Asianet Suvarna News Asianet Suvarna News

Ind vs SA: ಗುವಾಹಟಿ ಸ್ಟೇಡಿಯಂನಲ್ಲಿ ಪಂದ್ಯಕ್ಕೆ ಅಡ್ಡಿಪಡಿಸಿದ ಹಾವು!

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 2ನೇ ಟಿ20 ಪಂದ್ಯ ವಿಶೇಷ ಅತಿಥಿಯ ಕಾರಣದಿಂದಾಗಿ ಕೆಲ ಕಾಲ ಅಡ್ಡಿಯಾಯಿತು. ಪಂದ್ಯದ 7ನೇ ಓವರ್‌ ಮುಕ್ತಾಯದ ವೇಳೆ ಮೈದಾನದಲ್ಲಿ ಹಾವು ಬಂದಿದ್ದರಿಂದ ಪಂದ್ಯವನ್ನು ಕೆಲ ಹೊತ್ತು ನಿಲ್ಲಿಸಲಾಗಿತ್ತು.
 

Guwahati  2nd T20I india vs South Africa Snake interrupts the play san
Author
First Published Oct 2, 2022, 7:48 PM IST

ಗುವಾಹಟಿ (ಅ.2): ಕ್ರಿಕೆಟ್‌ ಮೈದಾನದಲ್ಲಿ ನಾಯಿ, ಪಕ್ಷಿ, ಕೀಟಗಳ ಅಡ್ಡಿ ಸಾಮಾನ್ಯ. ಆದರೆ, ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 2ನೇ ಟಿ20 ಪಂದ್ಯದ ವೇಳೆ ಕೇರೆ ಹಾವು ಪಂದ್ಯಕ್ಕೆ ಅಡ್ಡಿ ಮಾಡಿದೆ. ಪಂದ್ಯದ 7ನೇ ಓವರ್‌ನ ವೇಳೆ ಮೈದಾನದಲ್ಲಿ ಹಾವು ಕಾಣಿಸಿಕೊಂಡಿದ್ದನ್ನು ನೇರಪ್ರಸಾರ ವಾಹಿನಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲಿಯೇ ಮೈದಾನಕ್ಕೆ ಓಡಿಬಂದ ಸಿಬ್ಬಂದಿಗಳು, ಕೋಲಿನಿಂದ ಹಾವನ್ನು ಮೈದಾನದಿಂದ ಹೊರಹಾಕುವಲ್ಲಿ ಯಶಸ್ವಿಯಾದರು. ಆದರೆ ಮೈದಾನದಲ್ಲಿ ಹಾವು ಕಾಣಿಸಿಕೊಂಡಿದ್ದನ್ನು ನೋಡಿದ ಪ್ರೇಕ್ಷಕ ಮಾತ್ರ ಅಚ್ಚರಿ ವ್ಯಕ್ತಪಡಿಸಿದ್ದಾನೆ. ಕೆಲವೇ ಹೊತ್ತಿನಲ್ಲಿ ಈ ವಿಚಾರ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಟ ಮಟ್ಟದಲ್ಲಿ ಟ್ರೆಂಡಿಂಗ್‌ ಆಯಿತು.ಕ್ರಿಕೆಟ್‌ ಮೈದಾನದಲ್ಲಿ ಹಾವು ಕಾಣಿಸಿಕೊಂಡ ಘಟನೆಗಳು ವಿಶ್ವದ ಇತರೆಡೆಗಳಲ್ಲಿ ಅಗಿದ್ದರೂ ಭಾರತದಲ್ಲಿ ಮಾತ್ರ ಈವರೆಗೂ ಆಗಿರಲಿಲ್ಲ. ಒಂದೇ ಪಂದ್ಯದಲ್ಲಿ ಎರಡು ಹಾವುಗಳು ಮೈದಾನದಲ್ಲಿ ಕಾಣಿಸಿಕೊಂಡಿವೆ. ಗುವಾಹಟಿಯ ಬರ್ಸಾಪರ ಕ್ರಿಕೆಟ್‌ ಸ್ಟೇಡಿಯಂನ ಪಕ್ಕವೇ ದೊಡ್ಡ ಅರಣ್ಯವಿದೆ. ಆ ಕಾರಣದಿಂದಲೂ ಈ ಮೈದಾನದಲ್ಲಿ ಅಳೆ ಅಡ್ಡಿ ಹಾಗೂ ಇಂಥ ಘಟನೆಗಳು ಸಾಮಾನ್ಯವಾಗಿದೆ. ಹಾಲಿ ಪಂದ್ಯದ ಟಾಸ್‌ ಸಮಯದಲ್ಲಿಯೂ ಇನ್ನೊಂದು ಹಾವು ಕಾಣಿಸಿಕೊಂಡಿತ್ತು. ಆದರೆ. ಸಿಬ್ಬಂದಿಗಳು ಮಾತ್ರ ಇದನ್ನು ಲೆಕ್ಕಕ್ಕೇ ಇಲ್ಲದಂತೆ ಹೊರಹಾಕುತ್ತಿದ್ದರು. ಆದರೆ, ಇದನ್ನು ನೋಡಿದ ದಕ್ಷಿಣ ಆಫ್ರಿಕಾದ ಕ್ರಿಕೆಟ್‌ ಪ್ಲೇಯರ್‌ಗಳಿಗೆ ಮಾತ್ರ ಹೆದರಿಕೆ ಶುರುವಾಗಿತ್ತು. 


