ದುಬೈ(ಅ.28): ಟಿ20 ವಿಶ್ವಕಪ್ 2020ರ ಟೂರ್ನಿಗೆ ಆಸ್ಟ್ರೇಲಿಯಾ ಸಿದ್ದತೆ ಮಾಡಿಕೊಳ್ಳುತ್ತಿದೆ. ಇತ್ತ ನೇರ ಅರ್ಹತೆ ಪಡೆದ ತಂಡಗಳೂ ಕೂಡ ಪ್ಲೇಯಿಂಗ್ ಇಲೆವೆನ್, ತಂಡದ ಕಾಂಬಿನೇಷನ್ ಸೇರಿದಂತೆ ಹಲವು ಪ್ರಯೋಗಗಳನ್ನು ಮಾಡುತ್ತಾ ಟೂರ್ನಿಗೆ ಸಜ್ಜಾಗುತ್ತಿದೆ. ಇದರ ನಡುವೆ ಕ್ರಿಕೆಟ್ ಶಿಶು ಎಂದೇ ಕರೆಯಿಸಿಕೊಳ್ಳುವ ಪಪುವಾ ನ್ಯೂಗಿನಿಯಾ ತಂಡ, 2020ರ ಟಿ20 ವಿಶ್ವಕಪ್ ಅರ್ಹತಾ ಸುತ್ತಿಗೆ ಪ್ರವೇಶ ಪಡೆದಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾ ಪ್ರಧಾನಿಯ T20 ವಿಶ್ವಕಪ್ ಮನವಿಗೆ ಸ್ಪಂದಿಸಿದ ನರೇಂದ್ರ ಮೋದಿ!

ಪಪುವಾ ನ್ಯೂಗಿನಿಯಾ ತಂಡ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಅರ್ಹತಾ ಸುತ್ತಿಗೆ ಎಂಟ್ರಿ ಕೊಟ್ಟಿದೆ. ದುಬೈನಲ್ಲಿ ನಡೆದ ಪಂದ್ಯದಲ್ಲಿ ಕೀನ್ಯಾ ತಂಡವನ್ನು ಸೋಲಿಸಿದ ಪಪುವಾ ನ್ಯೂಗಿನಿಯಾ ಪ್ರತಿಷ್ಠಿತ ಟೂರ್ನಿಯ ಅರ್ಹತಾ ಸುತ್ತಿಗೆ ಲಗ್ಗೆ ಇಟ್ಟಿದೆ.

 

ಇದನ್ನೂ ಓದಿ: ಇನ್ಮುಂದೆ ಪ್ರತಿ ವರ್ಷ ICC ವಿಶ್ವಕಪ್; BCCIನಿಂದ ವಿರೋಧ!

ಒಮಾನ್ ತಂಡವನ್ನು ಮಣಿಸಿದ ಐರ್ಲೆಂಡ್ ಕೂಡ 2020ರ ಟಿ20 ವಿಶ್ವಕಪ್ ಟೂರ್ನಿ ಅರ್ಹತಾ ಸುತ್ತಿಗೆ ಪ್ರವೇಶ ಪಡಡೆದಿದೆ. 2020ರಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. 2013ರಿಂದ ಐಸಿಸಿ ಪ್ರಶಸ್ತಿ ಇಲ್ಲದೆ ಕೊರಗಿರುವ ಟೀಂ ಇಂಡಿಯಾ ಇದೀಗ 2ನೇ ಚುಟುಕು ವಿಶ್ವಕಪ್ ಟ್ರೋಫಿ ಗೆಲುವಿಗೆ ಕಸರತ್ತು ನಡೆಸುತ್ತಿದೆ. ಎಂ.ಎಸ್.ಧೋನಿ ನಾಯಕತ್ವದ ಟೀಂ ಇಂಡಿಯಾ 2007ರಲ್ಲಿ ಚೊಚ್ಚಲ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತ್ತು.