Asianet Suvarna News Asianet Suvarna News

ಕೊರೋನಾ ಭೀತಿ; ಚೆಂಡಿಗೆ ಎಂಜಲು ಬಳಕೆ ನಿಷೇಧಿಸಲು ಕುಂಬ್ಳೆ ನೇತೃತ್ವದ ಐಸಿಸಿ ಸಮಿತಿ ಶಿಫಾರಸು

ಕೊರೋನಾ ಭೀತಿ ಬೆನ್ನಲ್ಲೇ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಸಮಿತಿ ಚೆಂಡಿಗೆ ಎಂಜಲು ಹಂಚುವುದಕ್ಕೆ ನಿಷೇಧ ಹೇರುವಂತೆ ಶಿಫಾರಸು ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Former Cricketer Anil Kumble led ICC committee recommends ban on saliva to shine ball
Author
Bengaluru, First Published May 19, 2020, 5:17 PM IST

ಬೆಂಗಳೂರು(ಮೇ.19): ಚೆಂಡಿನ ಹೊಳಪನ್ನು ಕಾಪಾಡಲು ಬೌಲರ್‌ಗಳು ಎಂಜಲು ಬಳಸುವುದನ್ನು ನೋಡಿರುತ್ತೇನೆ. ಕರೋನಾ ಭೀತಿಯಿಂದಾಗಿ ಚೆಂಡಿಗೆ ಎಂಜಲು ಹಚ್ಚುವುದನ್ನು ನಿಷೇಧಿಸುವಂತೆ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಸಮಿತಿ ಶಿಫಾರಸು ಮಾಡಿದೆ. 

ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ಸೇರಿದ ಸಮಿತಿ, ಮುಂಬರುವ ದಿನಗಳಲ್ಲಿ ಎಂಜಲು ಬಳಕೆ ನಿಷೇಧಕ್ಕೆ ಬರವಂತೆ ಶಿಫಾರಸು ಮಾಡಿದೆ. ಆದರೆ ಇದೇ ವೇಳೆ ಬೆವರು ಹಚ್ಚುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿಲ್ಲ. ಅಂದರೆ ಬೌಲರ್‌ಗಳು ಚೆಂಡಿಗೆ ಬೆವರನ್ನು ಹಚ್ಚಿ ಹೊಳಪನ್ನು ಕಾಯ್ದುಕೊಳ್ಳಬಹುದಾಗಿದೆ. ಇನ್ನು ಈ ಸಮಿತಿಯು ಪ್ರತಿ ಇನಿಂಗ್ಸ್‌ನಲ್ಲಿ ಡಿಆರ್‌ಎಸ್‌(ಡಿಶಿಷನ್ ರಿವ್ಯೂ ಸಿಸ್ಟಂ) ಹೆಚ್ಚು ಮಾಡುವುದಕ್ಕೂ ಶಿಫಾರಸು ಮಾಡಿದೆ. ಪ್ರಸ್ತುತ ಒಂದು ಇನಿಂಗ್ಸ್‌ನಲ್ಲಿ ಎರಡು ಡಿಆರ್‌ಎಸ್ ತೆಗೆದುಕೊಳ್ಳಲು ಅವಕಾಶವಿದೆ.

ಕ್ರಿಕೆಟ್‌ ಚೆಂಡಿನ ಹೊಳಪು ಕಾಪಾಡಲು ಎಂಜಲಿನ ಬದಲು ಮೇಣ ಬಳಕೆ?

ಈ ಸಭೆಯ ಬಳಿಕ ಅನಿಲ್ ಕುಂಬ್ಳೆ ನಾವೀಗ ಸಂಕಷ್ಟದ ಸಮಯದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಕ್ರಿಕೆಟ್ ಸೊಬಗನ್ನು ಕಾಪಾಡುವ ಹಾಗೆಯೇ ಸುರಕ್ಷಿತವಾಗಿ ಕ್ರೀಡಾಕೂಟ ಆರಂಭಕ್ಕೆ ಅನುಕೂಲವಾಗುವಂತಹ ನಿಟ್ಟಿನಲ್ಲಿ ಇಂದು ಒಂದಷ್ಟು ಶಿಫಾರಸುಗಳನ್ನು ಮಾಡಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚೆಂಡಿಗೆ ಎಂಜಲು ಹಚ್ಚುವ ಬಗ್ಗೆ ಬೌಲರ್‌ಗಳಿಗೆ ಶುರುವಾಯ್ತು ಚಿಂತೆ..!

2018ರಲ್ಲಿ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ನಡುವಿನ ಕೇಪ್‌ಟೌನ್ ಟೆಸ್ಟ್ ಪಂದ್ಯ ಬಾಲ್ ಟ್ಯಾಂಪರಿಂಗ್‌ಗೆ ಸಾಕ್ಷಿಯಾಗಿತ್ತು. ಇದಾದ ಬಳಿಕ ಐಸಿಸಿ ಚೆಂಡಿನ ಬಗ್ಗೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. 
 

Follow Us:
Download App:
  • android
  • ios