Asianet Suvarna News Asianet Suvarna News

Boxing Day Test : ಡಿ. 26ಕ್ಕೆ ಆರಂಭವಾಗುವ ಪಂದ್ಯಕ್ಕೆ ಬಾಕ್ಸಿಂಗ್ ಡೇ ಟೆಸ್ಟ್ ಅಂತಾ ಹೇಳೋದ್ಯಾಕೆ?

ಬಾಕ್ಸಿಂಗ್ ಡೇ ಟೆಸ್ಟ್ ಅಂತಾ ಹೇಳೋದಿಕ್ಕೆ ಹಲವಾರು ಕಾರಣಗಳು
ಕ್ರಿಸ್ ಮಸ್ ಬಳಿಕ ಸದರ್ನ್ ಹ್ಯಾಂಪ್ ಶೈರ್ ನಲ್ಲಿ ನಡೆಯುವ ಟೆಸ್ಟ್ ಪಂದ್ಯಗಳನ್ನ ಬಾಕ್ಸಿಂಗ್ ಡೇ ಅಂತಾ ಹೇಳೋದು ವಾಡಿಕೆ
ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಪ್ರತಿ ವರ್ಷವೂ ನಡೆಯುತ್ತೆ ಬಾಕ್ಸಿಂಗ್ ಡೇ ಟೆಸ್ಟ್
 

Explained why 26th december test is called boxing day test match in Australia South Africa and New Zealand san
Author
Bengaluru, First Published Dec 24, 2021, 7:26 PM IST

ಬೆಂಗಳೂರು (ಡಿ. 24): ಪ್ರತಿ ವರ್ಷ ಡಿಸೆಂಬರ್ ಅಂತ್ಯದ ವೇಳೆಗೆ ಕ್ರಿಕೆಟ್ ಪ್ರೇಮಿಗಳು ಸಾಮಾನ್ಯವಾಗಿ ಕೇಳುವ ಶಬ್ದ ಬಾಕ್ಸಿಂಗ್ ಡೇ (Boxing Day) ಟೆಸ್ಟ್. ಕ್ರಿಸ್ ಮಸ್ ನ (Christmas)ಮರುದಿನ ಅಂದರೆ ಡಿಸೆಂಬರ್ 26 ರಂದು ಆಸ್ಟ್ರೇಲಿಯಾ (Australia), ದಕ್ಷಿಣ ಆಫ್ರಿಕಾ (South Africa) ಹಾಗೂ ನ್ಯೂಜಿಲೆಂಡ್ ನಲ್ಲಿ(New Zealand) ಆರಂಭವಾಗುವ ಟೆಸ್ಟ್ Test Match) ಪಂದ್ಯಗಳನ್ನು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಎಂದು ಕರೆಯುವುದು ವಾಡಿಕೆ. ಈ ದಿನ ನಡೆಯಲಿರುವ ಪಂದ್ಯವನ್ನು ಬಾಕ್ಸಿಂಗ್ ಡೇ ಎನ್ನುವ ಹೆಸರಿನಿಂದಲೇ ಯಾಕೆ ಗುರುತಿಸ್ತಾರೆ ಅನ್ನೂ ಕುತೂಹಲ ನಿಮಗೂ ಇದೆ ಅಲ್ವಾ. ಆ ಕುರಿತಾದ ವರದಿ ಇಲ್ಲಿದೆ.

