪಕ್ಷಗಳ ಸಹಕಾರವನ್ನು ಬಯಸುತ್ತದೆ. ನಾನು ನಿಮ್ಮನ್ನು ಗೌರವಿಸಿದರೆ, ನೀವು ನನ್ನನ್ನು ಗೌರವಿಸುತ್ತೀರಿ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಬಜ್ಜಿ ಹೇಳಿಕೊಂಡಿದ್ದಾರೆ. 

ಸರ್‌ ಡಾನ್ ಬ್ರಾಡ್ಮನ್‌ ಭಾರತ ವಿರುದ್ದ ಪಂದ್ಯದಲ್ಲಿ ಧರಿಸಿದ್ದ ಬ್ಯಾಗಿ ಗ್ರೀನ್ ₹2.63 ಕೋಟಿಗೆ ಹರಾಜು!

2015ರಲ್ಲಿ ಕೊನೆಯ ಬಾರಿ ಧೋನಿ ಹಾಗೂ ಹರ್ಭಜನ್, ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯವನ್ನು ಆಡಿದ್ದರು. 2015ರ ಏಕದಿನ ಪಂದ್ಯದ ನಂತ್ರ ಹರ್ಭಜನ್ ಹಾಗೂ ಯುವರಾಜ್ ಸಿಂಗ್ ಅವರನ್ನು ಟೀಂ ಇಂಡಿಯಾದಿಂದ ಹೊರಗಿಡಲಾಗಿತ್ತು. 2015ರ ನಂತ್ರ ಹರ್ಭಜನ್ ಸಿಂಗ್ ಯಾವುದೇ ಪಂದ್ಯವನ್ನು ಆಡಲಿಲ್ಲ. ಅವರು 2021ರಲ್ಲಿ ಎಲ್ಲ ರೀತಿಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದರು.  ಹರ್ಭಜನ್ ಸಿಂಗ್, ಭಾರತದ ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. 2007ರ ಟಿ20 ವಿಶ್ವಕಪ್‌ನಲ್ಲಿ ಏಳು ಹಾಗೂ 2011ರ ಏಕದಿನ ವಿಶ್ವಕಪ್‌ನಲ್ಲಿ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದ್ದರು. ಹರ್ಭಜನ್ 2018-2020ರ ನಡುವೆ ಚೆನ್ನೈ ತಂಡದಲ್ಲಿ ಆಡಿದ್ದರು. 

ಇಬ್ಬರ ಗಲಾಟೆ ಇದೇ ಮೊದಲಲ್ಲ : ಹರ್ಭಜನ್, ಧೋನಿ ಬಗ್ಗೆ ಆಗಾಗ ತಮ್ಮ ಪ್ರತಿಕ್ರಿಯೆ ನೀಡ್ತಿರುತ್ತಾರೆ.  ಹರ್ಭಜನ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಧೋನಿ ನಡುವಿನ ವಿವಾದ ಅನೇಕ ಬಾರಿ ಸುದ್ದಿಯಾಗಿದೆ.  
 

Latest Videos
Follow Us:
Download App:
  • android
  • ios