ನೇಪಿಯರ್‌(ನ.09): ಡೇವಿಡ್‌ ಮಲಾನ್‌(103)ರ ಶತಕ ಹಾಗೂ ಇಯಾನ್‌ ಮೊರ್ಗನ್‌ರ ಆಕ​ರ್ಷಕ 91 ರನ್‌ಗಳ ಆಟದ ನೆರ​ವಿ​ನಿಂದ ನ್ಯೂಜಿ​ಲೆಂಡ್‌ ವಿರುದ್ಧ 4ನೇ ಟಿ20 ಪಂದ್ಯ​ದಲ್ಲಿ ಇಂಗ್ಲೆಂಡ್‌ 76 ರನ್‌ಗಳ ಗೆಲುವು ಸಾಧಿ​ಸಿತು. ಇದ​ರೊಂದಿ​ಗೆ 5 ಪಂದ್ಯ​ಗಳ ಸರ​ಣಿ​ಯಲ್ಲಿ 2-2ರಲ್ಲಿ ಸಮ​ಬಲ ಸಾಧಿ​ಸಿತು. 

ಇಂಗ್ಲೆಂಡ್‌ ವಿರುದ್ಧ 3ನೇ ಟಿ20 ಗೆದ್ದ ಕಿವೀಸ್‌

ಶುಕ್ರ​ವಾರ ನಡೆದ ಪಂದ್ಯ​ದಲ್ಲಿ ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 20 ಓವ​ರಲ್ಲಿ 3 ವಿಕೆಟ್‌ ನಷ್ಟಕ್ಕೆ 241 ರನ್‌ ಕಲೆಹಾಕಿತು. ಒಂದು ಹಂತದಲ್ಲಿ 58 ರನ್’ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ನಾಯಕ ಮಾರ್ಗನ್ ಹಾಗೂ ಮಲಾನ್ ಆಸರೆಯಾದರು. ಈ ಜೋಡಿ ಇಂಗ್ಲೆಂಡ್ ಪರ ಟಿ20 ಕ್ರಿಕೆಟ್’ನಲ್ಲಿ [182 ರನ್] ಗರಿಷ್ಠ ರನ್’ಗಳ ಜತೆಯಾಟ ನಿಭಾಯಿಸಿತು.
48 ಎಸೆ​ತ​ಗ​ಳಲ್ಲಿ ಶತಕ ಪೂರೈ​ಸಿದ ಮಲಾನ್‌, 51 ಎಸೆ​ತ​ಗ​ಳಲ್ಲಿ 9 ಬೌಂಡರಿ, 6 ಸಿಕ್ಸರ್‌ಗಳೊಂದಿಗೆ 103 ರನ್‌ ಗಳಿಸಿ ಅಜೇ​ಯ​ರಾಗಿ ಉಳಿ​ದರು. 41 ಎಸೆತ​ಗ​ಳಲ್ಲಿ ತಲಾ 7 ಬೌಂಡರಿ, ಸಿಕ್ಸರ್‌ನೊಂದಿಗೆ ಮೊರ್ಗನ್‌ 91 ರನ್‌ ಗಳಿಸಿ ಔಟಾ​ದರು.

ಸ್ಯಾಮ್‌ ಬಿಲ್ಲಿಂಗ್ಸ್‌ ಪರಿ​ಸರ ಸ್ನೇಹಿ ಗ್ಲೌಸ್‌ಗೆ ಐಸಿ​ಸಿ ನಿಷೇ​ಧ!

ಬೃಹತ್‌ ಗುರಿ ಬೆನ್ನ​ತ್ತಿದ ಕಿವೀಸ್‌ ಸ್ಫೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಗಪ್ಟಿಲ್-ಮನ್ರೋ ಜೋಡಿ 54 ರನ್’ಗಳ ಜತೆಯಾಟ ನಿಭಾಯಿಸಿತು. ಆದರೆ ಕ್ರಿಸ್ ಜೋರ್ಡನ್[2] ಹಾಗೂ ಮ್ಯಾಥ್ಯೂ ಪಾರ್ಕಿನ್’ಸನ್[4] ಮಾರಕ ದಾಳಿಗೆ ತತ್ತರಿಸಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಕಿವೀಸ್ ನಾಯಕ ಟಿಮ್ ಸೌಥಿ 15 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 39 ರನ್ ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 16.5 ಓವ​ರಲ್ಲಿ ನ್ಯೂಜಿಲೆಂಡ್ 165 ರನ್‌ಗೆ ಆಲೌಟ್‌ ಆಯಿತು.  
ಇದೀಗ ಐದನೇ ಹಾಗೂ ನಿರ್ಣಾಯಕ ಪಂದ್ಯವು ನವೆಂಬರ್ 10ರಂದು ಆಕ್ಲೆಂಡ್’ನ ಈಡನ್ ಪಾರ್ಕ್’ನಲ್ಲಿ ನಡೆಯಲಿದ್ದು, ಯಾರು ಸರಣಿ ವಿಜೇತರಾಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. 

ದಾಖಲೆಗಳು:

241/3- ಇಂಗ್ಲೆಂಡ್ ಟಿ20 ಕ್ರಿಕೆಟ್’ನಲ್ಲಿ ದಾಖಲಿಸಿದ ಗರಿಷ್ಠ ಮೊತ್ತ.

182- ಇಂಗ್ಲೆಂಡ್ ಪರ ಟಿ20 ಕ್ರಿಕೆಟ್’ನಲ್ಲಿ ದಾಖಲಾದ ಗರಿಷ್ಠ ಜತೆಯಾಟ[ಮಾರ್ಗನ್-ಮಲಾನ್]

ವೇಗದ ಅರ್ಧಶತಕ: 21 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಇಯಾನ್ ಮಾರ್ಗನ್, ಇಂಗ್ಲೆಂಡ್ ಪರ ವೇಗವಾಗಿ 50 ಬಾರಿಸಿದ ಬ್ಯಾಟ್ಸ್’ಮನ್ ಎನಿಸಿದರು.

ವೇಗದ ಶತಕ: 48 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಡೇವಿನ್ ಮಲಾನ್, ಇಂಗ್ಲೆಂಡ್ ಪರ ಅತಿವೇಗವಾಗಿ ಶತಕ ಬಾರಿಸಿದ ಬ್ಯಾಟ್ಸ್’ಮನ್ ಎನಿಸಿದರು.

ಸ್ಕೋರ್‌: 

ಇಂಗ್ಲೆಂಡ್‌ 241/3
ನ್ಯೂಜಿ​ಲೆಂಡ್‌ 165/10