ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಗೆಲವು ದಾಖಲಿಸಿರುವ ಟೀಮ್‌ ಇಂಡಿಯಾ ಸರಣಿ ವಶಪಡಿಸಿಕೊಳ್ಳುವ ಗುರಿಯಲ್ಲಿ 2ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿದೆ. ಗುವಾಹಟಿಯಲ್ಲಿ ನಡೆಯಲಿರುವ 2ನೇ ಟಿ20 ಪಂದ್ಯಕ್ಕೆ ಮಳೆ ಭೀತಿ ದೊಡ್ಡದಾಗಿ ಕಾಡಿದೆ. 

ಗುವಾಹಟಿ (ಅ.2): ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ವಶಪಡಿಸಿಕೊಳ್ಳುವ ಇರಾದೆಯಲ್ಲಿರುವ ಟೀಮ್‌ ಇಂಡಿಯಾ ಇಂದು ನಡೆಯಲಿರುವ 2ನೇ ಟಿ20 ಕದನದಲ್ಲಿ ಕಣಕ್ಕಿಳಿದಿದೆ. ಟಾಸ್‌ ಗೆದ್ದಿರುವ ದಕ್ಷಿಣ ಆಫ್ರಿಕಾ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಭಾರತ ತಂಡ ಪಂದ್ಯಕ್ಕಾಗಿ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇನ್ನೊಂದೆಡೆ, ದಕ್ಷಿಣ ಆಫ್ರಿಕಾ ತಂಡ ವೇಗದ ಬೌಲರ್‌ ಲುಂಜಿ ಎನ್‌ಗಿಡಿ ಬದಲಿಗೆ ಸ್ಪಿನ್ನರ್‌ ತಬರೇಜ್‌ ಶಮ್ಸಿಗೆ ಆಡುವ ಬಳಗದಲ್ಲಿ ಅವಕಾಶ ನೀಡಿದೆ. ಭಾರತ ತಂಡ ಪಂದ್ಯಕ್ಕಾಗಿ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇನ್ನೊಂದೆಡೆ, ದಕ್ಷಿಣ ಆಫ್ರಿಕಾ ತಂಡ ವೇಗದ ಬೌಲರ್‌ ಲುಂಜಿ ಎನ್‌ಗಿಡಿ ಬದಲಿಗೆ ಸ್ಪಿನ್ನರ್‌ ತಬರೇಜ್‌ ಶಮ್ಸಿಗೆ ಆಡುವ ಬಳಗದಲ್ಲಿ ಅವಕಾಶ ನೀಡಿದೆ. ​​​​​​ತಿರುವನಂತಪುರದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಟೀಮ್‌ ಇಂಡಿಯಾ 8 ವಿಕೆಟ್‌ಗಳ ದೊಡ್ಡ ಗೆಲುವು ಸಾಧಿಸಿತ್ತು. ಆ ಪಂದ್ಯದಲ್ಲಿ ಆರಂಭಿಕ ಆಟಗಾರ ಕೆಎಲ್‌ ರಾಹುಲ್‌ ಹಾಗೂ ಹಾರ್ದಿಕ್ ಪಾಂಡ್ಯ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಗಮನಸೆಳೆದಿದ್ದರೆ, ಬೌಲಿಂಗ್‌ನಲ್ಲಿ ಆರ್ಷದೀಪ್‌ ಸಿಂಗ್‌, ದೀಪಕ್‌ ಚಹರ್‌ ಹಾಗೂ ಹರ್ಷಲ್‌ ಪಟೇಲ್‌ ಉತ್ತಮ ಪ್ರದರ್ಶನ ನೀಡಿದ್ದರು.

