ಐರ್ಲೆಂಡ್ ವಿರುದ್ಧ ಭಾರತ ಮಹಿಳಾ ತಂಡ ದಾಖಲೆಯ 435 ರನ್ ಗಳಿಸಿ 304 ರನ್‌ಗಳ ಭರ್ಜರಿ ಜಯ ಸಾಧಿಸಿತು. ಪ್ರತಿಕಾ ರಾವಲ್ (154) ಮತ್ತು ಸ್ಮೃತಿ ಮಂಧನಾ (135) ದ್ವಿಶತಕದ ಜೊತೆಯಾಟದಲ್ಲಿ ಮಿಂಚಿದರು. ಸ್ಮೃತಿ 10ನೇ ಏಕದಿನ ಶತಕ ಸಿಡಿಸಿದರೆ, ಪ್ರತಿಕಾ ಚೊಚ್ಚಲ ಶತಕ ಬಾರಿಸಿದರು. ಭಾರತ 3-0 ಅಂತರದಲ್ಲಿ ಸರಣಿ ಗೆದ್ದುಕೊಂಡಿತು. ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ಪ್ರತಿಕಾಗೆ ಪಾತ್ರರಾದರು.

ರಾಜ್‌ಕೋಟ್: ಐರ್ಲೆಂಡ್ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ಹಲವು ದಾಖಲೆಗಳನ್ನು ನಿರ್ಮಿಸಿದೆ. ದಾಖಲೆಯ 435 ರನ್‌ ಸೇರಿಸಿದ ಟೀಂ ಇಂಡಿಯಾ, ಬಳಿಕ 304 ರನ್‌ ಅಂತರದಲ್ಲಿ ಬೃಹತ್ ಗೆಲುವು ಸಾಧಿಸಿ ಮತ್ತೊಂದು ದಾಖಲೆ ಬರೆದಿದೆ. 3 ಪಂದ್ಯಗಳ ಸರಣಿಯಲ್ಲಿ 3-0 ಕ್ಲೀನ್‌ಸ್ವೀಪ್ ಮಾಡಿಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ಭಾರತ 5 ವಿಕೆಟ್‌ಗೆ 435 ರನ್ ಕಲೆಹಾಕಿತು. 26.4 ಓವರ್‌ಗಳಲ್ಲಿ 233 ರನ್ ಜೊತೆಯಾಟವಾಡಿದ ಪ್ರತಿಕಾ ರಾವಲ್ ಹಾಗೂ ಸ್ಮೃತಿ ಮಂಧನಾ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಸ್ಮೃತಿ(80 ಎಸೆತಗಳಲ್ಲಿ 135) ಏಕದಿನದಲ್ಲಿ 10ನೇ ಶತಕ ಪೂರ್ಣಗೊಳಿಸಿದರೆ, ಪ್ರತಿಕಾ(129 ಎಸೆತಗಳಲ್ಲಿ 154) ಚೊಚ್ಚಲ ಸೆಂಚುರಿ ಬಾರಿಸಿ ಸಂಭ್ರಮಿಸಿದರು.

ವಿಜಯ್ ಹಜಾರೆ ಟ್ರೋಫಿ: ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್, 5ನೇ ಬಾರಿ ಕರ್ನಾಟಕ ಫೈನಲ್‌ಗೆ!

Scroll to load tweet…

ಬೃಹತ್ ಗುರಿ ಬೆನ್ನತ್ತಿದ ಐರ್ಲೆಂಡ್ 31.4 ಓವರ್‌ಗಳಲ್ಲಿ 131 ರನ್‌ಗೆ ಆಲೌಟಾಯಿತು. ದೀಪ್ತಿ 3 ವಿಕೆಟ್ ಕಿತ್ತರು. 

ಸ್ಕೋರ್: 
ಭಾರತ 435/5 (ಪ್ರತಿಕಾ 154, ಸ್ಮೃತಿ 135, ಓರ್ಲಾ 2-71), 
ಐರ್ಲೆಂಡ್ 31.4 ಓವರಲ್ಲಿ 131/10 (
ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ: ಪ್ರತಿಕಾ ರಾವಲ್.

