Asianet Suvarna News Asianet Suvarna News

BCCI Sacked Virat Kohli Captaincy ಕೊಹ್ಲಿ ಕುರಿತು ದಿಟ್ಟ ನಿಲುವು ಪ್ರಕಟಿಸಿದ ರೋಹಿತ್ ಶರ್ಮಾ..!

* ಸೀಮಿತ ಓವರ್‌ಗಳ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿದ ಬಿಸಿಸಿಐ

* ಸೀಮಿತ ಓವರ್‌ಗಳ ನಾಯಕನಾಗಿ ರೋಹಿತ್ ಶರ್ಮಾಗೆ ಪಟ್ಟ

* ವಿರಾಟ್ ಕೊಹ್ಲಿ ಕುರಿತಂತೆ ದಿಟ್ಟ ನಿಲುವು ಪ್ರಕಟಿಸಿದ ರೋಹಿತ್ ಶರ್ಮಾ 

Virat Kohli has as batter and leader is required in our team says Team India Limited Over Captain Rohit Sharma kvn
Author
Bengaluru, First Published Dec 10, 2021, 9:12 AM IST

ನವದೆಹಲಿ(ಡಿ.10): ವಿರಾಟ್‌ ಕೊಹ್ಲಿಯಲ್ಲಿರುವ (Virat Kohli) ಗುಣಮಟ್ಟದ ಬ್ಯಾಟಿಂಗ್‌ ಹಾಗೂ ನಾಯಕತ್ವದ ಕೌಶಲ್ಯ ತಂಡಕ್ಕೆ ಯಾವತ್ತೂ ಅಗತ್ಯವಿದೆ ಎಂದು ಭಾರತ ಏಕದಿನ ತಂಡದ ನೂತನ ನಾಯಕ ರೋಹಿತ್‌ ಶರ್ಮಾ (Rohit Sharma) ಹೇಳಿದ್ದಾರೆ. ಈ ಬಗ್ಗೆ ಯೂಟ್ಯೂಟ್‌ ಚಾನೆಲ್‌ವೊಂದರ ಜೊತೆ ಮಾತನಾಡಿರುವ ಅವರು, ‘ಟಿ20 ಮಾದರಿಯಲ್ಲಿ 50ರ ಸರಾಸರಿಯಲ್ಲಿ ಆಡುವುದು ಅದ್ಭುತ. ವಿರಾಟ್‌ ತಮ್ಮ ಅನುಭವದ ಮೂಲಕವೇ ತಂಡವನ್ನು ಹಲವು ಬಾರಿ ಸಂಕಷ್ಟದಿಂದ ಪಾರು ಮಾಡಿದ್ದಾರೆ. ಅವರು ತಂಡದ ಪ್ರಮುಖ ಆಟಗಾರ. ಅಲ್ಲದೇ ನಮ್ಮ ತಂಡದ ನಾಯಕ. ಅವರು ತಂಡದ ಭಾಗವಾಗಿರಬೇಕೆಂದು ಬಯಸುತ್ತೇನೆ’ ಎಂದಿದ್ದಾರೆ.

ಟಿ20 ವಿಶ್ವಕಪ್ (ICC T20 World Cup) ಮುಕ್ತಾಯದ ಬಳಿಕ ತಾವು ಟೀಂ ಇಂಡಿಯಾ (Team India) ಟಿ20 ನಾಯಕತ್ವದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದರು. ಆದರೆ ದಿಢೀರ್ ಬೆಳವಣಿಗೆ ಎನ್ನುವಂತೆ ದಕ್ಷಿಣ ಆಫ್ರಿಕಾ ಸರಣಿಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡುವಾಗ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಒಬ್ಬನೇ ನಾಯಕನಿರಲಿ ಎನ್ನುವ ಉದ್ದೇಶದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾಗೆ ನಾಯಕ ಪಟ್ಟ ಕಟ್ಟಲಾಗಿದೆ. ಆದರೆ ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕರಾಗಿ ಮುಂದುವರೆಯಲಿದ್ದಾರೆ. 

ಟಿ20 ನಾಯಕತ್ವ ಬಿಡದಂತೆ ಕೊಹ್ಲಿಯನ್ನು ಕೇಳಿದ್ವಿ:

ನವದೆಹಲಿ: ಭಾರತ ಟಿ20 ತಂಡದ ನಾಯಕತ್ವ ತ್ಯಜಿಸದಂತೆ ವಿರಾಟ್‌ ಕೊಹ್ಲಿಗೆ ನಾವು ಮನವಿ ಮಾಡಿದ್ದೆವು, ಆದರೆ ಅವರು ನಮ್ಮ ಮನವಿಗೆ ಸ್ಪಂದಿಸಲಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ (Sourav Ganguly) ಗುರುವಾರ ತಿಳಿಸಿದ್ದಾರೆ.

Rohit Replaced Kohli ಇದೇ ಕಾರಣಕ್ಕೆ ಕ್ಯಾಪ್ಟನ್‌ ಕೊಹ್ಲಿಯನ್ನು ಬಿಸಿಸಿಐ ಕಿತ್ತೊಗೆಯಿತು!

