ರಿಷಭ್ ಪಂತ್ ಶಾಲಾ ಮಕ್ಕಳಂತೆ ಸ್ಟಂಪಿಂಗ್ ತಪ್ಪು ಮಾಡುವ ಮೂಲಕ ಮತ್ತೊಮ್ಮೆ ಪ್ರಮಾದ ಎಸಗಿದ್ದಾರೆ. ಲಿಟನ್ ದಾಸ್ ಸ್ಟಂಪಿಂಗ್ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ರಾಜ್ ಕೋಟ್[ನ.08]: ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್’ಗೆ ಅವಕಾಶ ಹೆಚ್ಚು ನೀಡಿದಷ್ಟು ಅವರಿಂದ ತಪ್ಪುಗಳು ಹೆಚ್ಚಾಗುತ್ತಿವೆ. ಎರಡನೇ ಟಿ20 ಪಂದ್ಯದಲ್ಲೂ ಪಂತ್ ಅಂತಹದ್ದೊಂದು ಪ್ರಮಾದ ಎಸಗಿದ್ದಾರೆ.

ರೋಹಿತ್ ಅಬ್ಬರಕ್ಕೆ ತತ್ತರಿಸಿದ ಬಾಂಗ್ಲಾ; ಭಾರತಕ್ಕೆ 8 ವಿಕೆಟ್ ಭರ್ಜರಿ ಗೆಲುವು!

ಹೌದು, ರಾಜ್ ಕೋಟ್’ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಯುಜುವೇಂದ್ರ ಚಹಲ್ ಎಸೆದ ಆರನೇ ಓವರ್’ನ ಮೂರನೇ ಎಸೆತವನ್ನು ಮುನ್ನುಗ್ಗಿ ಬಾರಿಸಲು ಲಿಟನ್ ದಾಸ್ ಯತ್ನಿಸಿದರು. ಆಗ ಸ್ಟಂಪ್ ಮಾಡಿದರು. ಆದರೆ ಮೂರನೇ ಅಂಪೈರ್ ನಾಟೌಟ್ ನೀಡಿದರು.

Scroll to load tweet…

ಅಷ್ಟಕ್ಕೂ ಆಗಿದ್ದೇನು..?
ಉತ್ತಮ ಆರಂಭ ಪಡೆದ ಬಾಂಗ್ಲಾದೇಶದ ಮೊದಲ ವಿಕೆಟ್ ಪಡೆದ ಸಂಭ್ರಮದಲ್ಲಿ ಟೀಂ ಇಂಡಿಯಾ ಆಟಗಾರರು ಕುಣಿದು ಕುಪ್ಪಳಿಸಿದರು. ಆದರೆ ನಿಯಮದ ಪ್ರಕಾರ ವಿಕೆಟ್ ಕೀಪರ್ ಚಂಡನ್ನು ಸ್ಟಂಪ್ಸ್ ಹಿಂದೆ ಹಿಡಿಯಬೇಕು. ಆದರೆ ಪಂತ್ ಸ್ಟಂಪ್ಸ್ ಮುಂದೆ ಚೆಂಡನ್ನು ಹಿಡಿದು ಸ್ಟಂಪ್ಸ್ ಮಾಡಿದ ಕಾರಣ, ಅಂಪೈರ್ ನಾಟೌಟ್ ತೀರ್ಮಾನವಿತ್ತರು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.

Scroll to load tweet…

ಕೊನೆಗೂ ಸೇಡು ತೀರಿಸಿಕೊಂಡ ಪಂತ್:
ಮತ್ತೆ ಚಹಲ್ ಎಸೆದ ಎಂಟನೇ ಓವರ್’ನಲ್ಲಿ ಪಂತ್ ಬಾಂಗ್ಲಾ ಆರಂಭಿಕ ಬ್ಯಾಟ್ಸ್’ಮನ್ ಲಿಟನ್ ದಾನ್ ಅವರನ್ನು ರನೌಟ್ ಮಾಡುವ ಮೂಲಕ ಕೊನೆಗೂ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬಾಂಗ್ಲಾದೇಶ 6 ವಿಕೆಟ್ ಕಳೆದುಕೊಂಡು 153 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಭಾರತ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕದ ನೆರವಿನಿಂದ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.