ಬಾಕ್ಸಿಂಗ್ ಡೇ ಟೆಸ್ಟ್ ಅಂತಾ ಕರೆಯೋದಿಕ್ಕೆ ಸಾಕಷ್ಟು ಕಾರಣಗಳಿವೆ. ಆದರೆ, ಸದರ್ನ್ ಹ್ಯಾಂಪ್ ಶೈರ್ ನ ಕ್ರಿಕೆಟ್ ದೇಶಗಳಾದ ( Southern Hemisphere Countries ) ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ನಲ್ಲಿ ಡಿ. 26ರಂದು ಟೆಸ್ಟ್ ಪಂದ್ಯ ನಡೆದರೆ ಅದನ್ನು ಬಾಕ್ಸಿಂಗ್ ಡೇ ಎನ್ನುವ ಹೆಸರಿನಿಂದ ಕರೆಯುತ್ತಾರೆ. ಕ್ರಿಸ್ ಮಸ್ ಮರುದಿನವಾದ ಕಾರಣ ಇಂಗ್ಲೆಂಡ್ ಹಾಗೂ ಇತರ ಕಾಮನ್ವೆಲ್ತ್ ದೇಶಗಳಾದ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಕೆನಡಾದಲ್ಲಿ ಈ ದಿನವನ್ನು ಬಾಕ್ಸಿಂಗ್ ಡೇ ಎನ್ನುತ್ತಾರೆ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾದಂಥ ಕ್ರಿಕೆಟ್ ಪ್ರೀತಿಯ ದೇಶಗಳು ಪ್ರತಿ ವರ್ಷ ಈ ದಿನದ ಪಂದ್ಯವನ್ನು ಹಬ್ಬದ ರೀತಿಯಲ್ಲಿ ಎದುರು ನೋಡುತ್ತಾರೆ. ಅದೊಂದು ರೀತಿಯಲ್ಲಿ ಅವರ ಪಾಲಿಗೆ ಪ್ರತಿಷ್ಠೆಯ ಪಂದ್ಯ. ಈ ವರ್ಷ ಕೂಡ ಆಸ್ಟ್ರೇಲಿಯಾ ತಂಡ ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (Melbourne Cricket Ground )ಬಾಕ್ಸಿಂಗ್ ಡೇ ಟೆಸ್ಟ್ ಆಡಲಿದೆ. ಅದು ಆ್ಯಷಸ್ ಟೆಸ್ಟ್ (Ashes) ಸರಣಿಯ ಪಂದ್ಯ ಎನ್ನುವುದು ಜಿದ್ದಾಜಿದ್ದಿ ಇನ್ನಷ್ಟು ಸಂಭ್ರಮಕ್ಕೆ ಕಾರಣವಾಗಿದೆ. ಇನ್ನೊಂದೆಡೆ ದಕ್ಷಿಣ ಆಫ್ರಿಕಾ (South Africa)ತಂಡ ಸೆಂಚುರಿಯನ್ ನ ಸೂಪರ್ ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ಪ್ರವಾಸಿ ಭಾರತ (Team India)ತಂಡವನ್ನು ಎದುರಿಸಲಿದೆ.

