ಮುಂಬೈ(ನ.14): ಐಪಿಎಲ್ ಟೂರ್ನಿಯಲ್ಲಿ ಅವಕಾಶ ಪಡೆಯಲು ಆಟಗಾರರು ಇನ್ನಿಲ್ಲದ  ಕಸರತ್ತು ನಡೆಸುತ್ತಾರೆ. ಒಂದು ಅವಕಾಶ, ಕ್ರಿಕೆಟಿಗನ ಕರಿಯರ್ ಬದಲಿಸಬಲ್ಲದು. ಹೆಸರೇ ಗೊತ್ತಿಲ್ಲದ ಆಟಗಾರ ರಾತ್ರಿಯೊಳಗೆ ಸ್ಟಾರ್ ಆಟಗಾರನಾಗಬಲ್ಲ. ಹೀಗಾಗಿ ಐಪಿಎಲ್ ಆಡಲು, ಐಪಿಎಲ್‌ಗೆ ಆಯ್ಕೆಯಾಗಲು ಹಾತೊರೆಯುತ್ತಾರೆ. ಆದರೆ ಕೆಲ ಆಟಗಾರರು ಇಂತಹ ಐಪಿಎಲ್ ಅವಕಾಶವನ್ನೇ ತರಿಸ್ಕರಿಸಿದ್ದಾರೆ.

ಇದನ್ನೂ ಓದಿ: ಅರ್ಧಕ್ಕರ್ಧ ಆಟಗಾರರಿಗೆ ಗೇಟ್ ಪಾಸ್ ಕೊಟ್ಟ RCB..!

1 ಕುಸಾಲ್ ಪರೇರಾ
2018ರಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ನಿಷೇಧಕ್ಕೊಳಗಾದ, ಸನ್ ರೈಸರ್ಸ್ ಹೈದರಾಬಾದ್ ಕೇನ್ ವಿಲಿಯಮ್ಸ್‌ಗೆ ನಾಯಕತ್ವ ನೀಡಲಾಯಿತು. ಆದರೆ ವಿಲಿಯಮ್ಸನ್ ಕೂಡ ಅಲಭ್ಯರಾದಾಗ ಹೈದರಾಬಾದ್ ಲಂಕಾ ಸ್ಫೋಟಕ ಬ್ಯಾಟ್ಸ್‌ಮನ್ ಕುಸಾಲ್ ಪರೇರಾ ಕರೆ ಮಾಡಿತ್ತು. ಆದರೆ ಪರೇರಾ ಲಂಕಾ ದೇಸಿ ಕ್ರಿಕೆಟ್ ಆಡಿ ಟೆಸ್ಟ್ ತಂಡಕ್ಕೆ  ಕಮ್‌ಬ್ಯಾಕ್ ಪ್ರಯತ್ನದಲ್ಲಿದ್ದರು. ಹೀಗಾಗಿ ಐಪಿಎಲ್ ಆಫರ್ ತಿರಸ್ಕರಿಸಿದ್ದರು.

ಇದನ್ನೂ ಓದಿ: IPL 2020: 9 ಕ್ರಿಕೆಟಿಗರಿಗೆ ಶಾಕ್; ನಿಮ್ಮ ಸೇವೆ ಸಾಕು ಎಂದ ಡೆಲ್ಲಿ ಕ್ಯಾಪಿಟಲ್ಸ್!

