ವಿಶ್ವ​ಕಪ್‌ನಲ್ಲಿ ಶತಕ ತಪ್ಪಿಸಿದ್ದೇ ಧೋನಿ..! ’ಗಂಭೀರ’ ಆರೋಪ

2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗೌತಮ್ ಗಂಭೀರ್ ಕೇವಲ 3 ರನ್‌ಗಳಿಂದ ಶತಕ ವಂಚಿತರಾಗಲು ಧೋನಿಯೇ ಕಾರಣ ಎಂದು ’ಗಂಭೀರ’ ಆರೋಪ ಮಾಡಿದ್ದಾರೆ. ಅಷ್ಟಕ್ಕೂ ಅಂದು ಆಗಿದ್ದೇನು ಎನ್ನುವ ರಹಸ್ಯವನ್ನು ಎಡಗೈ ಬ್ಯಾಟ್ಸ್‌ಮನ್ ಬಯಲು ಮಾಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Former Cricketer Gautam Gambhir reveals how MS Dhoni reminder led to his dismissal in 2011 World Cup final

"

ನವ​ದೆ​ಹ​ಲಿ[ನ.18]: ಭಾರತ ಕ್ರಿಕೆಟ್‌ ತಂಡದ ಮಾಜಿ ಆಟ​ಗಾರ ಗೌತಮ್‌ ಗಂಭೀರ್‌ 2011ರ ಐಸಿಸಿ ಏಕ​ದಿನ ವಿಶ್ವ​ಕಪ್‌ ಫೈನಲ್‌ನಲ್ಲಿ ಶತಕ ಕೈತ​ಪ್ಪಲು ಎಂ.ಎಸ್‌.ಧೋ​ನಿಯೇ ಕಾರಣ ಎಂಬ ಗಂಭೀರ ಆರೋಪ ಮಾಡಿ​ದ್ದಾರೆ. ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆ​ದಿದ್ದ ಫೈನಲ್‌ನಲ್ಲಿ ಗಂಭೀರ್‌ 122 ಎಸೆತ​ಗ​ಳಲ್ಲಿ 97 ರನ್‌ ಗಳಿಸಿ ಔಟಾ​ಗಿ​ದ್ದರು. ಈ ಹಿಂದೆಯೂ ಗಂಭೀರ್ ವಿರುದ್ಧ ಹಲವಾರು ಬಾರಿ ಹರಿಹಾಯ್ದಿದ್ದಾರೆ.

ಮೀಟಿಂಗ್‌ಗೆ ಚಕ್ಕರ್, ಕಮೆಂಟರಿಗೆ ಹಾಜರ್; ಗಂಭೀರ್ ಕಾಲೆಳೆದ ಫ್ಯಾನ್ಸ್!

ಭಾರತ ವಿಶ್ವ​ಕಪ್‌ ಗೆಲ್ಲು​ವಲ್ಲಿ ಗಂಭೀರ್‌ ಪ್ರಮುಖ ಪಾತ್ರವಹಿಸಿ​ದ್ದರು. ವೀರೇಂದ್ರ ಸೆಹ್ವಾಗ್‌ ಹಾಗೂ ಸಚಿನ್‌ ತೆಂಡು​ಲ್ಕರ್‌ ಔಟಾದ ಬಳಿಕ, ಗಂಭೀರ್‌ ನಾಯಕ ಧೋನಿ ಜತೆ ಸೇರಿ 109 ರನ್‌ಗಳ ಜೊತೆ​ಯಾಟವಾಡಿ​ದ್ದರು. ತಿಸಾರ ಪೆರೇರಾ ಎಸೆದ 42ನೇ ಓವರ್‌ನಲ್ಲಿ ಗಂಭೀರ್‌ ವಿಕೆಟ್‌ ಕಳೆ​ದು​ಕೊಂಡಿ​ದ್ದರು.

ಮಾಸ್ಕ್ ಧರಿಸಿದ ಬಾಂಗ್ಲಾ ತಂಡ; ದೆಹಲಿ ಸಿಎಂ ಕೇಜ್ರಿವಾಲ್ ತಿವಿದ ಗಂಭೀರ್!

