ಮತ್ತೊಮ್ಮೆ ಪ್ರೂವ್ ಆಯ್ತು ಕೊಹ್ಲಿ ಕ್ರೇಝ್..! ಲಾ ಎಂಟ್ರೆನ್ಸ್ ಎಕ್ಸಾಂನಲ್ಲೂ ವಿರಾಟ್ ಕುರಿತು ಪ್ರಶ್ನೆ..!
ಇಂಡಿಯನ್ ಕ್ರಿಕೆಟ್ನ ಪವರ್ ಸ್ಟಾರ್ ಯಾರು ಅಂದ್ರೆ, ಅದು ವಿರಾಟ್ ಕೊಹ್ಲಿ. ಕೊಹ್ಲಿ ಅನ್ನೋ ಹೆಸರಿನಲ್ಲೇ ಒಂದು ಪವರ್ ಇದೆ. ಕೊಹ್ಲಿ ಅನ್ನೋ ಹೆಸರು ಕೇಳಿದ್ರೆ ಸಾಕು, ಕೋಟ್ಯಂತರ ಜನರಲ್ಲಿ ಒಂದು ಕ್ಷಣ ಕರೆಂಟ್ ಪಾಸ್ ಆದಂತೆ ಆಗುತ್ತೆ. ಭಾರತೀಯ ಕ್ರಿಕೆಟ್ ಫ್ಯಾನ್ಸ್‌ಗೆ ಕೊಹ್ಲಿ ಅಂದ್ರೆ ಎಮೋಷನ್, ಸೆಲೆಬ್ರೇಷನ್.
ಬೆಂಗಳೂರು(ಡಿ.11): ವಿರಾಟ್ ಕೊಹ್ಲಿ ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರ್ತಾರೆ. ಇನ್ನು ಕೊಹ್ಲಿಯ ಫ್ಯಾನ್ ಬೇಸ್ ಬಗ್ಗೆ ಹೇಳೋದೆ ಬೇಡ. ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಕೊಹ್ಲಿಗಿರೋವಷ್ಟು ಫ್ಯಾನ್ಸ್ ಬೇರ್ಯಾವ ಕ್ರಿಕೆಟರ್‌ಗೂ ಇಲ್ಲ. ಕ್ರೇಝ್ ವಿಚಾರದಲ್ಲಂತೂ ಕೊಹ್ಲಿ ಹತ್ತಿರಕ್ಕೂ ಯಾರು ಸುಳಿಯೋದಿಲ್ಲ. ಅದಕ್ಕೊಂದು ಹೊಸ ಎಕ್ಸಾಂಪಲ್ ಇಲ್ಲಿದೆ ನೋಡಿ.!
ಇಂಡಿಯನ್ ಕ್ರಿಕೆಟ್ನ ಪವರ್ ಸ್ಟಾರ್ ಯಾರು ಅಂದ್ರೆ, ಅದು ವಿರಾಟ್ ಕೊಹ್ಲಿ. ಕೊಹ್ಲಿ ಅನ್ನೋ ಹೆಸರಿನಲ್ಲೇ ಒಂದು ಪವರ್ ಇದೆ. ಕೊಹ್ಲಿ ಅನ್ನೋ ಹೆಸರು ಕೇಳಿದ್ರೆ ಸಾಕು, ಕೋಟ್ಯಂತರ ಜನರಲ್ಲಿ ಒಂದು ಕ್ಷಣ ಕರೆಂಟ್ ಪಾಸ್ ಆದಂತೆ ಆಗುತ್ತೆ. ಭಾರತೀಯ ಕ್ರಿಕೆಟ್ ಫ್ಯಾನ್ಸ್‌ಗೆ ಕೊಹ್ಲಿ ಅಂದ್ರೆ ಎಮೋಷನ್, ಸೆಲೆಬ್ರೇಷನ್.
