ಹಾಕಿ ಪ್ರೊ ಲೀಗ್‌ನಲ್ಲಿಂದು ಭಾರತ ಹಾಕಿ ತಂಡವು ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲು ಸಜ್ಜಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

ಭುವನೇಶ್ವರ(ಫೆ.21): ಎಫ್‌ಐಎಚ್‌ ಪ್ರೊ ಲೀಗ್‌ ಟೂರ್ನಿಯಲ್ಲಿ ಮೊದಲ ಬಾರಿ ಆಡುತ್ತಿರುವ ಭಾರತ ಹಾಕಿ ತಂಡ, ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಪ್ರೇಲಿಯಾ ಸವಾಲನ್ನು ಎದುರಿಸಲಿದೆ.

Scroll to load tweet…

ನೆದರ್‌ಲೆಂಡ್ಸ್‌ ಹಾಗೂ ಬೆಲ್ಜಿಯಂ ವಿರುದ್ಧದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿರುವ ಭಾರತ ತಂಡ, ಆಸ್ಪ್ರೇಲಿಯಾ ವಿರುದ್ಧ ಗೆಲುವಿನ ಉತ್ಸಾಹದಲ್ಲಿ ಕಣಕ್ಕಿಳಿಯುತ್ತಿದೆ. ಪ್ರೊ ಲೀಗ್‌ನಲ್ಲಿ 4 ಪಂದ್ಯಗಳನ್ನಾಡಿರುವ ಭಾರತ 8 ಅಂಕಗಳಿಸಿದ್ದು, ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇತ್ತ ಆಸ್ಪ್ರೇಲಿಯಾ ಕೂಡ 4 ಪಂದ್ಯಗಳನ್ನಾಡಿದ್ದು 6 ಅಂಕಗಳಿಸಿ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

ಎಫ್‌ಐಎಚ್‌ ಪ್ರೊ ಲೀಗ್‌: ಬೆಲ್ಜಿಯಂ ವಿರುದ್ಧ ಭಾರತಕ್ಕೆ ಜಯ

ಕಳೆದ ತಿಂಗಳು ಲೀಗ್‌ನ ಆರಂಭದಲ್ಲಿ ನೆದರ್‌ಲೆಂಡ್ಸ್‌ ಎದುರು ಭರ್ಜರಿ ಆಟದಿಂದ ಗಮನಸೆಳೆದಿದ್ದ ಮನ್‌ಪ್ರೀತ್‌ ಸಿಂಗ್‌ ಪಡೆ, ವಿಶ್ವ ಮತ್ತು ಯುರೋಪಿಯನ್‌ ಚಾಂಪಿಯನ್‌ ಬೆಲ್ಜಿಯಂ ವಿರುದ್ಧದ ಮೊದಲ ಪಂದ್ಯದಲ್ಲಿ 2-1ರಿಂದ ಜಯಭೇರಿ ಬಾರಿಸಿತ್ತು. ಆದರೆ ಬೆಲ್ಜಿಯಂ ವಿರುದ್ಧದ 2ನೇ ಪಂದ್ಯದಲ್ಲಿ 2-3ರಿಂದ ಪರಾಭವ ಹೊಂದಿತ್ತು.

Scroll to load tweet…

ವಿಶ್ವ ನಂ.2 ಆಸ್ಪ್ರೇಲಿಯಾ ತಂಡ ಇತ್ತೀಚಿನ 30 ಪಂದ್ಯಗಳಲ್ಲಿ 22ರಲ್ಲಿ ಗೆಲುವು ಸಾಧಿಸಿದ್ದು ಉತ್ತಮ ಲಯ ಹೊಂದಿದೆ. ವಿಶ್ವ ನಂ.4 ಭಾರತ, 2016ರಲ್ಲಿ ಬೆಂಡಿಗೊದಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯವೊಂದರಲ್ಲಿ ಆಸ್ಪ್ರೇಲಿಯಾ ವಿರುದ್ಧ 3-2ರಿಂದ ಜಯಿಸಿತ್ತು.

ಶುಕ್ರವಾರ ಮೊದಲ ಪಂದ್ಯ ನಡೆದರೆ, ಈ ಹಂತದ 2ನೇ ಪಂದ್ಯ ಶನಿವಾರ ನಡೆಯಲಿದೆ. ಈ ಪಂದ್ಯಗಳ ಬಳಿಕ ಭಾರತ ವಿದೇಶಕ್ಕೆ ಪ್ರಯಾಣ ಬೆಳೆಸಲಿದೆ. ಏಪ್ರಿಲ್‌ 25 ಮತ್ತು 26 ರಂದು ಭಾರತ ಜರ್ಮನಿ ವಿರುದ್ಧ, ಮೇ.2 ಮತ್ತು 3 ರಂದು ಗ್ರೇಟ್‌ ಬ್ರಿಟನ್‌ ವಿರುದ್ಧ ಪಂದ್ಯವನ್ನಾಡಲಿದೆ.

ಪಂದ್ಯ ಆರಂಭ: ಸಂಜೆ 7ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋಟ್ಸ್‌ರ್‍ 2