Asianet Suvarna News Asianet Suvarna News

Madan Lal on Kohli Sacking: ಟೀಂ ಕಟ್ಟೋದು ಕಷ್ಟ, ಕೆಡವೋದು ಬಹಳ ಸುಲಭ!

ಏಕದಿನ ತಂಡದ ನಾಯಕ ಸ್ಥಾನದಿಂದ ಕೊಹ್ಲಿಯನ್ನು ಕೆಳಗಿಳಿಸಿದ್ದಕ್ಕೆ ಬೇಸರ
ಆಯ್ಕೆ ಸಮಿತಿಯ ಯೋಚನೆಗಳೇ ಅರ್ಥವಾಗುತ್ತಿಲ್ಲ ಎಂದ ಮಾಜಿ ಕ್ರಿಕೆಟಿಗ
2023ರ ಏಕದಿನ ವಿಶ್ವಕಪ್ ಗೂ ಕೊಹ್ಲಿ ಕ್ಯಾಪ್ಟನ್ ಆಗಿರಬೇಕಿತ್ತು

Former India all rounder madan lal not happy with virat kohli axing as odi captain san
Author
Bengaluru, First Published Dec 10, 2021, 8:16 PM IST
  • Facebook
  • Twitter
  • Whatsapp

ಬೆಂಗಳೂರು (ಡಿ.10): ಭಾರತೀಯ ಕ್ರಿಕೆಟ್ ನಲ್ಲಿ (Indian Cricket) ಇತ್ತೀಚಿನ ವರ್ಷಗಳಲ್ಲಿ ಆದ ಮಹತ್ತರ ಬದಲಾವಣೆ ಎನ್ನುವಂತೆ ಟೀಂ ಇಂಡಿಯಾದ (Team India) ಏಕದಿನ ತಂಡದ (ODI Team)ನಾಯಕ ಸ್ಥಾನದಿಂದ ವಿರಾಟ್ ಕೊಹ್ಲಿ(Virat Kohli) ಅವರನ್ನು ವಜಾ ಮಾಡಿ ಆ ಸ್ಥಾನಕ್ಕೆ ರೋಹಿತ್ ಶರ್ಮ (Rohit Sharma) ಅವರನ್ನು ಆಯ್ಕೆ ಮಾಡಲಾಗಿದೆ. ಈ ಕುರಿತಾಗಿ ಪರ-ವಿರೋಧದ ಅಭಿಪ್ರಾಯಗಳನ್ನು ಮಾಜಿ ಕ್ರಿಕೆಟಿಗರು ವ್ಯಕ್ತಪಡಿಸುತ್ತಿರುವಾಗಲೇ, 1983ರ ಏಕದಿನ ವಿಶ್ವಕಪ್ ವಿಜೇತ (1983 ODI World Cup) ತಂಡದ ಆಟಗಾರ ಹಾಗೂ ಮಾಜಿ ಕೋಚ್ ಮದನ್ ಲಾಲ್  (Madan Lal ) ಆಯ್ಕೆ ಸಮಿತಿಯ ಈ ನಿರ್ಧಾರವನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ. ಏಕದಿನ ಕ್ರಿಕೆಟ್ ಮಾದರಿಯಲ್ಲಿ ನಾಯಕನಾಗಿ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಹಂತದಲ್ಲಿ ಇಂಥದ್ದೊಂದು ಬದಲಾವಣೆಯನ್ನು ಮಾಡುವ ಅಗತ್ಯವಾದರೂ ಏನಿತ್ತು? ಟೀಂ ಇಂಡಿಯಾ ಏಕದಿನ ತಂಡದ ನಾಯಕತ್ವದ ಬಗ್ಗೆ ಆಯ್ಕೆ ಸಮಿತಿಯ ಆಲೋಚನೆಗಳು ಏನಿದ್ದವೆಂದು ನನಗೆ ತಿಳಿದಿಲ್ಲ. ಒಟ್ಟಾರೆ ಈ ಬೆಳವಣಿಗೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

ಕಳೆದ ನವೆಂಬರ್ ನಲ್ಲಿ ಸ್ವನಿರ್ಧಾರದಿಂದ ಟಿ20 (T20) ಮಾದರಿಯ ನಾಯಕ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರವನ್ನು ವಿರಾಟ್ ಕೊಹ್ಲಿ ಮಾಡಿದ್ದರು. ಆದರೆ, ಯಾವ ಹಂತದಲ್ಲೂ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಯುವ ಬಗ್ಗೆ ಅವರು ಮಾತನಾಡಿರಲಿಲ್ಲ. ಆದರೆ ಸೀಮಿತ ಓವರ್ ಗಳ ಎರಡು ಭಿನ್ನ ಮಾದರಿಗೆ ಭಿನ್ನ ನಾಯಕರ ಅಗತ್ಯವಿಲ್ಲ ಎನ್ನುವುದನ್ನು ಪರಿಗಣಿಸಿ ಬಿಸಿಸಿಐ ಮುಂಬರುವ ದಕ್ಷಿಣ ಆಫ್ರಿಕಾ (South Africa)ವಿರುದ್ಧದ ಏಕದಿನ ಸರಣಿಗೆ ರೋಹಿತ್ ಶರ್ಮವನ್ನು ಪೂರ್ಣ ಪ್ರಮಾಣದ ನಾಯಕರನ್ನಾಗಿ ಘೋಷಣೆ ಮಾಡಿದೆ.