ಕ್ರಿಕೆಟ್‌ ವಿಶ್ಲೇಷಕ ಹರ್ಷ ಭೋಗ್ಲೆ ಕೂಡ ಈ ಬಗ್ಗೆ ಬರೆದುಕೊಂಡಿದ್ದಾರೆ. 'ಕ್ರಿಕೆಟ್‌ ಮೈದಾನದಲ್ಲಿ ನಾವು ಹಾವು (Snake) ಕಂಡಿದ್ದು ಇದೇ ಮೊದಲು. ಆದರೆ ಇಲ್ಲಿ ಎರಡು ಹಾವುಗಳು ಕಾಣಿಸಿಕೊಂಡಿವೆ. ಆದರೆ, ಮೈದಾನದ ಸಿಬ್ಬಂದಿ ಬಹಳ ಕ್ವಿಕ್‌ ಆಗಿದ್ದರು. ಆದಷ್ಟು ಬೇಗ ಅದನ್ನು ಹಿಡಿದು ಹೊರಹಾಕಿದ್ದಾರೆ' ಎಂದು ಟ್ವೀಟ್‌ ಮಾಡಿದ್ದಾರೆ.

ಗುವಾಹಟಿ ಸ್ಟೇಡಿಯಂನಲ್ಲಿ ಪ್ರತಿ ಬಾರಿ ಪಂದ್ಯ ನಡೆದಾಗಲೂ ಒಂದಲ್ಲ ಒಂದು ವಿಶೇಷತೆಗಳು ಇರುತ್ತವೆ. ಕಳೆದ ಬಾರಿ ಇಲ್ಲಿ ಪಂದ್ಯ ನಡೆದಾಗ ಮಳೆ ಅಡ್ಡಿ ಪಡಿಸಿತ್ತು. ಈ ವೇಳೆ ಪಿಚ್‌ಅನ್ನು ಒಣಗಿಸಲು ಮೈದಾನದ ಸಿಬ್ಬಂದಿಗಳು ಹೇರ್‌ಡ್ರಯರ್‌ಗಳನ್ನು ಬಳಸಿದ್ದನ್ನು ಕ್ರಿಕೆಟ್‌ ಅಭಿಮಾನಿಗಳು ಬಿಸಿಸಿಐಅನ್ನು ಕೆಣಕಲು ಬಳಸಿದ್ದರು. ವಿಶ್ವದ ಶ್ರೀಮಂತ ಕ್ರಿಕೆಟ್‌ ಮಂಡಳಿಯಾಗಿದ್ದರೂ, ಪಿಚ್‌ನಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಹೊಂದಿರದ ಅಸ್ಸಾಂ ಕ್ರಿಕೆಟ್‌ ಸಂಸ್ಥೆ (Assam Cricket Stadium) ಹಾಗೂ ಬಿಸಿಸಿಐಅನ್ನು(BCCI) ಲೇವಡಿ ಮಾಡಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗೆ ಭಾರತ ತಂಡ: ರಜತ್‌ ಪಾಟಿದಾರ್‌, ಮುಖೇಶ್‌ ಕುಮಾರ್‌ ಹೊಸಮುಖ!

