ದುಬೈ(ಅ.16): ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಮಿತಿ (ಐ​ಸಿ​ಸಿ) ಹಾಗೂ ಭಾರ​ತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿ​ಸಿ​ಸಿಐ) ನಡುವೆ ಮತ್ತೊಂದು ಸುತ್ತಿನ ತಿಕ್ಕಾಟ ಆರಂಭ​ವಾ​ಗುವ ಸಾಧ್ಯತೆ ದಟ್ಟವಾಗಿದೆ. ಬಿಸಿ​ಸಿ​ಐ ವಿರೋ​ಧದ ನಡುವೆಯೂ ಮುಂಬರುವ ಭವಿ​ಷ್ಯದ ಕ್ರಿಕೆಟ್‌ ಸರ​ಣಿ​ಗಳ ವೇಳಾ​ಪ​ಟ್ಟಿ(ಎಫ್‌ಟಿಪಿ)ಯಲ್ಲಿ ವರ್ಷ​ಕ್ಕೊಂದು ವಿಶ್ವ​ಕಪ್‌ ಆಯೋ​ಜಿ​ಸಲು ಐಸಿಸಿ ಮುಂದಾ​ಗು​ತ್ತಿದೆ. ಕಳೆದ ವಾರ ಇಲ್ಲಿ ನಡೆದ ಸಭೆಯಲ್ಲಿ 2023-2028ರ ಅವ​ಧಿ​ಯಲ್ಲಿ ವರ್ಷ​ಕ್ಕೊಂದು ವಿಶ್ವ​ಕಪ್‌ (ಪು​ರುಷ ಹಾಗೂ ಮಹಿ​ಳಾ) ಆಯೋ​ಜಿ​ಸಲು ಐಸಿಸಿ ನಿರ್ಧ​ರಿ​ಸಿತು ಎಂದು ಪ್ರತಿ​ಷ್ಠಿತ ಮಾಧ್ಯ​ವ​ಮೊಂದು ವರದಿ ಮಾಡಿದೆ. ಈ ಅವ​ಧಿ​ಯಲ್ಲಿ ಒಟ್ಟು ಎರಡು 50 ಓವರ್‌ ವಿಶ್ವ​ಕಪ್‌, 4 ಟಿ20 ವಿಶ್ವ​ಕಪ್‌ ಹಾಗೂ 2 ಹೊಸ ಟೂರ್ನಿ​ಗ​ಳನ್ನು ನಡೆ​ಸಲು ಐಸಿಸಿ ಯೋಜನೆ ರೂಪಿ​ಸಿದೆ. ಹೊಸ ಟೂರ್ನಿಯೂ 50 ಓವರ್‌ ಮಾದ​ರಿಯ ಟೂರ್ನಿಯೇ ಆಗಿ​ರ​ಲಿದ್ದು, ಚಾಂಪಿ​ಯನ್ಸ್‌ ಟ್ರೋಫಿ ರೀತಿ​ಯಲ್ಲಿ 6 ತಂಡ​ಗಳ ನಡುವೆ ನಡೆ​ಯ​ಲಿದೆ ಎನ್ನ​ಲಾ​ಗಿದೆ.

