ರಹೆಮಾನುಲ್ಲಾ ಗುರ್ಬಾಜ್ ಸಿಡಿಸಿದ ಶತಕದ ನೆರವಿನಿಂದ ಆಫ್ಘಾನಿಸ್ತಾನ 194 ರನ್ ಸಿಡಿಸಿದೆ. ಮಳೆಯಿಂದ 25 ಓವರ್‌ಗೆ ಸೀಮಿತಗೊಂಡ ಈ ಪಂದ್ಯದಲ್ಲಿ ಇದೀಗ ಭಾರತ 195 ರನ್ ಟಾರ್ಗೆಟ್ ಚೇಸ್ ಮಾಡಬೇಕಿದೆ.
ಧರ್ಮಶಾಲಾ (ಜೂ.13) ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯ ರೋಚಕ ಘಟ್ಟ ತಲುಪಿದೆ. ರೆಹಮಾನುಲ್ಲಾ ಗುರ್ಬಾಜ್ ಭರ್ಜರಿ ಶತಕ ಸಿಡಿಸಿ ಮಿಂಚಿದರೆ, ನಾಯಕರ ಹಶ್ಮತುಲ್ಹಾ ಶಾಹಿದಿ ಹಾಗೂ ಅಜ್ಮಾತುಸಲ್ಹಾ ಒಮರ್‌ಝೈ ಉಪಯುಕ್ತ ಕಾಣಿಕೆಯಿಂದ ಆಫ್ಘಾನಿಸ್ತಾನ 194 ರನ್ ಸಿಡಿಸಿ ಆಲೌಟ್ ಆಗಿದೆ. ಮಳೆಯಿಂದ ಪಂದ್ಯವನ್ನು 25 ಓವರ್‌ಗೆ ಸೀಮಿತಗೊಳಿಸಲಾಗಿದೆ. ಇದೀಗ ಭಾರತ 195 ರನ್ ಚೇಸ್ ಮಾಡುವ ವಿಶ್ವಾಸದಲ್ಲಿದೆ.
ವಿಕೆಟ್ ಪತನದ ನಡುವೆ ಗುರ್ಬಾಜ್ ದಿಟ್ಟ ಹೋರಾಟ
ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ಉತ್ತಮ ಬೌಲಿಂಗ್ ಹೋರಾಟ ನೀಡಿದರೆ ಇತ್ತ ಗುರ್ಬಾಜ್ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆಪ್ಘಾನಿಸ್ತಾನ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದರೂ ಗುರ್ಬಾಜ್ ಮಾತ್ರ ಏಕಾಂಗಿ ಹೋರಾಟ ನೀಡಿದರು. ಇಬ್ರಾಹಿಂ ಜರ್ದಾನ್, ಸೆದಿಕುಲ್ಲಾ ಅತಲ್ ರಹಮತ್ ಶಾ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ಆದರೆ ಗುರ್ಜಾಬ್ ಭಾರತಕ್ಕೆ ತಲೆನೋವಾಗಿ ಪರಿಣಿಮಿಸಿದ್ದರು.
ಶತಕ ಸಿಡಿಸಿದ ಗುರ್ಬಾಜ್
ಗುರ್ಜಾಬ್ ಹೋರಾಟದ ಮೂಲಕ ಭರ್ಜರಿ ಸೆಂಚುರಿ ಸಿಡಿಸಿದರು. ಗುರ್ಬಾಜ್ ಕೇವಲ 51 ಎಸೆತದಲ್ಲಿ 8 ಬೌಂಡರಿ 8 ಸಿಕ್ಸರ್ ಮೂಲಕ 102 ರನ್ ಸಿಡಿಸಿದರು. 200ರ ಸ್ಟ್ರೈಕ್‌ರೇಟ್‌ನಲ್ಲಿ ಗುರ್ಬಾಜ್ ಬ್ಯಾಟಿಂಗ್ ಮಾಡಿದ್ದರು. ಗುರ್ಬಾಜ್ ಹೊರತುಪಡಿಸಿದರೆ ಇತರರಿಂದ ರನ್ ಹರಿದು ಬರಲಿಲ್ಲ. ಹಶ್ಮತುಲ್ಹಾ ಶಾಹಿತಿ 27 ರನ್ ಸಿಡಿಸಿದರೆ, ಅಜ್ಮುತುಲ್ಹಾ ಓಮರ್‌ಜೈ 27 ರನ್ ಕಾಣಿಕೆ ನೀಡಿದರು.
ಟೀಂ ಇಂಡಿಯಾ ಅದ್ಭುತ ಬೌಲಿಂಗ್ ದಾಳಿಗೆ ಆಫ್ಘಾನಿಸ್ತಾನ 24.5 ಓವರ್‌ಗಳಲ್ಲಿ 194 ರನ್ ಸಿಡಿಸಿ ಆಲೌಟ್ ಆಗಿದೆ. ಹರ್ಷ ದುಬೆ 3, ಗುರ್ನೂರ್ ಬ್ರಾರ್ 3, ಅರ್ಶದೀಪ್ ಸಿಂಗ್ 2 ಹಾಗೂ ನಿತೀಶ್ ಕುಮಾರ್ ರೆಡ್ಡಿ 2 ವಿಕೆಟ್ ಕಬಳಿಸಿ ಮಿಂಚಿದ್ದಾರೆ.


