ಲಂಡನ್(ನ.10): ಟಿ20 ವಿಶ್ವಕಪ್ ಟೂರ್ನಿಗೆ ಎಲ್ಲಾ ತಂಡಗಳು ತಯಾರಿ ನಡೆಸುತ್ತಿವೆ. ಭಾರತ ಕೂಡ ಹಲವು ಯುವ ಕ್ರಿಕೆಟಿಗರು ಹಾಗೂ ಅನುಭವಿ ಆಟಗಾರರಿಗೆ ಅವಕಾಶ ನೀಡಿ ಹಲವು ಪರೀಕ್ಷೆಗಳನ್ನು ಮಾಡುತ್ತಿದೆ. ಇದರ ನಡುವೆ ಟಿ20 ವಿಶ್ವಕಪ್ ಗೆಲ್ಲೋ ತಂಡ ಯಾವುದು ಅನ್ನೋ ಚರ್ಚೆ ನಡೆಯುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ 2020ರ ಟಿ20 ವಿಶ್ವಕಪ್ ಗೆಲ್ಲೋ ತಂಡಗಳ ಭವಿಷ್ಯ ನುಡಿದ, ಅಭಿಮಾನಿಗಳಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.

ಇದನ್ನೂ ಓದಿ: 4ನೇ ಟಿ20: ನ್ಯೂಜಿ​ಲೆಂಡ್‌ ವಿರುದ್ಧ ಇಂಗ್ಲೆಂಡ್‌ಗೆ ಜಯ

2020ರ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡದ ಕುರಿತು ವಾನ್ ಟ್ವೀಟ್ ಮಾಡಿದ್ದಾರೆ. ಇದು ಟಿ20 ವಿಶ್ವಕಪ್ ಗೆಲುವಿನ ಭವಿಷ್ಯ, ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾ ಟ್ರೋಫಿ ಗೆಲ್ಲಲಿದೆ ಎಂದು ವಾನ್ ಟ್ವೀಟ್ ಮಾಡಿದ್ದಾರೆ. 

 

ಇದನ್ನೂ ಓದಿ: ಸ್ಟಂಪಿಂಗ್ ವೇಳೆ ಪಂತ್ ಎಡವಟ್ಟು; ವಿಡಿಯೋ ವೈರಲ್

ವಾನ್ ಟ್ವೀಟ್ ಮಾಡಿದ ಬೆನ್ನಲ್ಲೇ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಇದು ಭಾನುವಾರದ ಜೋಕ್ ಎಂದಿದ್ದಾರೆ.