ಕೊಹ್ಲಿಯ ಕ್ಲಾಸ್ ಬ್ಯಾಟಿಂಗ್ ನೋಡೋದೆ ಒಂದು ಅದ್ಭುತ ಅನುಭವ. ಕ್ರಿಕೆಟ್ ದುನಿಯಾದ ಬಿಗ್ಗೆಸ್ಟ್ ಸೂಪರ್ ಸ್ಟಾರ್, ಕಿಂಗ್ ಆಫ್ ರೆಕಾರ್ಡ್ಸ್, ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಇಂಟರ್ನ್ಯಾಷ್ನಲ್ಲಿ ಕ್ರಿಕೆಟ್ನಲ್ಲಿ ಲೆಕ್ಕವಿಲ್ಲದಷ್ಟ ದಾಖಲೆ ಬರೆದಿದ್ದಾರೆ. ಆಡೋ ಪ್ರತಿ ಮ್ಯಾಚ್ನಲ್ಲೂ ಈ ರನ್ಮಷಿನ್ ಒಂದಲ್ಲ ಒಂದು ದಾಖಲೆಯನ್ನ ಬರೀತಾನೆ ಇರ್ತಾರೆ.
IPL ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ಗೆದ್ದ 6 ಭಾರತೀಯರಿವರು: ಈ ಲಿಸ್ಟ್‌ನಲ್ಲಿದ್ದಾರೆ ಇಬ್ಬರು ಕನ್ನಡಿಗರು..!
ಯೆಸ್, ಕೊಹ್ಲಿ ಬರೆದಿರೋ ದಾಖಲೆಗಳು, ಮಾಡಿರೋ ಸಾಧನೆಗಳು ಒಂದರೆಡಲ್ಲ. ಆದ್ರೆ ಇಷ್ಟೆಲ್ಲಾ ಮಾಡಿದ್ರು ಕೊಹ್ಲಿ ವಿರುದ್ಧ ಕೇಳಿಬಂದಷ್ಟು ಟೀಕೆಗಳು ಬೇಱವ ಕ್ರಿಕೆಟರ್ ವಿರುದ್ಧವೂ ಕೇಳಿ ಬಂದಿಲ್ಲ. ನೀರು ಕುಡಿದಷ್ಟೆ ಸುಲಭವಾಗಿ ಶತಕ ಸಿಡಿಸುತ್ತಿದ್ದ ರನ್ಮಷಿನ್, 2019 ರಿಂದ 2022ರವರೆಗೆ ಶತಕದ ಬರ ಎದುರಿಸಿದ್ರು. ಇಷ್ಟಕ್ಕೆ ಹಲವು ಕ್ರಿಕೆಟ್ ಪಂಡಿತರು ಕೊಹ್ಲಿ ಕಥೆ ಮುಗೀತು ಅಂದ್ರು. ಇನ್ನು ಕೆಲವರು ಕೊಹ್ಲಿ ರಿಟೈರ್ಮೆಂಟ್ ಆಗೋದು ಬೆಟರ್ ಅಂದ್ರು. ಆದ್ರೆ, ವಿರಾಟ್ ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ತಮ್ಮ ಅಭ್ಯಾಸವನ್ನ ಬಿಡಲಿಲ್ಲ.
ಏಷ್ಯಾಕಪ್ನಲ್ಲಿ ಅಪ್ಘಾನಿಸ್ತಾನದ ವಿರುದ್ಧ ಭರ್ಜರಿ ಶತಕ ಸಿಡಿಸಿದ್ರು. ಆ ಮೂಲಕ ತಮ್ಮ ವಿರುದ್ಧದ ಎಲ್ಲಾ ಟೀಕೆ, ಅನುಮಾನಗಳಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ರು. ಕೊಹ್ಲಿಯ ಈ ಸ್ಟ್ರಾಂಗ್ ಕಮ್ಬ್ಯಾಕ್, ಫೇಲ್ಯೂರ್ಗಳಿಂದ ಮಾನಸಿಕವಾಗಿ ಕುಗ್ಗಿಹೋದ ಯುವ ಕ್ರಿಕೆಟರ್ಸ್ಗೆ, ಅವ್ರ ಕೋಟ್ಯಂತರ ಅಭಿಮಾನಿಗಳಿಗೆ ಸ್ಫೂರ್ತಿಯಾಯ್ತು.
