ಮುಂಬೈ(ಫೆ.10): ರೈತ ಪ್ರತಿಭಟನೆ ಹೆಸರಿನಲ್ಲಿ ದೇಶದ ವಿರುದ್ಧ ಪಿತೂರಿ ನಡೆಸಲು ಯತ್ನಿಸಿದ ವಿದೇಶಿ ಸೆಲೆಬ್ರೆಟಿಗಳಿಗೆ ದೇಶ ಮೊದಲು ಎಂದು ಸಚಿನ್ ತಿರುಗೇಟು ನೀಡಿದ್ದರು. ಸಚಿನ್ ಸೇರಿದಂತೆ ಹಲವು ಭಾರತೀಯ ಸೆಲೆಬ್ರೆಟಿಗಳ ವಿರುದ್ಧ ಮಹಾರಾಷ್ಟ್ರ ಸರ್ಕಾರ ತನಿಖೆಗೆ ಆದೇಶಿಸಿದೆ. ಆದರೆ ದೇಶದೆಲ್ಲೆಡೆ ಸಚಿನ್ ಹಾಗೂ ಇತರ ಸೆಲೆಬ್ರೆಟಿಗಳಿಗೆ ಬೆಂಬಲ ವ್ಯಕ್ತವಾಗಿದೆ. ಇದೀಗ ಸಚಿನ್ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದಾರೆ.

ದೇಶ ಮೊದಲು ಎಂದ ಸಚಿನ್, ಮಂಗೇಶ್ಕರ್, ಸೆಲೆಬ್ರೆಟಿಗಳ ವಿರುದ್ಧ ಮಹಾರಾಷ್ಟ್ರ ಸರ್ಕಾರ ತನಿಖೆ!.

ಮುಂಬೈನಲ್ಲಿರುವ ಸಚಿನ್ ಮನೆ ಮುಂದೆ 100ಕ್ಕೂ ಹೆಚ್ಚು ಅಭಿಮಾನಿಗಳು ಜಮಾಯಿಸಿದ್ದಾರೆ. ಇಷ್ಟೇ ಅಲ್ಲ ನಾವು ಸಚಿನ್‌ಗೆ ಬೆಂಬಲ ಸೂಚಿಸುತ್ತಿರುವುದಾಗಿ ಘೋಷಣೆ ಕೂಗಿದ್ದಾರೆ. ದೇಶದ ಹೆಮ್ಮೆ ಸಚಿನ್. ಸಚಿನ್ ವಿರುದ್ಧವೇ ತನಿಖೆಗೆ ಆದೇಶಿಸಿದ ಮಹಾರಾಷ್ಟ್ರ ಸರ್ಕಾರಕ್ಕೆ ಧಿಕ್ಕಾರ ಕೂಗಿದ್ದಾರೆ. 

ಸಚಿನ್ ತೆಂಡುಲ್ಕರ್‌ಗೆ ಎಚ್ಚರಿಕೆ ನೀಡಿದ ಶರದ್ ಪವಾರ್‌ಗೆ ಭಾರತೀಯರಿಂದ ಮಂಗಳಾರತಿ!.

ಸಾರ್ವಭೌಮತ್ವ ಎತ್ತಿ ಹಿಡಿದ ಸಚಿನ್‌ ಟ್ವೀಟ್‌ಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಗಿದೆ. ಸಚಿನ್ ಜೊತೆ ನಾವಿದ್ದೇವೆ ಅನ್ನೋ ಅಭಿಯಾನ ಜೋರಾಗಿದೆ. ಇದೀಗ ಸಚಿನ್ ಅಭಿಮಾನಿಗಳ ಮನೆ ಮುಂದೆ ನಿಂತು ಸಚಿನ್ ಪರ ಘೋಷಣೆ ಕೂಗಿದ್ದಾರೆ.

ಸಚಿನ್ ದೇಶ ಮೊದಲು, ಆತಂರಿಕ ವಿಚಾರಕ್ಕೆ ಕೈಹಾಕಬೇಡಿ ಎಂದು ಟ್ವೀಟ್ ಮಾಡಿದ ಬೆನ್ನಲ್ಲೇ ಕೇರಳ ಕಾಂಗ್ರೆಸ್ ಸಚಿನ್ ಕಟೌಟ್‌ಗೆ ಮಸಿ ಬಳಿಕ ಅವಮಾನ ಮಾಡಿತ್ತು. ಕೇರಳದ ಕೆಲ ಮಂದಿ ಸಾಮಾಜಿಕ ಜಾಲತಾಣದಲ್ಲಿ ಸಚಿನ್ ವಿರುದ್ಧ ಅಭಿಯಾನ ಆರಂಭಿಸಿದ್ದರು. ಇದರ ಬೆನ್ನಲ್ಲೇ ಎನ್‌ಸಿಪಿ ನಾಯಕ ಶರದ್ ಪವಾರ್ ವಾರ್ನಿಂಗ್ ಕೂಡ ನೀಡಿದ್ದರು

ಇತರ ಕ್ಷೇತ್ರದ ಕುರಿತು ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಶರದ್ ಪವಾರ್ ಹೇಳಿದ್ದರು. ಇತ್ತ ಪಂಜಾಬ್‍ನ ಕಾಂಗ್ರೆಸ್ ಸಂಸದ, ಸಚಿನ್ ಭಾರತ ರತ್ನಕ್ಕೆ ಅರ್ಹರಲ್ಲ ಎಂದಿದ್ದರು.