ಭಾರತದಲ್ಲಿ ಆಡುವಾಗ ಟೀಂ ಇಂಡಿಯಾಗೆ ಉಪನಾಯಕನ ಅಗತ್ಯವಿಲ್ಲಟೀಂ ಇಂಡಿಯಾ ಉಪನಾಯಕ ಪಟ್ಟ ಕಳೆದುಕೊಂಡ ಕೆ ಎಲ್ ರಾಹುಲ್ರಾಹುಲ್ ಕೈಬಿಟ್ಟು ಶುಭ್‌ಮನ್ ಗಿಲ್‌ಗೆ ಸ್ಥಾನ ನೀಡಲು ಒಲವು

ನವ​ದೆ​ಹ​ಲಿ(ಫೆ.27): ಭಾರತದಲ್ಲಿ ಸರಣಿ ಆಡುವಾಗ ತಂಡಕ್ಕೆ ಉಪನಾಯಕನ ಅವಶ್ಯಕತೆ ಇಲ್ಲ. ಉಪ​ನಾ​ಯಕ ಲಯ​ದ​ಲ್ಲಿ​ಲ್ಲ​ದಿ​ದ್ದರೆ ತಂಡದ ಆಯ್ಕೆ​ಯಲ್ಲಿ ಗೊಂದಲ ಉಂಟಾ​ಗ​ಲಿದೆ ಎಂದು ಕೆ.ಎಲ್‌.ರಾಹುಲ್‌ ಆಯ್ಕೆ ಬಗ್ಗೆ ಮಾಜಿ ಕೋಚ್‌ ರವಿಶಾಸ್ತ್ರಿ ಅಭಿಪ್ರಾಯಪಟ್ಟಿ​ದ್ದಾರೆ. ಜೊತೆಗೆ ಕೊನೆ 2 ಟೆಸ್ಟ್‌ಗೆ ಶುಭ್‌​ಮ​ನ್‌ ಗಿಲ್‌ಗೆ ಅವ​ಕಾಶ ನೀಡು​ವ ಬಗ್ಗೆ ಒಲವು ತೋರಿ​ಸಿ​ದ್ದಾರೆ. 

ಈ ಬಗ್ಗೆ ಐಸಿಸಿ ಜೊತೆ​ಗಿ​ನ ಸಂದ​ರ್ಶ​ನ​ದಲ್ಲಿ ಮಾತ​ನಾ​ಡಿರುವ ಶಾಸ್ತ್ರಿ, ‘ರಾಹುಲ್‌ ಆಟ, ಮಾನ​ಸಿಕ ಸ್ಥಿತಿ ಬಗ್ಗೆ ಬಿ​ಸಿ​ಸಿಐಗೆ ಗೊತ್ತಿದೆ. ಶುಭ್‌ಮನ್ ಗಿಲ್‌​ರನ್ನು ಹೇಗೆ ನೋಡ​ಬೇ​ಕೆಂಬುದೂ ಅವ​ರಿಗೆ ಗೊತ್ತಿದೆ. ತಂಡ​ದಲ್ಲಿ ಉಪ​ನಾ​ಯಕ ಇರ​ಲೇ​ಬೇ​ಕೆಂದು ನಾನು ಭಾವಿ​ಸು​ವು​ದಿಲ್ಲ. ಶ್ರೇಷ್ಠ 11 ಆಟ​ಗಾ​ರ​ರ ಆಯ್ಕೆ ಮಾತ್ರ ಮುಖ್ಯ​ವಾ​ಗ​ಬೇಕು. ಉಪ​ನಾ​ಯಕ ಆಡ​ದಿ​ದ್ದರೆ ಬೇರೆ​ಯ​ವ​ರಿಗೆ ಅವ​ಕಾಶ ಸಿಗ​ಬೇಕು. ಶುಭ್‌ಮನ್‌ ಗಿಲ್‌ ಸೇರಿ ಹಲ​ವರು ಭಾರತ ತಂಡದ ಬಾಗಿಲು ತಟ್ಟು​ತ್ತಿ​ದ್ದಾರೆ’ ಎಂದಿದ್ದಾರೆ.

ಆಸ್ಟ್ರೇಲಿಯಾ ಎದುರು ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕನ್ನಡಿಗ ಕೆ ಎಲ್ ರಾಹುಲ್, 71 ಎಸೆತಗಳನ್ನು ಎದುರಿಸಿ ಕೇವಲ ಒಂದು ಬೌಂಡರಿ ಸಹಿತ 20 ರನ್ ಬಾರಿಸಿ ಟೋಡ್ ಮರ್ಫಿಗೆ ವಿಕೆಟ್‌ ಒಪ್ಪಿಸಿದ್ದರು. ಇನ್ನು ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೆ ಎಲ್ ರಾಹುಲ್‌ 41 ಎಸೆತಗಳನ್ನು ಎದುರಿಸಿ 17 ರನ್ ಬಾರಿಸಿ ನೇಥನ್ ಲಯನ್ ಎಲ್‌ಬಿ ಬಲೆಗೆ ಬಿದ್ದರು. ಇನ್ನು ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಕೆ ಎಲ್ ರಾಹುಲ್, ಕೇವಲ ಒಂದು ರನ್‌ ಬಾರಿಸಿ ನೇಥನ್ ಲಯನ್‌ಗೆ ವಿಕೆಟ್‌ ಒಪ್ಪಿಸಿದರು.