2) ಮಿಚೆಲ್ ಮಾರ್ಶ್
ಆಸ್ಟ್ರೇಲಿಯಾ ಕ್ರಿಕೆಟಿಗ ಮಿಚೆಲ್ ಮಾರ್ಶ್, 2010ರಲ್ಲಿ ಡೆಕ್ಕನ್ ಚಾರ್ಜಸ್, 2011ರಲ್ಲಿ ಪುಣೆ ವಾರಿಯರ್ಸ್ ಹಾಗೂ 2016ರಲ್ಲಿ ರೈಸಿಂಗ್ ಪುಣೆಸೂಪರ್‌ಜೈಂಟ್ಸ್ ತಂಡದ ಪರ ಆಡಿದ್ದರು. 2019ರಲ್ಲಿ ಮಿಚೆಲ್ ಮಾರ್ಶ್‌ಗೆ ಐಪಿಎಲ್ ಆಫರ್ ತಿರಸ್ಕರಿಸಿದ್ದರು. ಆಸ್ಟ್ರೇಲಿಯಾ ಟೆಸ್ಟ್ ತಂಡದಲ್ಲಿ ಆಡೋ ಕಾರಣದಿಂದ ಮಾರ್ಶ್ ಐಪಿಎಲ್‌ನಿಂದ ದೂರ ಉಳಿದಿದ್ದರು.

3) ತುಷಾರ್ ದೇಶ್‌ಪಾಂಡೆ
ಮುಂಬೈ ಪ್ರತಿಭಾನ್ವಿತ ಯುವ ಕ್ರಿಕೆಟಿಗ ತುಷಾರ್ ದೇಶ್‌ಪಾಂಡೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಅತೀ ದೊಡ್ಡ ಆಫರ್ ನೀಡಿತ್ತು. 2019ರ ಐಪಿಎಲ್ ಹರಾಜಿಗೂ ಮುನ್ನ ತುಷಾರ್ ದೇಶ್‌ಪಾಂಡೆ ಸಂಪರ್ಕಿಸಿದ್ದ ಪಂಜಾಬ್, ಒಪ್ಪಂದ ಮಾಡಿಕೊಳ್ಳಲು ಮುಂದಾಗಿತ್ತು. ಆದರೆ ತುಷಾರ್ ತನ್ನ ಜಿಮ್ಖಾನ್ ಕ್ಲಬ್ ಆಡುವ ಕಾರಣದಿಂದ ಐಪಿಎಲ್ ಆಫರ್ ತಿರಸ್ಕರಿಸಿದ್ದರು.

ಇದನ್ನೂ ಓದಿ:IPL 2020: ಹರಾಜಿಗೆ ಸಜ್ಜಾಗಿರುವ 8 ತಂಡದಲ್ಲಿರುವ ಬಾಕಿ ಹಣ; ಪಂಜಾಬ್‌ಗೆ ಮೊದಲ ಸ್ಥಾನ!

4) ಆ್ಯರೋನ್ ಫಿಂಚ್
2019ರ ವಿಶ್ವಕಪ್ ಟೂರ್ನಿ ಆಡೋ ಸಲುವಾಗಿ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟ್ಸ್‌ಮನ್ ಆ್ಯರೋನ್ ಫಿಂಚ್, ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದರು. 2010ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಫಿಂಚ್ 2018ರ ವರೆಗೆ ಟೂರ್ನಿ ಆಡಿದ್ದರು,. ಆದರೆ 2019ರಲ್ಲಿ ಟೂರ್ನಿಯಿಂದ ಹೊರಗುಳಿದರು.

5) ರವಿ ಬೋಪಾರ
ಇಂಗ್ಲೆಂಡ್ ಕ್ರಿಕೆಟಿಗ ರವಿ ಬೋಪಾರ ಆರಂಭಿಕ ಐಪಿಎಲ್ ಆವೃತ್ತಿಗಳಲ್ಲಿ ಸಕ್ರೀಯರಾಗಿದ್ದರು. 2011ರಲ್ಲಿ ಮುಂಬೈ ಇಂಡಿಯನ್ಸ್ ಹಾಗೂ 2015ರಲ್ಲಿ ಸನ್ ರೈಸ್ ಹೈದರಾಬಾದ್ ರವಿ ಬೋಪಾರ ಸಂಪರ್ಕಿಸಿತ್ತು. ಆದರೆ ಎರಡು ಬಾರಿ ಬೋಪಾರ ಐಪಿಎಲ್ ಟೂರ್ನಿ ಆಡಲು ನಿರಾಕರಿಸಿದ್ದರು.