ಇದನ್ನೂ ಓದಿ: ಬೌಂಡರಿ ಕೌಂಟ್ ನಿಯಮಕ್ಕೆ ಫುಲ್‌ ಸ್ಟಾಪ್‌ಯಿಟ್ಟ ICC

ಬಿಸಿ​ಸಿಐ ವಿರೋಧವೇಕೆ?: ಒಂದೊಮ್ಮೆ ಐಸಿಸಿ ವರ್ಷ​ಕ್ಕೊಂದು ವಿಶ್ವ​ಕಪ್‌ ನಡೆ​ಸಿದರೆ ಬಿಸಿ​ಸಿಐಗೆ ಪ್ರಸಾರ ಹಕ್ಕು ನಷ್ಟವಾಗ​ಲಿದೆ. ಉದಾ​ಹ​ರಣೆಗೆ, ಸ್ಟಾರ್‌ ಸ್ಪೋಟ್ಸ್‌ರ್‍ ಇಲ್ಲವೇ ಸೋನಿ ವಾಹಿನಿ ಕ್ರಿಕೆಟ್‌ ಪಂದ್ಯ​ಗಳ ಪ್ರಸಾರ ಹಕ್ಕು (ಟೀವಿ, ರೇಡಿಯೋ, ಡಿಜಿ​ಟಲ್‌) ಪಡೆ​ಯಲು .100 ಬಂಡ​ವಾಳ ಹೂಡಲು ಇಚ್ಛಿ​ಸಿವೆ ಎಂದುಕೊಂಡರೆ, ಇಲ್ಲಿ ಐಸಿ​ಸಿ ಹಾಗೂ ಬಿಸಿ​ಸಿಐ ನಡುವೆ ಸ್ಪರ್ಧೆ ಏರ್ಪ​ಡ​ಲಿದೆ. ಬಿಸಿ​ಸಿಐ ಜನ​ಪ್ರಿಯ ಐಪಿ​ಎಲ್‌ ಹಾಗೂ ಪ್ರಮುಖ ದಿಪ​ಕ್ಷೀಯ ಸರ​ಣಿ​ಗ​ಳನ್ನು ಹೊಂದಿದೆ. ಐಸಿಸಿ, ವರ್ಷ​ಕ್ಕೊಂದು ವಿಶ್ವ​ಕಪ್‌ (ಟಿ20 ಇಲ್ಲವೇ ಏಕ​ದಿ​ನ) ನಡೆ​ಸಿ​ದರೆ ಸಹ​ಜ​ವಾ​ಗಿಯೇ ವಾಹಿ​ನಿ​ಗಳು ಐಸಿಸಿ ಟೂರ್ನಿ​ಗಳ ಪ್ರಸಾರ ಹಕ್ಕು ಖರೀ​ದಿ​ಸಲು ಮುಂದಾ​ಗು​ತ್ತವೆ. ವಿಶ್ವ​ಕಪ್‌ ಪ್ರಸಾರಕ್ಕೆ .60 ಖರ್ಚು ಮಾಡಿದರೆ, ಬಿಸಿ​ಸಿಐಗೆ ನೀಡಲು ಉಳಿ​ಯು​ವುದು ಕೇವಲ .40. ಪ್ರಸಾರ ಹಕ್ಕು ಹಣದಲ್ಲಿ ಸಿಂಹ​ಪಾಲು ಅನು​ಭ​ವಿ​ಸು​ತ್ತಿ​ರುವ ಬಿಸಿ​ಸಿ​ಐಗೆ ಭಾರೀ ನಷ್ಟಉಂಟಾ​ಗ​ಲಿದೆ.

ಇದನ್ನೂ ಓದಿ: ಜಿಂಬಾಬ್ವೆ ಕ್ರಿಕೆಟ್‌ ತಂಡದ ಮೇಲಿನ ನಿಷೇಧ ತೆರ​ವುಗೊಳಿಸಿದ ICC

ಬಿಸಿ​ಸಿಐನಿಂದಲೇ ಐಸಿ​ಸಿಗೆ ಹಣ: ಐಸಿಸಿಗೆ ಬರುವ ಜಾಹೀ​ರಾತು, ಪ್ರಸಾರ ಹಕ್ಕು, ಪ್ರಯೋ​ಜ​ಕತ್ವ ಮೊತ್ತದ ಶೇ. ಶೇ 75-80ರಷ್ಟುಹಣ ಭಾರ​ತ​ದಿಂದಲೇ ಸಿಗ​ಲಿದೆ. ಹೀಗಿ​ರುವಾಗ ಸಹ​ಜ​ವಾ​ಗಿಯೇ ಬಿಸಿ​ಸಿಐ ಹೆಚ್ಚಿನ ಲಾಭ ಪಡೆ​ದು​ಕೊ​ಳ್ಳು​ತ್ತಿದೆ. ವರ್ಷ​ಕ್ಕೊಂದು ವಿಶ್ವ​ಕಪ್‌ ಆಯೋ​ಜಿ​ಸುವ ಮೂಲಕ ಬಿಸಿ​ಸಿಐಗೆ ಹರಿ​ಯುವ ಹಣದ ಹೊಳೆಯನ್ನು ತಪ್ಪಿ​ಸು​ವುದು ಐಸಿ​ಸಿಯ ತಂತ್ರವಾಗಿದೆ ಎಂದು ಬಿಸಿ​ಸಿಐ ಅಧಿ​ಕಾ​ರಿ​ಯೊ​ಬ್ಬರು ವಿಶ್ಲೇ​ಷಿ​ಸಿ​ದ್ದಾರೆ.