‘ಟಿ20 ಹಾಗೂ ಏಕದಿನ ತಂಡಗಳಿಗೆ ಪ್ರತ್ಯೇಕ ನಾಯಕರಿರಲು ಸಾಧ್ಯವಿಲ್ಲ. ಅದೊಂದು ರೀತಿ ಅತಿಯಾದ ನಾಯಕತ್ವ ಎನಿಸಲಿದೆ. ಹೀಗಾಗಿ ಬಿಸಿಸಿಐ (BCCI) ಹಾಗೂ ಆಯ್ಕೆಗಾರರು ಸೇರಿ ಒಟ್ಟಾಗಿ ಸೀಮಿತ ಓವರ್‌ ತಂಡಗಳಿಗೆ ಒಬ್ಬರೇ ನಾಯಕರಿರುವುದು ಸೂಕ್ತ ಎಂದು ನಿರ್ಧರಿಸಿ ರೋಹಿತ್‌ ಶರ್ಮಾಗೆ ಜವಾಬ್ದಾರಿ ನೀಡಿದೆವು’ ಎಂದು ಗಂಗೂಲಿ ಹೇಳಿದ್ದಾರೆ. ‘ಬಿಸಿಸಿಐ ಅಧ್ಯಕ್ಷನಾಗಿ ನಾನು ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್‌ ಶರ್ಮಾ ಕೊಹ್ಲಿಯೊಂದಿಗೆ ಮಾತನಾಡಿ ವಿಷಯ ತಿಳಿಸಿದ್ದೇವೆ’ ಎಂದಿರುವ ಗಂಗೂಲಿ, ತಮ್ಮ ಹಾಗೂ ಕೊಹ್ಲಿ ನಡುವೆ ಆದ ಸಂಭಾಷಣೆಯ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ಕೊಹ್ಲಿಗೆ ಧನ್ಯವಾದ ಹೇಳಿದ ಬಿಸಿಸಿಐ

ನವದೆಹಲಿ: ಸೀಮಿತ ಓವರ್‌ಗಳ ನಾಯಕತ್ವ ತೊರೆದಿರುವ ವಿರಾಟ್‌ ಕೊಹ್ಲಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿ) ಧನ್ಯವಾದ ಸಲ್ಲಿಸಿದೆ. ಈ ಬಗ್ಗೆ ಗುರುವಾರ ಟ್ವೀಟ್‌ ಮಾಡಿದ ಬಿಸಿಸಿಐ, ‘ಉತ್ಸಾಹ, ಧೈರ್ಯ ಹಾಗೂ ದೃಢ ಸಂಕಲ್ಪದಿಂದ ಭಾರತ ತಂಡವನ್ನು ಮುನ್ನಡೆಸಿದ ವಿರಾಟ್‌ ಕೊಹ್ಲಿಗೆ ಧನ್ಯವಾದಗಳು’ ಎಂದು ತಿಳಿಸಿದೆ. 

ಅಲ್ಲದೇ, ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಕೂಡಾ ಕೊಹ್ಲಿಗೆ ಧನ್ಯವಾದ ಹೇಳಿದ್ದಾರೆ. ‘ಕೊಹ್ಲಿ ಟೆಸ್ಟ್‌ ನಾಯಕನಾಗಿ ಮುಂದುವರಿಯಲಿದ್ದಾರೆ. ಸೀಮಿತ ಓವರ್‌ನಲ್ಲಿ ನಾಯಕನಾಗಿ ತಂಡಕ್ಕೆ ನೀಡಿದ ಕೊಡುಗೆಗಾಗಿ ಕೊಹ್ಲಿಗೆ ಅಭಿನಂದನೆಗಳು’ ಎಂದಿದ್ದಾರೆ.

ದ.ಆಫ್ರಿಕಾ ಏಕದಿನಕ್ಕೆ ಕೊಹ್ಲಿ ಗೈರು?

ನವದೆಹಲಿ: ಬಿಸಿಸಿಐ ಹಾಗೂ ವಿರಾಟ್‌ ಕೊಹ್ಲಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಬಹಿರಂಗಗೊಂಡಿರುವ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ವಿರಾಟ್‌ ಕೊಹ್ಲಿ ಗೈರಾಗಬಹುದು ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಕೊಹ್ಲಿ ಏಕದಿನ ತಂಡದ ನಾಯಕತ್ವ ಬಿಡಲು ಒಪ್ಪಿರಲಿಲ್ಲ. ಆದರೆ ಬಿಸಿಸಿಐ ಬಲವಂತವಾಗಿ ಅವರನ್ನು ಹುದ್ದೆಯಿಂದ ಕೆಳಗಿಳಿಸಿದೆ ಎನ್ನಲಾಗಿದೆ.

ಕೊಹ್ಲಿಯೊಂದಿಗೆ ಈಗಾಗಲೇ ಒಂದು ಸುತ್ತು ಮಾತುಕತೆ ನಡೆಸಿರುವ ಸೌರವ್‌ ಗಂಗೂಲಿ, ಮತ್ತೊಮ್ಮೆ ಅವರೊಂದಿಗೆ ಚರ್ಚಿಸಿ ಸಮಾಧಾನಪಡಿಸುವ ಪ್ರಯತ್ನ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಏಕದಿನ ತಂಡದ ಉಪನಾಯಕನ ಸ್ಥಾನಕ್ಕೆ ಕೆ.ಎಲ್‌.ರಾಹುಲ್‌ (KL Rahul) ಹಾಗೂ ರಿಷಭ್‌ ಪಂತ್‌ (Rishabh Pant) ನಡುವೆ ಪೈಪೋಟಿ ಇದೆ ಎಂದು ತಿಳಿದುಬಂದಿದೆ.

 

Follow Us:
Download App:
  • android
  • ios