ಪ್ರೊ ಲೀಗ್ ಹಾಕಿ: ಆಸ್ಪ್ರೇಲಿಯಾ ವಿರುದ್ಧ ಭಾರತಕ್ಕೆ 3-4ರ ಸೋಲು
ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ತಂಡವು ರೋಚಕ ಸೋಲು ಕಂಡಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...
ಭುವನೇಶ್ವರ(ಫೆ.22): ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯ ಆಸ್ಪ್ರೇಲಿಯಾ ವಿರುದ್ಧದ ಮೊದಲ ಚರಣದ ಪಂದ್ಯದಲ್ಲಿ ಭಾರತ 3-4 ಗೋಲುಗಳ ವೀರೋಚಿತ ಸೋಲು ಅನುಭವಿಸಿತು.
ಪ್ರೊ ಲೀಗ್ ಹಾಕಿ: ಭಾರತಕ್ಕೆ ಆಸ್ಪ್ರೇಲಿಯಾ ಸವಾಲು
ಶುಕ್ರವಾರ ಇಲ್ಲಿನ ಕಳಿಂಗಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಹಾಲಿ ಚಾಂಪಿಯನ್, ವಿಶ್ವ ನಂ.2 ಆಸ್ಪ್ರೇಲಿಯಾ ವಿರುದ್ಧ ಭಾರತ ಹೋರಾಟ ಪ್ರದರ್ಶಿಸಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಭಾರತ ಪರ ರಾಜ್‌ಕುಮಾರ್ ಪಾಲ್ (36ನೇ, 47ನೇ ನಿ.,) ಹಾಗೂ ರೂಪಿಂದರ್ ಪಾಲ್ ಸಿಂಗ್ (52ನೇ ನಿ.) ಗೋಲು ಬಾರಿಸಿದರು.
ಏಷ್ಯನ್ ಕುಸ್ತಿ: ಸಾಕ್ಷಿಗೆ ಬೆಳ್ಳಿ, ವಿನೇಶ್‌ಗೆ ಕಂಚು
ಇನ್ನು ಆಸ್ಪ್ರೇಲಿಯಾ ಪರ ಡಲ್ಯಾನ್ (6ನೇ ನಿ.), ಟಾಮ್ ವಿಕ್‌ಹ್ಯಾಮ್ (18ನೇ ನಿ.), ಲಾಚ್ಲಾನ್ ಶಾರ್ಪ್ (41ನೇ ನಿ.) ಹಾಗೂ ಜೇಕಬ್ ಆ್ಯಂಡರ್‌ಸನ್ (42ನೇ ನಿ.) ಗೋಲು ಗಳಿಸಿದರು. ತಂಡಕ್ಕಿದು ಟೂರ್ನಿಯಲ್ಲಿ ಸತತ 2ನೇ ಸೋಲಾಗಿದೆ. ಮೊದಲ ಮುಖಾಮುಖಿಯಲ್ಲಿ ನೆದರ್‌ಲೆಂಡ್ಸ್ ವಿರುದ್ಧ ಗೆದ್ದಿದ್ದ ಭಾರತ, ಬೆಲ್ಜಿಯಂ ವಿರುದ್ಧ ಮೊದಲ ಪಂದ್ಯ ಗೆದ್ದು, 2ನೇ ಚರಣದಲ್ಲಿ ಸೋಲುಂಡಿತ್ತು. ಆಸ್ಪ್ರೇಲಿಯಾ ವಿರುದ್ಧದ 2ನೇ ಚರಣದ ಪಂದ್ಯ ಶನಿವಾರ ನಡೆಯಲಿದೆ.