ಹಿಂದೊಮ್ಮೆ ದಕ್ಷಿಣ ಆಫ್ರಿಕಾ ವಿರುದ್ಧದ ಹೀರೋ ಕಪ್ (Hero Cup) ಸೆಮಿಫೈನಲ್‌ನಲ್ಲಿ, ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್‌ನಲ್ಲಿ ಮುಂಗುಸಿಯೊಂದು ಈಡನ್ ಗಾರ್ಡನ್ಸ್‌ನೊಳಗೆ ಹಲವು ಬಾರಿ ಪ್ರವೇಶಿಸಿತು ಮತ್ತು ಪಂದ್ಯಕ್ಕೆ ಅಡ್ಡಿಪಡಿಸಿದಾಗಲೆಲ್ಲಾ ದಕ್ಷಿಣ ಆಫ್ರಿಕಾದ ವಿಕೆಟ್ ಪತನಗೊಳುತ್ತಿತ್ತು. ಇದನ್ನು ನೋಡಿದ ಅಭಿಮಾನಿಗಳು ಇದು ಭಾರತಕ್ಕೆ ಉತ್ತಮ ಶಕುನ ಎಂದು ಹೇಳಿದ್ದರು. 

Ind vs SA: ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್‌ ಆಯ್ಕೆ

ಹಾವು ಅಡ್ಡಿಪಡಿಸಿದ್ದು 2ನೇ ಬಾರಿ: ಇನ್ನು ಅಂತಾರಾಷ್ಟ್ರೀಯ ಪಂದ್ಯವೊಂದಕ್ಕೆ ಹಾವು ನುಗ್ಗಿ ಅಡ್ಡಿಯಾಗಿದ್ದು ಇದು 2ನೇ ಬಾರಿ. ಭಾರತದಲ್ಲಿ ನಡೆದ ಅಂತಾರಾಷ್ಟ್ರೀಯ ಪಂದ್ಯಗಳನ್ನು ಲೆಕ್ಕ ಹಾಕುವುದಾದರೆ, 1999ರಲ್ಲಿ ಪಾಕಿಸ್ತಾನ ವಿರುದ್ಧದ ನಡೆದ ಟೆಸ್ಟ್‌ ಪಂದ್ಯವೊಂದರಲ್ಲಿ ಹಾವು ಅಡ್ಡಿಪಡಿಸಿದ ಘಟನೆ ನಡೆದಿತ್ತು.

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಟೀಮ್‌ ಇಂಡಿಯಾ (team India) ದಕ್ಷಿಣ ಅಫ್ರಿಕಾ (South Africa) ವಿರುದ್ಧ ಭರ್ಜರಿಯಾಗಿ ಆಟವಾಡಿದೆ. 13 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 125 ರನ್ ಬಾರಿಸಿದೆ. ಅದ್ಭುತವಾಗಿ ಆಟವಾಡಿದ ಕೆಎಲ್‌ ರಾಹುಲ್‌ (KL Rahul) 28 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಆಕರ್ಷಕ ಸಿಕ್ಸರ್‌ ಒಳಗೊಂಡ 57 ರನ್‌ (Half Century) ಬಾರಿಸಿದರು. ಇದು ಸರಣಿಯಲ್ಲಿ ರಾಹುಲ್‌ ಅವರ 2ನೇ ಅರ್ಧಶತಕವಾಗಿದೆ. ನಾಯಕ ರೋಹಿತ್‌ ಶರ್ಮ ನಿಧಾನಗತಿಯಲ್ಲಿ ಬ್ಯಾಟಿಂಗ್‌ ಮಾಡಿ 37 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ ಇದ್ದ 43 ರನ್‌ ಬಾರಿಸಿ ಔಟಾದರು.

 

Follow Us:
Download App:
  • android
  • ios