ಬಾಕ್ಸಿಂಗ್ ಡೇ ಎನ್ನುವುದಕ್ಕೂ ಬಾಕ್ಸಿಂಗ್ ಕ್ರೀಡೆಗೂ ಯಾವುದೇ ಸಂಬಂಧವಿಲ್ಲ. ಇಂಗ್ಲೆಂಡ್ ನಲ್ಲಿ ಡಿ. 25ರ ಕ್ರಿಸ್ ಮಸ್ ದಿನದಂದು ಬರುವ ಗಿಫ್ಟ್ ಗಳನ್ನು "ಕ್ರಿಸ್ ಮಸ್ ಬಾಕ್ಸ್" ಎನ್ನುತ್ತಾರೆ. ಮನೆಯ ಮಾಲೀಕರು ತಮ್ಮ ಸೇವಕರು ಹಾಗೂ ಕುಟುಂಬದವರಿಗೆ ಕ್ರಿಸ್ ಮಸ್ ದಿನ ಈ ಬಾಕ್ಸ್ ಅನ್ನು ನೀಡುತ್ತಾರೆ. ಮರು ದಿನ ಇಂಗ್ಲೆಂಡ್ ನಲ್ಲಿ ಎಲ್ಲಾ ಸೇವಕರಿಗೆ ರಜಾ ದಿನ, ಅದನ್ನು "ಬಾಕ್ಸಿಂಗ್ ಡೇ" ಎಂದು ಕರೆಯಲಾಗುತ್ತದೆ. ಇನ್ನೊಂದು ಮಾಹಿತಿಯ ಪ್ರಕಾರ, ಕ್ರಿಸ್ ಮಸ್ ದಿನ ನೀಡಲಾಗುವ ಹಣ ಹಾಗೂ ಉಡುಗೊರೆಗಳಿದ್ದ ಬಾಕ್ಸ್ ಗಳನ್ನು ಬಡ ಜನರು ಮರು ದಿನ ಅದನ್ನು ತೆರೆಯುತ್ತಾರೆ. ಅದನ್ನು ಸೂಚಿಸುವ ಸಲುವಾಗಿ ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ.  ಇನ್ನು ಬಾಕ್ಸಿಂಗ್ ಡೇಯೊಂದಿಗೆ ಧಾರ್ಮಿಕ ಸಂಬಂಧವೂ ಇದ್ದು, ಐರ್ಲೆಂಡ್ ಹಾಗೂ ಸ್ಪೇನ್ ನ ಕ್ಯಾಟಲೋನಿಯಾ ಪ್ರದೇಶಗಳಲ್ಲಿ ಸೇಂಟ್ ಸ್ಟೀಫನ್ಸ್ ಡೇ ಎಂದು ಆಚರಿಸಲಾಗುತ್ತದೆ. ಇನ್ನು 1871 ರಿಂದಲೂ ಬಾಕ್ಸಿಂಗ್ ಡೇ ಅನ್ನು ರಜಾ ದಿನವನ್ನಾಗಿ ಆಚರಿಸಲಾಗುತ್ತಿದೆ.

India Tour of South Africa : ಬಾಕ್ಸಿಂಗ್ ಡೇ ಟೆಸ್ಟ್ ಗೆ ಟೀಂ ಇಂಡಿಯಾ ಅಭ್ಯಾಸ ಶುರು
ಆಸ್ಟ್ರೇಲಿಯಾ ಪ್ರತಿ ವರ್ಷ ಐತಿಹಾಸಿಕ ಎಂಸಿಜಿಯಲ್ಲಿ ಬಾಕ್ಸಿಂಗ್ ಡೇ ಪಂದ್ಯವನ್ನು ಡಿಸೆಂಬರ್ 26 ರಿಂದದ 30ರವರೆಗೆ ಆಡುತ್ತದೆ. ಆಯಾ ವರ್ಷ ಯಾವ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುತ್ತದೆಯೋ ಆ ತಂಡದೊಂದಿಗೆ ಬಾಕ್ಸಿಂಗ್ ಡೇ ಮುಖಾಮುಖಿಯಲ್ಲಿ ಕಾದಾಡಲಿದೆ. 1950ರಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ಮೊಟ್ಟಮೊದಲ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ನಡೆದಿತ್ತು.

ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದಲ್ಲಿ ದಾಖಲಾದ 5 ಅಪರೂಪದ ದಾಖಲೆಗಳಿವು..!
ಭಾರತ ತಂಡ ಆಸೀಸ್ ನಲ್ಲಿ 1985, 1999, 2003, 2007, 2011, 2014, 2018 ಹಾಗೂ 2020ರಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಆಡಿದೆ. ಇನ್ನು ಆಸ್ಟ್ರೇಲಿಯಾದಲ್ಲಿ ಬೇರೆ ಯಾವುದೇ ಸಮಯದಲ್ಲಿ ನಡೆಯುವ ಟೆಸ್ಟ್ ಪಂದ್ಯಗಳಿಗಿಂತ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳಿಗೆ ಬರುವ ಪ್ರೇಕ್ಷಕರ ಸಂಖ್ಯ ಅಧಿಕ. ಆ ನಿಟ್ಟಿನಲ್ಲಿಯೂ ಈ ಪಂದ್ಯ ಪ್ರಮುಖವಾಗಿದೆ.

Follow Us:
Download App:
  • android
  • ios