ಭೂತಾನ್(ನ.05): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹುಟ್ಟು ಹಬ್ಬವನ್ನು ಅಭಿಮಾನಿಗಳು ಭಾರತದೆಲ್ಲೆಡೆ ಆಚರಿಸುತ್ತಿದ್ದಾರೆ. ಸೌತ್ ಆಫ್ರಿಕಾ ಸರಣಿ ಬಳಿಕ ವಿಶ್ರಾಂತಿ ಜಾರಿರುವ ಕೊಹ್ಲಿ, ಬಾಂಗ್ಲಾದೇಶ ಟಿ20 ಸರಣಿಯಿಂದಲೂ ವಿಶ್ರಾಂತಿ ಪಡೆದಿದ್ದಾರೆ. ಇಂದು(ನ.05) 31ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿರುವ ಕೊಹ್ಲಿ, ಪತ್ನಿ ಅನುಷ್ಕಾ ಜೊತೆ ಟ್ರೆಕ್ಕಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ.

 

ಇದನ್ನೂ ಓದಿ: ರನ್ ಮಷೀನ್ ವಿರಾಟ್ ಕೊಹ್ಲಿ ಬರ್ತ್ ಡೇ @31

ಹುಟ್ಟು ಹಬ್ಬದ ಸಂಭ್ರದಲ್ಲಿ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಭೂತಾನ್‌ಗೆ ತೆರಳಿದ್ದಾರೆ. ಇಲ್ಲಿ ಟ್ರೆಕ್ಕಿಂಗ್ ತೆರಳಿದ ಕೊಹ್ಲಿ ಹಾಗೂ ಅನುಷ್ಕಾ, ದಣಿವಾರಿಸಿಕೊಳ್ಳಲು ಅದೇ ದಾರಿಯಲ್ಲಿದ್ದ ಮನೆಯೊಂದಕ್ಕೆ ತೆರಳಿದ್ದಾರೆ. ಬಳಿಕ ದಣಿವಾಗಿದ್ದು, ಕೆಲ ಕಾಲ ವಿಶ್ರಾಂತಿ ಪಡೆದುಕೊಳ್ಳುವುದಾಗಿ ಹೇಳಿದ್ದಾರೆ. ಇಷ್ಟೇ ಅಲ್ಲ ಟೀ ಬೇಕೆಂದು ಕೇಳಿದ್ದಾರೆ.

 

ಇದನ್ನೂ ಓದಿ: ಕೊಹ್ಲಿ ಹುಟ್ಟು ಹಬ್ಬ; ಶುಭಕೋರಿದ ಟೀಂ ಇಂಡಿಯಾ ಕ್ರಿಕೆಟರ್ಸ್

ತಮ್ಮ ಮನೆಗೆ ಆಗಮಿಸಿರುವುದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅನ್ನೋ ಅರಿವು ಅವರಿಗಿರಲಿಲ್ಲ. ದಣಿದ ಪ್ರವಾಸಿಗರನ್ನು ಅಷ್ಟೇ ಉತ್ತಮವಾಗಿ ನೋಡಿಕೊಂಡ ಮನೆಯವರ ಜೊತೆ ವಿರುಷ್ಕಾ ಜೋಡಿ ಕೆಲ ಹೊತ್ತು ಕಳೆದಿದ್ದಾರೆ. 

4 ತಿಂಗಳ ಹಿಂದೆಯಷ್ಟೇ ಹುಟ್ಟಿದ ದನದ ಕರು ಹಾಗೂ ತಮ್ಮ ಪ್ರಯಾಣದ ಕುರಿತು ಅನುಷ್ಕಾ ಶರ್ಮಾ ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.