ಇನ್ನು ಕೊಹ್ಲಿ ತಮ್ಮ ಆಟದಿಂದ ಮಾತ್ರವಲ್ಲ. ವ್ಯಕ್ತಿತ್ವದಿಂದಲೂ ಕೋಟ್ಯಂ ತರ ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ. ಅದರಲ್ಲೂ ಕೊಹ್ಲಿಗಿರೋ ನಿಯತ್ತು, ನಿಷ್ಠೆ ಬೇರೆ ಯಾವ ಕ್ರಿಕೆಟರ್ಗು ಇಲ್ಲ ಅಂದ್ರೆ ತಪ್ಪಿಲ್ಲ. IPL ಇತಿಹಾಸದಲ್ಲಿ ಒಂದೇ ಒಂದು ತಂಡದ ಪರ ಆಡ್ತಿರೋ ಆಟಗಾರ ಯಾರಾದ್ರು ಇದ್ರೆ ಅದು ವಿರಾಟ್ ಮಾತ್ರ..! 2008ರಿಂದ ಈವರೆಗೂ ಕೊಹ್ಲಿ RCB ಜೆರ್ಸಿ ಬಿಟ್ಟು ಬೇರೆ ಜೆರ್ಸಿ ಧರಿಸಿಲ್ಲ.
A question related to King Kohli in AILET examination. pic.twitter.com/Jl1lDITasR
— Mufaddal Vohra (@mufaddal_vohra) December 10, 2023
Vijay Hazare Trophy: ಕ್ವಾರ್ಟರ್ ಫೈನಲ್‌ನಲ್ಲಿ ವಿದರ್ಭ ಎದುರು ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ
ಕೊಹ್ಲಿಯಂತ ಸೂಪರ್ ಸ್ಟಾರ್ ಆಟಗಾರ ಮನಸ್ಸು ಮಾಡಿದ್ರೆ, ಯಾವುದೇ ತಂಡವನ್ನ ಸೇರಬಹುದು. ಹಲವು ಬಾರಿ ಬೇರೆ ಫ್ರಾಂಚೈಸಿಗಳು ಚೇಸಿಂಗ್ ಮಾಸ್ಟರ್ಗೆ ಗಾಳ ಹಾಕಿವೆ. ಆದ್ರೆ, ಯಾವ ಆಫರ್ಗಳಿಗು ಕೊಹ್ಲಿ ಬಗ್ಗಿಲ್ಲ. ಕೊಹ್ಲಿಯ ಈ ನಿಯತ್ತೇ ಅವರನ್ನ ಶ್ರೇಷ್ಠ ಆಟಗಾರನಾಗಿಸಿದೆ ಅಂದ್ರೆ ತಪ್ಪಿಲ್ಲ.
ಇನ್ನು ಕೊಹ್ಲಿಯ ನಿಷ್ಠೆ ಎಷ್ಟರ ಮಟ್ಟಿಗೆ ವ್ಯಾಪಿಸಿದೆ ಅಂದ್ರೆ, ಆಲ್ ಇಂಡಿಯಾ ಲಾ ಎಂಟ್ರೆನ್ಸ್ ಟೆಸ್ಟ್ನಲ್ಲಿ ನಲ್ಲಿ ಈ ಕುರಿತು ಪ್ರಶ್ನೆ ಕೇಳಲಾಗಿದೆ. IPL ಈವರೆಗು ಒಂದೇ ತಂಡದ ಪರ ಆಡ್ತಿರೋ ಆಟಗಾರ ಯಾರು ಅನ್ನೋ ಪ್ರಶ್ನೆ ಪ್ರಶ್ನೆ ಪತ್ರಿಕೆಯಲ್ಲಿ ಕಾಣಿಸಿಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಪ್ರಶ್ನೆ ಫುಲ್ ವೈರಲ್ ಆಗಿದೆ. ಇದು ಕೊಹ್ಲಿಯ ಕ್ರೇಝ್ಗೆ ಮತ್ತೊಂದು ಸಾಕ್ಷಿಯಾಗಿದೆ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್