ಮುಂಬೈ(ಫೆ.06):  ಕ್ರಿಕೆಟ್ ಹೊರತು ಪಡಿಸಿ ಇತರ ಕ್ಷೇತ್ರದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಧಮ್ಕಿ ಹಾಕಿದ ಎನ್‌ಸಿಪಿ ನಾಯಕ, ಹಿರಿಯ ರಾಜಕಾರಣಿ ಶರದ್ ಪವರ್‌ಗೆ ಭಾರತೀಯರು ಮಂಗಳಾರತಿ ಮಾಡಿದ್ದಾರೆ. ಭಾರತದ ಪರ, ಭಾರತೀಯತೆ ಕುರಿತು, ದೇಶದ ಸಾರ್ವಭೌಮತ್ವ ಕುರಿತು ಮಾತನಾಡಿದ ಸಚಿನ್‌ಗೆ ಧಮ್ಮಿ ಹಾಕಲಾಗುತ್ತಿದೆ ಎಂದು ಅಭಿಮಾನಿಗಳ ಪವಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶ ಮೊದಲು ಎಂದ ಸಚಿನ್ ತೆಂಡುಲ್ಕರ್‌ಗೆ ಭಾರಿ ಬೆಂಬಲ!

ರೈತ ಪ್ರತಿಭಟನೆ ಹಾಗೂ ವಿದೇಶಿ ಸೆಲೆಬ್ರೆಟಿಗಳ ಟ್ವೀಟರ್ ಅಭಿಯಾನದ ಕುರಿತ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಸಚಿನ್ ತೆಂಡುಲ್ಕರ್‌ಗೆ ನಾನು ಎಚ್ಚರಿಸುತ್ತಿದ್ದೇನೆ. ಇತರ ಕ್ಷೇತ್ರದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಶರದ್ ಪವಾರ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಶರದ್ ಪವಾರ್ ಬಹಿರಂಗವಾಗಿ ಸಚಿನ್ ತೆಂಡುಲ್ಕರ್‌ಗೆ ಎಚ್ಚರಿಕೆ ನೀಡುತ್ತಿದ್ದಾರೆ. ದೇಶದ ಪರ ಮಾತನಾಡಿದ ಸಚಿನ್‌ಗೆ ಧಮ್ಕಿ ಹಾಕಲಾಗುತ್ತಿದೆ ಎಂದು ಪವಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.