ರಾಜ್‌ಕೋಟ್ (ನ.05): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹುಟ್ಟು ಹಬ್ಬಕ್ಕೆ , ಕೋಚ್ ರವಿ ಶಾಸ್ತ್ರಿ ಶುಭಕೋರಿದ್ದಾರೆ. ಬಾಂಗ್ಲಾದೇಶ ವಿರುದ್ದದ ಟಿ20 ಸರಣಿಯಲ್ಲಿ ಆರಂಭಿಕ ಆಘಾತ ಅನುಭವಿಸಿರು ಶಾಸ್ತ್ರಿ, 2ನೇ ಪಂದ್ಯಕ್ಕಾಗಿ ರಾಜ್‍‌ಕೋಟ್‌ನಲ್ಲಿ ತಂಗಿದ್ದಾರೆ. ತಂಡದ ಅಭ್ಯಾಸದ ನಡುವೆ ಶಾಸ್ತ್ರಿ, ಕೊಹ್ಲಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ಆದರೆ ಹೆಜ್ಜೆ ಹೆಜ್ಜೆಗೂ ಟ್ರೋಲ್ ಆಗುವು ಶಾಸ್ತ್ರಿ, ಈ ಬಾರಿಯೂ ಇದಕ್ಕೆ ಹೊರತಾಗಿಲ್ಲ.

ಇದನ್ನೂ ಓದಿ: ರನ್ ಮಷೀನ್ ವಿರಾಟ್ ಕೊಹ್ಲಿ ಬರ್ತ್ ಡೇ @31

ಚಿರ ಯುವಕನಿಗೆ ಹ್ಯಾಪಿ ಬರ್ತ್ ಡೇ, ವಿಶ್ರಾಂತಿ ಸಮಯವನ್ನು ಆನಂದಿಸು, ಯಶಸ್ವಿ ವರ್ಷ ನಿಮ್ಮದಗಾಲಿ ಎಂದು ಶಾಸ್ತ್ರಿ ಕೊಹ್ಲಿಗೆ ಟ್ವೀಟ್ ಮೂಲಕ ಶುಭಕೋರಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಹುಟ್ಟು ಹಬ್ಬಕ್ಕೆ ಭೂತಾನ್‌ನಲ್ಲಿ ಟ್ರಕ್ಕಿಂಗ್; ರೋಚಕ ಕತೆ ಬಿಟ್ಟಿಟ್ಟ ಅನುಷ್ಕಾ!

ಶಾಸ್ತ್ರಿ ವಿಶ್ ಬೆನ್ನಲ್ಲೇ ಟ್ರೋಲ್ ಆಗಿದ್ದಾರೆ. ನನ್ನ ವೇತನದ ಚೆಕನ್ನು ಸುರಕ್ಷಿತವಾಗಿಟ್ಟುಕೋ ಎಂದು ಅಭಿಮಾನಿಯೋರ್ವ ಟ್ರೋಲ್ ಮಾಡಿದ್ದಾನೆ. ಅಭಿಮಾನಿಗಳ ಟ್ರೋಲ್ ಟ್ವೀಟ್ ಇಲ್ಲಿದೆ.