435 ರನ್ ದಾಖಲೆ: ಭಾರತ 435 ರನ್ ಗಳಿಸಿತು. ಇದು ಏಕದಿನದಲ್ಲಿ ಭಾರತದ ಗರಿಷ್ಠ ಸ್ಕೋರ್. ಪುರುಷರ ತಂಡ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 5 ವಿಕೆಟ್‌ಗೆ 418, ಮಹಿಳಾ ಐರ್ಲೆಂಡ್ ವಿರುದ್ಧವೇ 370 ರನ್ ಗಳಿಸಿತ್ತು.

Scroll to load tweet…

233 ರನ್ ಜತೆಯಾಟ: ಮೊದಲ ವಿಕೆಟ್‌ಗೆ ಪ್ರತಿಕಾ ರಾವಲ್-ಸ್ಕೃತಿ ಮಂಧನಾ 233 ರನ್ ಜೊತೆಯಾಟ. ಇದು ಭಾರತ ಪರ ಯಾವುದೇ ವಿಕೆಟ್‌ಗೆ ದಾಖಲಾದ 3ನೇ ಗರಿಷ್ಠ ರನ್ ಜೊತೆಯಾಟ.

ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಚಚ್ಚಿ ದಾಖಲೆ ಬರೆದ ಸ್ಮೃತಿ ಮಂಧನಾ!

304 ರನ್ ಗೆಲುವು: ಮಹಿಳಾ ಏಕದಿನದಲ್ಲಿ ಭಾರತದ ಅತಿದೊಡ್ಡ ಜಯ. 2017ರಲ್ಲಿ ಐರ್ಲೆಂಡ್ ವಿರುದ್ಧವೇ 249 ರನ್‌ಗಳಲ್ಲಿ ಗೆದ್ದಿದ್ದು ಈ ವರೆಗಿನ ದಾಖಲೆ,

Scroll to load tweet…

ಗರಿಷ್ಠ ಶತಕ: 3ನೇ ಸ್ಥಾನಕ್ಕೇರಿದ ಸ್ಮೃತಿ

ಸ್ಮೃತಿ ಮಂಧನಾ ಏಕದಿನ ಕ್ರಿಕೆಟ್‌ನಲ್ಲಿ 10ನೇ ಶತಕ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಮಹಿಳಾ ಏಕದಿನದಲ್ಲೇ ಅತಿ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಜಂಟಿ 3ನೇ ಸ್ಥಾನಕ್ಕೇರಿದ್ದಾರೆ. ಮಂಧನಾ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದು, ಇಂಗ್ಲೆಂಡ್‌ನ ಟ್ಯಾಮಿ ಬ್ಯೂಮೊಂಟ್ (10 ಶತಕ) ಜೊತೆ 3ನೇ ಸ್ಥಾನ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ (15), ನ್ಯೂಜಿಲೆಂಡ್‌ನ ಸುಜೀ ಬೇಟ್ (13) ಅಗ್ರ 2 ಸ್ಥಾನಗಳಲ್ಲಿದ್ದಾರೆ.

ವೇಗದ ಶತಕ: ಬುಧವಾರದ ಪಂದ್ಯದಲ್ಲಿ ಸ್ಮೃತಿ ಎಸೆತಗಳಲ್ಲೇ 100 ರನ್ ಗಳಿಸಿದರು. ಇದು ಭಾರತೀಯರಲ್ಲಿ ಮಹಿಳಾ ಏಕದಿನದ ವೇಗದ ಶತಕ. ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಹರ್ಮನ್ ಪ್ರೀತ್ ಕೌರ್ 87 ಎಸೆತಗಳಲ್ಲಿ ಶತಕ ಪೂರ್ಣ ಗೊಳಿಸಿದ್ದರು. ಒಟ್ಟಾರೆ ಸ್ಮೃತಿ ಮಹಿಳಾ ಕ್ರಿಕೆಟಿಗರಲ್ಲಿ 7ನೇ ವೇಗದ ಶತಕ ಬಾರಿಸಿದರು. 2012ರಲ್ಲಿ ಮೆಗ್ ಲ್ಯಾನಿಂಗ್ ನ್ಯೂಜಿಲೆಂಡ್ ವಿರುದ್ಧ 45 ಎಸೆತಗಳಲ್ಲಿ ಶತಕ ಬಾರಿಸಿದ್ದು ದಾಖಲೆ.