ಸಿಕ್ಸರ್ ಚಚ್ಚುವುದರಲ್ಲಿ ಧೋನಿ, ರೋಹಿತ್, ತೆಂಡುಲ್ಕರ್ ದಾಖಲೆ ಮುರಿದ ಟಿಮ್ ಸೌಥಿ..!

ಕೆ ಎಲ್ ರಾಹುಲ್‌ಗೆ ಶಾಕ್ ನೀಡಿರುವ ಬಿಸಿಸಿಐ: ದಯನೀಯ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿರುವ ಕೆ ಎಲ್ ರಾಹುಲ್‌ಗೆ ಇದೀಗ ಬಿಸಿಸಿಐ ಕೂಡಾ ಶಾಕ್ ನೀಡಿದ್ದು, ಭಾರತ ಟೆಸ್ಟ್ ತಂಡದ ಉಪನಾಯಕ ಪಟ್ಟದಿಂದಲೂ ಕೆಳಗಿಳಿಸಿದೆ. ಆಸ್ಟ್ರೇಲಿಯಾ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಗೆ ಭಾರತ ತಂಡವನ್ನು ಪ್ರಕಟಿಸುವಾಗ ಕೆ ಎಲ್ ರಾಹುಲ್‌ಗೆ ತಂಡದಲ್ಲಿ ಸ್ಥಾನ ನೀಡಿಲಾಗಿದೆಯಾದರೂ, ಉಪನಾಯಕ ಪಟ್ಟ ನೀಡಿಲ್ಲ.

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ನಾಲ್ಕನೇ ಟೆಸ್ಟ್‌ಗೆ ಭಾರತದ ಟೆಸ್ಟ್ ತಂಡ: 

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (WK), ಇಶಾನ್ ಕಿಶನ್ (wk), ಆರ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್, ಜೈದೇವ್‌ ಉನಾದ್ಕತ್‌.

ಉಜ್ಜ​ಯಿನಿ ದೇವಾಲಯಕ್ಕೆ ರಾಹುಲ್‌-ಆಥಿಯಾ ಭೇಟಿ

ಭೋಪಾ​ಲ್‌: ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಭಾರ​ತೀಯ ಕ್ರಿಕೆ​ಟಿಗ ಕೆ.ಎ​ಲ್‌.​ರಾ​ಹುಲ್‌ ತಮ್ಮ ಪತ್ನಿ, ಬಾಲಿ​ವುಡ್‌ ನಟಿ ಆಥಿಯಾ ಶೆಟ್ಟಿ ಜೊತೆ ಭಾನು​ವಾರ ಮಧ್ಯ​ಪ್ರ​ದೇ​ಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿ​ದರು. ಮುಂಜಾನೆ ದೇವಾ​ಲ​ಯಕ್ಕೆ ಆಗ​ಮಿ​ಸಿದ ರಾಹು​ಲ್‌-ಆಥಿಯಾ ಪೂಜೆ​ಯಲ್ಲಿ ಪಾಲ್ಗೊಂಡು, ದೇವರ ಆಶೀ​ರ್ವಾದ ಪಡೆ​ದರು. 

ಆಸ್ಪ್ರೇ​ಲಿಯಾ ವಿರು​ದ್ಧದ 2ನೇ ಟೆಸ್ಟ್‌ ಬಳಿಕ ಭಾರ​ತೀಯ ಆಟ​ಗಾ​ರ​ರಿಗೆ ವಿಶ್ರಾಂತಿ ನೀಡ​ಲಾ​ಗಿದ್ದು, ರಾಹುಲ್‌ ಭಾನು​ವಾ​ರವೇ ತಂಡ ಕೂಡಿ​ಕೊಂಡರು ಎಂದು ತಿಳಿ​ದು​ಬಂದಿದೆ.

ಚಿನ್ನ​ಸ್ವಾಮಿ ಸ್ಟೇಡಿ​ಯಂಗೆ ಜರ್ಮನಿ ಚಾನ್ಸ​ಲರ್‌ ಭೇಟಿ

ಬೆಂಗ​ಳೂ​ರು: ಜರ್ಮ​ನಿ ಸರ್ಕಾ​ರದ ಮುಖ್ಯಸ್ಥ ಒಲಾಫ್‌ ಶಾಲ್‌್ಜ ಭಾನು​ವಾರ ನಗರದ ಚಿನ್ನ​ಸ್ವಾಮಿ ಕ್ರೀಡಾಂಗ​ಣಕ್ಕೆ ಆಗ​ಮಿಸಿ, ರಾಯಲ್‌ ಚಾಲೆಂಜ​ರ್‍ಸ್ ಬೆಂಗ​ಳೂರು(ಆ​ರ್‌​ಸಿ​ಬಿ​) ತಂಡದ ಪುರು​ಷ, ಮಹಿಳಾ ಆಟ​ಗಾ​ರರು, ಅಧಿ​ಕಾ​ರಿ​ಗಳು, ಸಹಾ​ಯಕ ಸಿಬ್ಬಂದಿ ಜೊತೆ ಸಮಾ​ಲೋ​ಚನೆ ನಡೆ​ಸಿ​ದರು. ಅವ​ರಿಗೆ ಫ್ರಾಂಚೈಸಿ ವತಿ​ಯಿಂದ ತಂಡದ ಜೆರ್ಸಿ, ಕ್ರಿಕೆಟಿಗರ ಹಸ್ತಾಕ್ಷರವುಳ್ಳ ಬ್ಯಾಟ್‌ ನೀಡಿ ಗೌರ​ವಿ​ಸ​ಲಾ​ಯಿತು.