ಮುಂಬೈ(ನ.10): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮಹತ್ವದ ಸರಣಿಗೆ ತಯಾರಿ ಆರಂಭಗೊಂಡಿದೆ. ಟೆಸ್ಟ್, ಏಕದಿನ ಹಾಗೂ ಟಿ20 ಸರಣಿಗಾಗಿ ಬಿಸಿಸಿಐ ಈಗಾಗೇ ಬಲಿಷ್ಠ ತಂಡ ಪ್ರಕಟಿಸಿದೆ. ಆಯ್ಕೆಯಾಗಿರುವ ಟೀಂ ಇಂಡಿಯಾ ಕ್ರಿಕೆಟಿಗರು ಐಪಿಎಲ್ ಟೂರ್ನಿಯಲ್ಲಿ ಇಂಜುರಿಗೆ ತುತ್ತಾಗಿದ್ದಾರೆ. ಇತ್ತ ನಾಯಕ ವಿರಾಟ್ ಕೊಹ್ಲಿ ಅಂತಿಮ 3 ಟೆಸ್ಟ್ ಪಂದ್ಯಕ್ಕೆ ಲಭ್ಯರಿಲ್ಲ. ಹೀಗಾಗಿ ತಂಡದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ರಾಹುಲ್‌ಗೆ ಉಪನಾಯಕ ಪಟ್ಟ!

ನಾಯಕ ವಿರಾಟ್ ಕೊಹ್ಲಿ ಪೆಟರ್ನಿಟಿ ರಜೆ
ಅಪ್ಪನಾಗುತ್ತಿರುವ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ದದ ಅಂತಿಮ 3 ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಮೂರು ಮಾದರಿಯಿಂದ ಹೊರಗಿಟ್ಟಿದ್ದ ರೋಹಿತ್ ಶರ್ಮಾಗೆ ನಾಯಕತ್ವ ನೀಡಲಾಗಿದೆ.

ಏಕದಿನ ಸೇರಿಕೊಂಡ ಸಂಜು ಸಾಮ್ಸನ್
ಆಸೀಸ್ ಪ್ರವಾಸದಲ್ಲಿ ಟಿ20 ಸರಣಿಗೆ ಮಾತ್ರ ಆಯ್ಕೆಯಾಗಿದ್ದ ಸಂಜು ಸಾಮ್ಸನ್ ಇದೀಗ ಏಕದಿನ ತಂಡಕ್ಕೂ ಸೇರಿಸಲಾಗಿದೆ.

ಭಾರತ-ಆಸ್ಟ್ರೇಲಿಯಾ ಸರಣಿ ಸಂಪೂರ್ಣ ವೇಳಾಪಟ್ಟಿ ಪ್ರಕಟ!

ವರುಣ್ ಚಕ್ರವರ್ತಿ ಔಟ್
ಚೊಚ್ಚಲ ಬಾರಿಗೆ ಟೀಂ ಇಂಡಿಯಾದಿಂದ ಕರೆ ಸ್ವೀಕರಿಸಿದ್ದ ವರುಣ್ ಚಕ್ರವರ್ತಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇಂಜುರಿಗೆ ತುತ್ತಾಗಿರುವ ವರುಣ್ ಚಕ್ರವರ್ತಿ ಬದಲು ವೇಗಿ ಟಿ ನಟರಾಜನ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಕಮಲೇಶ್ ನಾಗರಕೊಟಿ ಔಟ್
ಇದೇ ಮೊದಲ ಬಾರಿಗೆ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದ ವೇಗಿ ಕಮಲೇಶ್ ನಾಗರಕೋಟಿ ಇಂಜುರಿಯಾದ ಕಾರಣ ತಂಡದಿಂದ ಹೊರಬಿದ್ದಿದ್ದಾರೆ. 

ಇಶಾಂತ್ ಶರ್ಮಾ ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಶೀಘ್ರದಲ್ಲೇ ಟೀಂ ಇಂಡಿಯಾ ಟೆಸ್ಟ್ ತಂಡ ಸೇರಿಕೊಳ್ಳಲಿದ್ದಾರೆ.ವೃದ್ಧಿಮಾನ್ ಸಾಹ ಕುರಿತು ಸ್ಪಷ್ಟ ಚಿತ್ರಣ ಹೊರಬಿದ್ದಿಲ್ಲ.

ನವೆಂಬರ್ 27ರಿಂದ ಭಾರತ ಹಾಗೂ ಆಸ್ಟ್ಕೇಲಿಯಾ ನಡುವಿನ ಸರಣಿ ಆರಂಭಗೊಳ್ಳಲಿದ್ದಾರೆ.