ನವದೆಹಲಿ(ನ.18): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ತಮ್ಮ ಹೇಳಿಕೆಗಳಿಂದ ಹಲವು ಬಾರಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಇದೀಗ ಗಂಭೀರ್ 2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಎಂ.ಎಸ್.ಧೋನಿಯಿಂದ ಶತಕ ಕೈತಪ್ಪಿತು ಅನ್ನೋ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಅಭಿಮಾನಿಗಳು ಗರಂ ಆಗಿದ್ದಾರೆ. 

ಇದನ್ನೂ ಓದಿ: ವಿಶ್ವ​ಕಪ್‌ನಲ್ಲಿ ಶತಕ ತಪ್ಪಿಸಿದ್ದೇ ಧೋನಿ..! ’ಗಂಭೀರ’ ಆರೋಪ

2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನನ್ನ ಬ್ಯಾಟಿಂಗ್ ಕುರಿತು ಹಲವು ಬಾರಿ ಪ್ರಶ್ನೆಗಳನ್ನು ಕೇಳಿದ್ದಾರೆ. 97 ರನ್  ಸಿಡಿಸಿ ಮುನ್ನುಗ್ಗುತ್ತಿದ್ದ ವೇಳೆ ಶತಕ ಕೈತಪ್ಪಿದ್ದು ಹೇಗೆ ಎಂದು ಕೇಳಿದ್ದಾರೆ. ಇದಕ್ಕೆ ಕಾರಣ, 97 ರನ್ ಪೂರೈಸಿದಾಗ ನಾನ್ ಸ್ಟ್ರೈಕ್‌ನಲ್ಲಿದ್ದ ಧೋನಿ ಶತಕಕ್ಕೆ  3 ರನ್‌ ಮಾತ್ರ ಬಾಕಿ, ಹೀಗಾಗಿ 3 ರನ್ ಸಿಡಿಸಿ ಸೆಂಚುರಿ ಪೂರೈಸಲು ಸೂಚಿಸಿದರು. ಶ್ರೀಲಂಕಾ ನೀಡಿದ ಗುರಿ ಬೆನ್ನಟ್ಟುವುದೇ ನನ್ನ ಟಾರ್ಗೆಟ್ ಆಗಿತ್ತು. ಧೋನಿಯ ಮಾತಿನಿಂದ ನನ್ನ ಗಮನ ಶತಕದತ್ತ ಕೇಂದ್ರೀಕೃತವಾಯಿತು. ಹೀಗಾಗಿ 3 ರನ್ ಪೂರೈಸಲು ಹೊಡೆದ ಶಾಟ್, ಮಿಸ್ಸಾಗಿ ವಿಕೆಟ್ ಕೈಚೆಲ್ಲಿದೆ ಎಂದಿದ್ದಾರೆ.

ಇದನ್ನೂ ಓದಿ: ಮೀಟಿಂಗ್‌ಗೆ ಚಕ್ಕರ್, ಕಮೆಂಟರಿಗೆ ಹಾಜರ್; ಗಂಭೀರ್ ಕಾಲೆಳೆದ ಫ್ಯಾನ್ಸ್!

ಗಂಭೀರ್ ಹೇಳಿಕೆಗೆ ಅಭಿಮಾನಿಗಳು ಗರಂ ಆಗಿದ್ದಾರೆ. ಧೋನಿಯಿಂದ ಶತಕ ಕೈತಪ್ಪಿತು ಎನ್ನುವುದಾದರೆ, ಆ ಶತಕಕ್ಕೆ ನೀವು ಅರ್ಹರಲ್ಲ. ಇಲ್ಲ ಸಲ್ಲದ ಹೇಳಿಕೆ ನೀಡಿ ನಿಮ್ಮ ಘನತೆಯನ್ನು ಕಳೆದುಕೊಳ್ಳಬೇಡಿ ಎಂದು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.