ಖಾಸಗಿ ವೆಬ್‌ಸೈಟ್‌ವೊಂದಕ್ಕೆ ನೀಡಿ​ರುವ ವಿಡಿಯೋ ಸಂದ​ರ್ಶ​ನ​ದಲ್ಲಿ ಗಂಭೀರ್‌, ಧೋನಿ ವಿರುದ್ಧ ಹರಿ​ಹಾಯ್ದಿದ್ದಾರೆ. ‘ನಾ​ನೇಕೆ 97 ರನ್‌ಗಳಿಗೆ ಔಟಾದೆ, ಆಗ ಏನಾ​ಯಿ​ತು ಎನ್ನುವ ಪ್ರಶ್ನೆಯನ್ನು ಹಲವು ಬಾರಿ ಕೇಳ​ಲಾ​ಗಿದೆ. ನಾನು ಪ್ರತಿ​ಯೊ​ಬ್ಬ​ರಿಗೂ ಹೇಳ​ಲು ಇಚ್ಛಿ​ಸು​ತ್ತೇನೆ, 97 ರನ್‌ ತಲು​ಪುವ ವರೆಗೂ ನಾನು ನನ್ನ ವೈಯ​ಕ್ತಿಕ ಮೊತ್ತದ ಕಡೆ ಗಮನ ಹರಿ​ಸಿ​ರ​ಲಿಲ್ಲ. ಶ್ರೀಲಂಕಾ ನೀಡಿದ್ದ ಗುರಿ ತಲು​ಪು​ವು​ದೊಂದೇ ನನ್ನ ತಲೆಯಲ್ಲಿ​ತ್ತು’ ಎಂದು ಗಂಭೀರ್‌ ಹೇಳಿ​ದ್ದಾರೆ.

ಗಂಭೀರ್‌ ಪ್ರಕಾರ ಅವರು ಶತ​ಕದ ಸನಿ​ಹ​ದ​ಲ್ಲಿ​ದ್ದಾಗ ಧೋನಿ ವೈಯ​ಕ್ತಿಕ ಮೈಲಿ​ಗ​ಲ್ಲಿನ ಬಗ್ಗೆ ನೆನ​ಪಿ​ಸಿದ್ದೇ ಔಟಾ​ಗಲು ಕಾರಣ. ‘ನ​ನಗೆ ನೆನ​ಪಿದೆ. ನಾನು, ಧೋನಿ ಕ್ರೀಸ್‌ನಲ್ಲಿ​ದ್ದೆವು. ಓವರ್‌ ಮುಗಿ​ಯು​ತ್ತಿ​ದ್ದಂತೆ ಧೋನಿ ನನ್ನ ಬಳಿ ಬಂದು ಕೇವಲ 3 ರನ್‌ ಬಾಕಿ ಇದೆ. 3 ರನ್‌ ಗಳಿಸಿದರೆ ನಿನ್ನ ಶತಕ ಪೂರ್ಣ​ಗೊ​ಳ್ಳ​ಲಿದೆ ಎಂದ​ರು. ತಕ್ಷಣ ನನ್ನ ಗಮನ ವೈಯ​ಕ್ತಿಕ ಸಾಧನೆಯತ್ತ ಹೊರ​ಳಿತು. ವೈಯ​ಕ್ತಿಕ ಮೊತ್ತದ ಬಗ್ಗೆ ಯೋಚಿ​ಸು​ವಾಗ ಏಕಾ​ಗ್ರತೆ ಹಾಳಾ​ಗು​ತ್ತದೆ. ನಾನು ಲಂಕಾ ನೀಡಿದ್ದ ಗುರಿಯನ್ನಷ್ಟೇ ಗಮ​ನ​ದ​ಲ್ಲಿ​ಟ್ಟು​ಕೊಂಡು ಆಟ ಮುಂದು​ವ​ರಿ​ಸಿ​ದ್ದರೆ ಸುಲಭವಾಗಿ ಶತಕ ಪೂರೈ​ಸು​ತ್ತಿದ್ದೆ’ ಎಂದು ಗಂಭೀರ್‌ ಬೇಸರ ವ್ಯಕ್ತ​ಪ​ಡಿ​ಸಿ​ದ್ದಾರೆ.

Be Practical ಧೋನಿ ನಿವೃತ್ತಿಗೆ ’ಗಂಭೀರ’ ಸಲಹೆ

ಎಂ.ಎಸ್‌.ಧೋನಿ ಅಜೇಯ 91 ರನ್‌ ಗಳಿಸಿ, 28 ವರ್ಷಗಳ ಬಳಿಕ ಭಾರತ ತಂಡ ಏಕ​ದಿನ ವಿಶ್ವ ಚಾಂಪಿ​ಯನ್‌ ಆಗಲು ನೆರ​ವಾ​ಗಿ​ದ್ದರು. 2007ರ ಟಿ20 ವಿಶ್ವ​ಕಪ್‌ ಫೈನಲ್‌ನಲ್ಲೂ ಗಂಭೀರ್‌ 75 ರನ್‌ ಗಳಿ​ಸಿ, ತಂಡಕ್ಕೆ ಆಸರೆಯಾಗಿ​ದ್ದರು. ಎರಡೂ ಫೈನಲ್‌ಗಳಲ್ಲಿ ಗಂಭೀರ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿ​ರ​ಲಿಲ್ಲ.


ನವೆಂಬರ್ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Latest Videos
Follow Us:
Download App:
  • android
  • ios