Rohit Replaced Kohli : ಆಯ್ಕೆ ಸಮಿತಿಗೆ ದಿಲೀಪ್ ವೆಂಗ್ಸರ್ಕಾರ್ ಕೊಟ್ಟ ಎಚ್ಚರಿಕೆ ಏನು?
"ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ಹೆಚ್ಚಿನ ಪಂದ್ಯಗಳು ನಡೆಯುತ್ತಿರುವ ಕಾರಣ, ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ನಲ್ಲಿ ತಮ್ಮ ನಾಯಕತ್ವದ ಜವಾಬ್ದಾರಿಯನ್ನು ತೊರೆದಿದ್ದರು. ಆದರೆ, ಏಕದಿನ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಅವರನ್ನು ಕೆಳಗಿಳಿಸಿದ್ದು ಸರಿಯಲ್ಲ. ನನ್ನ ಪ್ರಕಾರ ಅವರು 2023ರ ವಿಶ್ವಕಪ್ ವರೆಗೂ (2023 ODI World Cup)ತಂಡದ ನಾಯಕರಾಗಿ ಉಳಿಯಬೇಕಿತ್ತು. ಒಂದು ತಂಡವನ್ನು ಕಟ್ಟುವುದು ಬಹಳ ಕಷ್ಟ. ಆದರೆ, ಕೆಡವೋದು ಕ್ಷಣ ಮಾತ್ರದ ಕೆಲಸ. ಉತ್ತಮ ನಿರ್ವಹಣೆ ನೀಡಿದ ಹೊರತಾಗಿಯೂ ಕೊಹ್ಲಿಯನ್ನು ನಾಯಕ ಸ್ಥಾನದಿಂದ ಕೆಳಗಿಳಿಸಲಾಗಿದೆ. ಖಂಡಿತವಾಗಿಯೂ ಇದು ಅವರನ್ನು ಕಾಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

BCCI Sacked Virat Kohli Captaincy ಕೊಹ್ಲಿ ಕುರಿತು ದಿಟ್ಟ ನಿಲುವು ಪ್ರಕಟಿಸಿದ ರೋಹಿತ್ ಶರ್ಮಾ..!
ಸೀಮಿತ ಓವರ್ ಗಳ ಕ್ರಿಕೆಟ್ ನ ಎರಡು ಭಿನ್ನ ಮಾದರಿಗೆ ಭಿನ್ನ ನಾಯಕರಿದ್ದರೆ ಗೊಂದಲ ಉಂಟಾಗುತ್ತದೆ ಎನ್ನುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಕೊಹ್ಲಿ ಟೆಸ್ಟ್ ತಂಡದ ನಾಯಕರಾಗಿದ್ದಾಗ, ಎಂಎಸ್ ಧೋನಿ (MS Dhoni) ಏಕದಿನ ಹಾಗೂ ಟಿ20 ಮಾದರಿಯಲ್ಲಿ ಎರಡು ವರ್ಷಕ್ಕಿಂತ ಹೆಚ್ಚಿನ ಕಾಲ ಕ್ಯಾಪ್ಟನ್ ಆಗಿದ್ದರು. ಯಾವ ಕಾರಣಕ್ಕಾಗಿ ಇಲ್ಲಿ ಗೊಂದಲ ಉಂಟಾಗಲಿದೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಪ್ರತಿ ನಾಯಕನೂ ತಂಡವನ್ನು ಮುನ್ನಡೆಸಲು ತನ್ನದೇ ಆದ ಸ್ಟೈಲ್ ಹೊಂದಿರುತ್ತಾನೆ.  ಇಲ್ಲಿ ಗೊಂದಲ ಯಾರಿಗೆ ಆಗಲಿದೆ.  ವಿರಾಟ್ ಹಾಗೂ ರೋಹಿತ್ ಶರ್ಮ ಅವರಿಗೆ ತಂಡವನ್ನು ಮುನ್ನಡೆಸುವ ತಮ್ಮದೇ ಆದ ಸ್ಟೈಲ್ ಹೊಂದಿದ್ದಾರೆ. ಎಂಎಸ್ ಧೋನಿ ಕೂಡ ತಮ್ಮದೇ ಆದ ಸ್ಟೈಲ್ ಹೊಂದಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವೃತ್ತಿಪರವಾಗಿ ಆಡುವುದು ಹಾಗೂ ಎಲ್ಲಾ ಮಾದರಿಯಲ್ಲಿ ಉತ್ತಮ ನಿರ್ವಹಣೆ ನೀಡುವುದಷ್ಟೇ ಮುಖ್ಯವಾಗುತ್ತದೆ ಎಂದು ವಿಶ್ವಕಪ್ ವಿಜೇತ ತಂಡದ ಸದಸ್ಯ ಹೇಳಿದ್ದಾರೆ.

Follow Us:
Download App:
  • android
  • ios