ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಭಾರತದ ಜೆರ್ಸಿಯಲ್ಲಿ ‘ಪಾಕಿಸ್ತಾನ’ ಹೆಸರು!

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದ ಹೊಸ ಜೆರ್ಸಿ ಬಿಡುಗಡೆಯಾಗಿದ್ದು, ಆತಿಥ್ಯ ರಾಷ್ಟ್ರ ಪಾಕಿಸ್ತಾನದ ಹೆಸರು ಅದರಲ್ಲಿ ಕಾಣಿಸಿಕೊಂಡಿದೆ. ತಂದೆ ನಿಧನದ ಹಿನ್ನೆಲೆಯಲ್ಲಿ ಭಾರತ ತಂಡದ ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ತವರಿಗೆ ಮರಳಿದ್ದಾರೆ.

First glimpse of Indian Champions Trophy jersey features Pakistan imprint kvn

ದುಬೈ: ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ ಭಾರತ ತಂಡದ ಹೊಸ ಜೆರ್ಸಿ ಬಿಡುಗಡೆಯಾಗಿದೆ. ವಿಶೇಷವೇನೆಂದರೆ, ಜೆರ್ಸಿಯಲ್ಲಿ ಆತಿಥ್ಯ ರಾಷ್ಟ್ರ ಪಾಕಿಸ್ತಾನದ ಹೆಸರು ಕಾಣಿಸಿಕೊಂಡಿದೆ.

ಟೂರ್ನಿಗೆ ಪಾಕ್‌ ಆತಿಥ್ಯ ವಹಿಸಿದರೂ, ಭಾರತ ತಂಡ ಪಾಕ್‌ಗೆ ತೆರಳುವುದಿಲ್ಲ, ಬದಲಾಗಿ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಹೀಗಾಗಿ ಟೀಂ ಇಂಡಿಯಾ ಜೆರ್ಸಿ ಮೇಲೆ ಪಾಕಿಸ್ತಾನದ ಹೆಸರು ಇರುವವುದಿಲ್ಲ ಎಂದು ಈ ಮೊದಲು ವರದಿಯಾಗಿತ್ತು. ಆದರೆ ಐಸಿಸಿ ಟೂರ್ನಿಯಲ್ಲಿ ಆತಿಥ್ಯ ದೇಶದ ಹೆಸರು ನಮೂದಿಸುವುದು ಕಡ್ಡಾಯ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಲೋಗೊ ಜೊತೆ ಪಾಕ್‌ ಹೆಸರು ಸಹ ಭಾರತದ ಜೆರ್ಸಿ ಮೇಲೆ ಕಾಣಿಸಿಕೊಂಡಿದೆ.

 
 
 
 
 
 
 
 
 
 
 
 
 
 
 

A post shared by ICC (@icc)

ಚಾಂಪಿಯನ್ಸ್ ಟ್ರೋಫಿಯಲ್ಲಿ ಫಾರ್ಮ್‌ ಮರಳಲು ಹಾತೊರೆಯುತ್ತಿದ್ದಾರೆ ಈ 7 ಕ್ರಿಕೆಟ್ ಸ್ಟಾರ್ಸ್‌!

ತಂದೆ ನಿಧನ: ತವರಿಗೆ ಮರಳಿದ ಬೌಲಿಂಗ್‌ ಕೋಚ್‌ ಮೋರ್ಕೆಲ್‌

ದುಬೈ: ಭಾರತ ತಂಡದ ಬೌಲಿಂಗ್‌ ಕೋಚ್‌ ಮೋರ್ನೆ ಮೋರ್ಕೆಲ್‌ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ತೊರೆದು ತವರಿಗೆ ಹಿಂದಿರುಗಿದ್ದಾರೆ. ತಮ್ಮ ತಂದೆ ನಿಧನ ಹೊಂದಿದ ಕಾರಣಕ್ಕೆ ಅವರು ತವರು ದೇಶ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ದುಬೈಗೆ ತೆರಳಿದ್ದ ಭಾರತ ತಂಡದ ಜೊತೆ ಮೋರ್ಕೆಲ್‌ ಕೂಡಾ ಇದ್ದರು. ಬಳಿಕ ತಂಡದ ಮೊದಲ ಅಭ್ಯಾಸ ಶಿಬಿರದಲ್ಲೂ ಮೋರ್ಕೆಲ್‌ ಉಪಸ್ಥಿತರಿದ್ದರು. ಆದರೆ ಸೋಮವಾರ ಅವರು ತಂಡದ ಜೊತೆ ಕಾಣಿಸಲಿಲ್ಲ.

ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ 8 ಸೈನ್ಯ ಸಜ್ಜು; ಟೀಂ ಇಂಡಿಯಾ ವೀಕ್ನೆಸ್ ಏನು?

ಇನ್ನು, ಅವರು ಚಾಂಪಿಯನ್ಸ್‌ ಟ್ರೋಫಿ ವೇಳೆ ತಂಡ ಕೂಡಿಕೊಳ್ಳುವ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಟೂರ್ನಿ ಬುಧವಾರ ಆರಂಭಗೊಳ್ಳಲಿದೆ.

ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ

ಪಂದ್ಯ ದಿನಾಂಕ ಸ್ಥಳ

ಪಾಕಿಸ್ತಾನ-ನ್ಯೂಜಿಲೆಂಡ್‌ ಫೆ.19 ಕರಾಚಿ

ಭಾರತ-ಬಾಂಗ್ಲಾದೇಶ ಫೆ.20 ದುಬೈ

ಅಫ್ಘಾನಿಸ್ತಾನ-ದ.ಆಫ್ರಿಕಾ ಫೆ.21 ಕರಾಚಿ

ಆಸ್ಟ್ರೇಲಿಯಾ-ಇಂಗ್ಲೆಂಡ್‌ ಫೆ.22 ಲಾಹೋರ್‌

ಭಾರತ-ಪಾಕಿಸ್ತಾನ ಫೆ.23 ದುಬೈ

ಬಾಂಗ್ಲಾ-ನ್ಯೂಜಿಲೆಂಡ್ ಫೆ.24 ರಾವಲ್ಪಿಂಡಿ

ಆಸ್ಟ್ರೇಲಿಯಾ-ದ.ಆಫ್ರಿಕಾ ಫೆ.25 ರಾವಲ್ಪಿಂಡಿ

ಅಫ್ಘಾನಿಸ್ತಾನ-ಇಂಗ್ಲೆಂಡ್‌ ಫೆ.26 ಲಾಹೋರ್‌

ಪಾಕಿಸ್ತಾನ-ಬಾಂಗ್ಲಾ ಫೆ.27 ರಾವಲ್ಪಿಂಡಿ

ಆಫ್ಘನ್‌-ಆಸ್ಟ್ರೇಲಿಯಾ ಫೆ.28 ಲಾಹೋರ್‌

ದ.ಆಫ್ರಿಕಾ-ಇಂಗ್ಲೆಂಡ್‌ ಮಾ.1 ಕರಾಚಿ

ಭಾರತ-ನ್ಯೂಜಿಲೆಂಡ್‌ ಮಾ.2 ದುಬೈ

1ನೇ ಸೆಮಿಫೈನಲ್‌ ಮಾ.4 ದುಬೈ

2ನೇ ಸೆಮಿಫೈನಲ್‌ ಮಾ.5 ಲಾಹೋರ್‌

ಫೈನಲ್‌ ಮಾ.9 ಲಾಹೋರ್‌/ದುಬೈ

* ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 2.30ಕ್ಕೆ ಆರಂಭ

Latest Videos
Follow Us:
Download App:
  • android
  • ios