ಹಾಗೇನಾದರೂ ಟಾಸ್‌ (Toss) ಗೆದ್ದಿದ್ದಲ್ಲಿ ನಾವೂ ಕೂಡ ಮೊದಲು ಬೌಲಿಂಗ್‌ ಮಾಡಬೇಕು ಎಂದು ನಿರ್ಧರಿಸಿದ್ದೆವು. ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಸಿಕ್ಕಿದೆ. ಮಳೆಯನ್ನೂ ಲೆಕ್ಕಿಸದೇ ಮೈದಾನಕ್ಕೆ ಬಂದಿರುವ ಅಭಿಮಾನಿಗಳಿಗೆ ರಂಜನೆ ನೀಡಲಿದ್ದೇವೆ. ನಾವು ದಕ್ಷಿಣ ಆಫ್ರಿಕಾ ವಿರುದ್ಧ ಟಿ20ಯಲ್ಲಿ (T20I) ಸರಣಿ ಗೆಲ್ಲುವುದು ಬಹಳ ಅಪರೂಪ. ಈ ಬಾರಿ ಈ ಅವಕಾಶ ಮತ್ತೊಮ್ಮೆ ಸಿಕ್ಕಿದೆ. ಸಾಕಷ್ಟು ಪ್ರಯತ್ನವನ್ನಂತೂ ಮಾಡಲಿದ್ದೇನೆ. ಕೆಲ ದಿನಗಳ ವಿಶ್ರಾಂತಿ ಸಿಕ್ಕಿರುವ ಕಾರಣ ಎಲ್ಲರೂ ಸ್ವಲ್ಪ ಫ್ರೆಶ್‌ ಆಗಿದ್ದಾರೆ. ಮಳೆಯ ವಾತಾವರಣ ಇರುವ ಕಾರಣ ಪಿಚ್‌ ಯಾವ ರೀತಿ ವರ್ತಿಸಲಿದೆ ಎನ್ನುವ ಕುತೂಹಲವಿದೆ. ನಾನು ಇಲ್ಲಿಗೆ ಬಂದ ಬಳಿಕ ಮೊದಲು ಮಾಡಿದ ಕೆಲಸ ಪಿಚ್‌ಅನ್ನು ಪರಿಶೀಲನೆ ಮಾಡಿದ್ದೆ. ಹಾಗಾಗಿ ಆರಂಭದಲ್ಲಿ ತುಂಬಾ ಎಚ್ಚರಿಕೆಯಲ್ಲಿ ಬ್ಯಾಟಿಂಗ್‌ ಮಾಡಬೇಕಿದೆ. ನಮ್ಮ ತಂಡದ ಬ್ಯಾಟಿಂಗ್‌ ವಿಭಾಗದ ಬಹಳ ದೃಢವಾಗಿದ್ದು, ದಕ್ಷಿಣ ಆಫ್ರಿಕಾ (South Africa) ಬೌಲಿಂಗ್‌ ಅನ್ನು ಎದುರಿಸಲು ಕಾಯುತ್ತಿದ್ದೇವೆ. ಹಿಂದಿನ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಉಳಿಸಿಕೊಂಡಿದ್ದೇವೆ ಎಂದು ರೋಹಿತ್‌ ಶರ್ಮ (Rohit Sharma) ಟಾಸ್‌ ವೇಳೆ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗೆ ಭಾರತ ತಂಡ: ರಜತ್‌ ಪಾಟಿದಾರ್‌, ಮುಖೇಶ್‌ ಕುಮಾರ್‌ ಹೊಸಮುಖ!

ನಾವು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದೇವೆ. ನಮ್ಮ ಎನರ್ಜಿಯನ್ನು ಮ್ಯಾನೇಜ್‌ ಮಾಡಿಕೊಳ್ಳುವುದು ಬಹಳ ಮುಖ್ಯ. ಪಿಚ್‌ ಬಹಳ ಭಿನ್ನವಾಗಿ ಕಾಣುತ್ತಿದೆ. ಮೊದಲಿಗೆ ಬೌಲಿಂಗ್‌ನಲ್ಲಿ ನಮ್ಮ ಕೆಲಸವನ್ನು ಬಹಳ ಉತ್ತಮವಾಗಿ ನಿಭಾಯಿಸಬೇಕಿದೆ. ಬಳಿಕ ಬ್ಯಾಟ್ಸ್‌ಮನ್‌ಗಳು ತಮ್ಮ ಕೆಲಸ ಮಾಡುತ್ತಾರೆ. ಮೊದಲ ಪಂದ್ಯದಿಂದ ಕೆಲವೊಂದು ಧನಾತ್ಮಕ ಅಂಶ ಪಡೆದಿದ್ದೇವೆ. ತಂಡದಲ್ಲಿ ಒಂದು ಬದಲಾವಣೆ ಮಾಡಿದ್ದು, ವೇಗಿ ಎನ್‌ಗಿಡಿ (India) ಬದಲು ಶಮ್ಸಿ ಸ್ಥಾನ ಪಡೆದಿದ್ದಾರೆ ಎಂದು ಟೆಂಬಾ ಬವುಮಾ (Temba Bavuma) ಟಾಸ್‌ ವೇಳೆ ಹೇಳಿದ್ದಾರೆ.

'ಟಿ20 ಕ್ರಿಕೆಟ್‌ನಲ್ಲಿ ಬೆನ್ ಸ್ಟೋಕ್ಸ್‌ಗಿಂತ ಹಾರ್ದಿಕ್ ಪಾಂಡ್ಯ ಸಾಕಷ್ಟು ಮುಂದಿದ್ದಾರೆ'

2ನೇ ಟಿ20 ಪಂದ್ಯಕ್ಕೆ ಉಭಯ ತಂಡಗಳು
ಭಾರತ: ಕೆಎಲ್ ರಾಹುಲ್, ರೋಹಿತ್ ಶರ್ಮ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿ.ಕೀ), ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ದೀಪಕ್ ಚಾಹರ್, ಅರ್ಷದೀಪ್ ಸಿಂಗ್

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿ.ಕೀ), ಟೆಂಬಾ ಬವುಮಾ (ನಾಯಕ), ರಿಲೀ ರೊಸೊವ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ, ಲುಂಗಿ ಎನ್‌ಗಿಡಿ