ಇಂದೋರ್‌(ಜ.14): ಮಧ್ಯಪ್ರದೇಶದ ಝಬುವಾದಲ್ಲಿ ಎಚ್‌5ಎನ್‌1 ಸೋಂಕಿನಿಂದ 2,500 ಕಡಕ್‌ನಾಥ್‌ ಕೋಳಿಗಳು ಮೃತಪಟ್ಟಿವೆ.

ಈ ಪೈಕಿ ಬಹುತೇಕ ಕೋಳಿಗಳನ್ನು ರಾಂಚಿಯಲ್ಲಿರುವ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಅವರ ಫಾಮ್‌ರ್‍ಹೌಸಿಗೆ ರವಾನಿಸಲು ಅಣಿ ಮಾಡಲಾಗಿತ್ತು. ಆದರೆ ಹಕ್ಕಿಜ್ವರ ಇದೀಗ, ಕಡಕ್‌ನಾಥ್‌ ಕೋಳಿ ಸಾಕುವ ಧೋನಿ ಕನಸಿಗೆ ಹಕ್ಕಿಜ್ವರ ಭೀತಿ ತಣ್ಣೀರು ಎರಚಿದೆ.

ಕಡಿಮೆ ಕೊಬ್ಬು, ಹೆಚ್ಚಿನ ಪ್ರೋಟೀನ್‌ ಹೊಂದಿರುವ ಕಂದುಬಣ್ಣದ ಮಾಂಸದ ಕಡಕ್‌ನಾಥ್‌ ಕೋಳಿಗಳು ಮಾಂಸಕ್ಕಾಗಿ ಅತ್ಯಂತ ಜನಪ್ರಿಯ. ಹೀಗಾಗಿ ಇಂಥ 2850 ಕೋಳಿ ಸಾಕಲು ಧೋನಿ ಅವರ ಫಾಮ್‌ರ್‍ನಿಂದ ಬೇಡಿಕೆ ಬಂದಿತ್ತು.

ಆದರೆ ಇದೀಗ ಹಕ್ಕಿಜ್ವರ ಹಿನ್ನೆಲೆಯಲ್ಲಿ ಆ ಕೋಳಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಪೌಲ್ಟಿ್ರ ಉದ್ಯಮದ ಮಾಲೀಕ ವಿನೋದ್‌ ಮೇದಾ ತಿಳಿಸಿದ್ದಾರೆ.