ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂ ಸೀಕ್ರೇಟ್ ಲೀಕ್ ಮಾಡಿದ್ದೇ ಮುಂಬೈನ ಈ ಕ್ರಿಕೆಟರ್: ಗಂಭೀರ್ ಆರೋಪ!
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಭಾರತ ತಂಡದ ಡ್ರೆಸ್ಸಿಂಗ್ ರೂಮ್‌ನ ಮಾಹಿತಿಯನ್ನು ಸರ್ಫರಾಜ್ ಖಾನ್ ಬಹಿರಂಗಪಡಿಸಿದ್ದಾರೆ ಎಂದು ಕೋಚ್ ಗೌತಮ್ ಗಂಭೀರ್ ಆರೋಪಿಸಿದ್ದಾರೆ. ರೋಹಿತ್ ಶರ್ಮಾ ಮತ್ತು ಕೊಹ್ಲಿ ಜೊತೆ ಗಂಭೀರ್ ಭಿನ್ನಾಭಿಪ್ರಾಯ ಹೊಂದಿದ್ದರು ಎಂಬ ವದಂತಿಗಳ ನಡುವೆ ಈ ಆರೋಪ ಕೇಳಿಬಂದಿದೆ.
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ವೇಳೆ ಭಾರತದ ಡ್ರೆಸ್ಸಿಂಗ್ ಕೋಣೆಯ ಮಾಹಿತಿ ಬಹಿರಂಗಪಡಿಸಿದ್ದು ಸರ್ಫರಾಜ್ ಖಾನ್ ಎಂದು ಕೋಚ್ ಗೌತಮ್ ಗಂಭೀರ್ ಬಿಸಿಸಿಐ ಸಭೆಯಲ್ಲಿ ಆರೋಪಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಡ್ರೆಸ್ಸಿಂಗ್ ರೂಮ್‌ನಲ್ಲಿ ಗಂಭೀರ್ ಮತ್ತು ಹಿರಿಯ ಆಟಗಾರರ ನಡುವೆ ಭಿನ್ನಮತ ಉಂಟಾಗಿದೆ ಎಂದು ಆಸ್ಟ್ರೇಲಿಯಾ ಸರಣಿ ವೇಳೆ ದೊಡ್ಡ ಸುದ್ದಿಯಾಗಿತ್ತು. ರೋಹಿತ್ ಶರ್ಮಾ, ಕೊಹ್ಲಿ ಜೊತೆ ಗಂಭೀರ್ ಅಸಮಾಧಾನ ಹೊಂದಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದರ ಬಗ್ಗೆ ಇತ್ತೀಚೆಗೆ ನಡೆದ ಪರಾಮರ್ಶೆ ಸಭೆಯಲ್ಲಿ ಉಲ್ಲೇಖವಾಗಿದೆ. ಈ ವೇಳೆ, ಡ್ರೆಸ್ಸಿಂಗ್ ರೂಮ್ ಮಾಹಿತಿಗಳನ್ನು ಸರ್ಫರಾಜ್ ಬಹಿರಂಗಪಡಿಸಿದ್ದಾರೆ ಎಂದು ಗಂಭೀರ್ ಸಭೆಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ಸ್ವತಃ ಬಿಸಿಸಿಐ ಅಧಿಕಾರಿಗಳು ಕೂಡಾ ಸರ್ಫರಾಜ್ ಖಾನ್ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಸರ್ಫರಾಜ್ ಸರಣಿಗೆ ಆಯ್ಕೆಯಾಗಿದ್ದರೂ ಯಾವುದೇ ಪಂದ್ಯ ಆಡಲು ಅವಕಾಶ ಸಿಕ್ಕಿರಲಿಲ್ಲ.
435 ರನ್ ಸ್ಕೋರ್ ಮಾಡಿ 304 ರನ್‌ನಲ್ಲಿ ಗೆದ್ದ ಭಾರತ! ಮಂಧನಾ, ಪ್ರತಿಕಾ ಆರ್ಭಟಕ್ಕೆ ಐರ್ಲೆಂಡ್ ಕಂಗಾಲು
ಇನ್ನು ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸ್ವಯಂ ಪ್ರೇರಿತರಾಗಿ ಕೊನೆಯ ಟೆಸ್ಟ್ ಪಂದ್ಯದಿಂದ ಹಿಂದೆ ಸರಿದಿದ್ದರು. ಆದರೆ ರೋಹಿತ್ ಶರ್ಮಾ ಅವರನ್ನು ಹೆಡ್ ಕೋಚ್ ಗೌತಮ್ ಗಂಭೀರ್ ಅವರೇ ಸಿಡ್ನಿ ಟೆಸ್ಟ್ ಪಂದ್ಯದಿಂದ ಡ್ರಾಪ್ ಮಾಡಿದ್ದಾರೆ ಎನ್ನುವಂತಹ ಮಾತುಗಳು ಕೇಳಿ ಬಂದಿದ್ದವು. ರೋಹಿತ್ ಶರ್ಮಾ ಅವರನ್ನು ತಂಡದಿಂದ ಕೈಬಿಟ್ಟರೂ ಸಿಡ್ನಿ ಟೆಸ್ಟ್ ಪಂದ್ಯ ಗೆಲ್ಲಲು ಟೀಂ ಇಂಡಿಯಾಗೆ ಸಾಧ್ಯವಾಗಿರಲಿಲ್ಲ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿತ್ತು. ಆದರೆ ಇದಾದ ಬಳಿಕ ಉಳಿದ 4 ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವು ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 3-1 ಅಂತರದಲ್ಲಿ ಗೆಲುವು ಸಾಧಿಸಿತ್ತು. ಇದಷ್ಟೇ ಅಲ್ಲದೇ ಒಂದು ದಶಕದ ಬಳಿಕ ಟೆಸ್ಟ್ ಸರಣಿ ಜಯಿಸುವಲ್ಲಿ ಕಾಂಗರೂ ಪಡೆ ಯಶಸ್ವಿಯಾಗಿತ್ತು.
ಬಿಸಿಸಿಐ ಚಾಟಿ ಬಳಿಕ ಮತ್ತೆ ದೇಸಿ ಕ್ರಿಕೆಟ್‌ನತ್ತ ಸ್ಟಾರ್ ಆಟಗಾರರು: ರಿಷಭ್ ಕಣಕ್ಕೆ, ರೋಹಿತ್, ಕೊಹ್ಲಿ ಡೌಟ್!
ಮಾರ್ನೆ ಮೋರ್ಕೆಲ್ ವಿರುದ್ಧವೂ ಗಂಭೀರ್ ಕಿಡಿ?
ಆಸ್ಟ್ರೇಲಿಯಾ ಸರಣಿ ವೇಳೆ ಸಹಾಯಕ ಕೋಚ್ ಮೋರ್ಕೆಲ್ ವಿರುದ್ಧವೂ ಗಂಭೀರ್ ಕಿಡಿಕಾರಿದ್ದಾರೆ ಎಂದು ವರದಿಯಾಗಿದೆ. ಮಾರ್ನೆ ಮೋರ್ಕೆಲ್ ಅಭ್ಯಾಸಕ್ಕೆ ತಡವಾಗಿ ಬಂದಿದ್ದರು. ಹೀಗಾಗಿ ಮೈದಾನದಲ್ಲೇ ಮಾರ್ನೆ ಮೋರ್ಕೆಲ್‌ಗೆ ಗಂಭೀರ್ ಛೀಮಾರಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.