India Tour of South Africa : ಬಾಕ್ಸಿಂಗ್ ಡೇ ಟೆಸ್ಟ್ ಗೆ ಟೀಂ ಇಂಡಿಯಾ ಅಭ್ಯಾಸ ಶುರು
ಮೂರು ಪಂದ್ಯಗಳ ಟೆಸ್ಟ್ ಸರಣಿ ಡಿ. 26 ರಿಂದ ಪ್ರಾರಂಭ
ಸೆಂಚುರಿಯನ್ ನಲ್ಲಿ ನಡೆಯಲಿದೆ ಬಾಕ್ಸಿಂಗ್ ಡೇ ಟೆಸ್ಟ್
ಟ್ವಿಟರ್ ನಲ್ಲಿ ಟೀಂ ಇಂಡಿಯಾ ಅಭ್ಯಾಸದ ಚಿತ್ರಗಳನ್ನು ಪೋಸ್ಟ್ ಮಾಡಿದ ಬಿಸಿಸಿಐ
ಸೆಂಚುರಿಯನ್ (ಡಿ.18): ದಕ್ಷಿಣ ಆಫ್ರಿಕಾ (South Africa) ನೆಲದಲ್ಲಿ ಮೊಟ್ಟಮೊದಲ ಟೆಸ್ಟ್ ಸರಣಿ (Test series) ಗೆಲ್ಲುವ ಇರಾದೆಯಲ್ಲಿ ಹರಿಣಗಳ ನಾಡಿಗೆ ಕಾಲಿಟ್ಟಿರುವ ಟೀಂ ಇಂಡಿಯಾ (Team India) ಶನಿವಾರ ತನ್ನ ಅಭ್ಯಾಸವನ್ನು ಆರಂಭಿಸಿದೆ. ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಡಿಸೆಂಬರ್ 26 ರಿಂದ 30ರವರೆಗೆ ಸೆಂಚುರಿಯನ್ ನಲ್ಲಿ (Centurion)ನಡೆಯಲಿದೆ. ಬಾಕ್ಸಿಂಗ್ ಡೇ (Boxing Day) ದಿನ ಆರಂಭವಾಗಲಿರುವ ಈ ಪಂದ್ಯವನ್ನು ಗೆಲ್ಲುವ ದೃಷ್ಟಿಯಲ್ಲಿ ಭಾರತ ತಂಡದ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ( Board of Control for Cricket in India) ಟ್ವಿಟರ್ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಂ ಇಂಡಿಯಾದ ಮೊದಲ ಅಭ್ಯಾಸ ಅವಧಿಯ ಚಿತ್ರಗಳನ್ನು ಹಂಚಿಕೊಂಡಿದೆ. ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli), ಉಪನಾಯಕ ಕೆಎಲ್ ರಾಹುಲ್ (KL Rahul), ಅನುಭವಿ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ (Cheteshwar Pujara) ಹಾಗೂ ತಂಡದ ಅಗ್ರ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ( Ravichandran Ashwin)ಸೆಂಚುರಿಯನ್ ನಲ್ಲಿ ಅಭ್ಯಾಸ ನಡೆಸಿದ್ದಾರೆ.
"ಸೆಂಚುರಿಯನ್ ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ತನ್ನ ಸಿದ್ಧತೆಗಳನ್ನು ಆರಂಭಿಸಿದೆ. ಮೊದಲ ಅಭ್ಯಾಸ ಅವಧಿಯನ್ನು ತಂಡ ಮುಗಿಸಿದೆ" ಎಂದು ಕೆಲ ಚಿತ್ರಗಳೊಂದಿಗೆ ಟ್ವಿಟರ್ ನಲ್ಲಿ ಬರೆದಿದೆ. ಏಕದಿನ ತಂಡದ ನಾಯಕ ರೋಹಿತ್ ಶರ್ಮ (Rohit Sharma)ಬದಲಿಯಾಗಿ ಟೆಸ್ಟ್ ತಂಡ ಸೇರಿಕೊಂಡಿರುವ ಪ್ರಿಯಾಂಕ್ ಪಾಂಚಾಲ್ (Priyank Panchal)ಅವರ ಅಭ್ಯಾಸದ ಚಿತ್ರವೂ ಇದ್ದು, ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid ) ಅವರಿಂದ ಸಲಹೆಗಳನ್ನು ಪಡೆಯುತ್ತಿರುವ ಚಿತ್ರಗಳನ್ನು ಪ್ರಕಟಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲ ಟೆಸ್ಟ್ ಗೆ ಸಿದ್ಧತೆ ನಡೆಸುತ್ತಿರುವ ಕುರಿತಾಗಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ದಿನದಲ್ಲಿ ಇದಕ್ಕೂ ಮುನ್ನ ರೋಹಿತ್ ಶರ್ಮ ಅವರ ಅನುಪಸ್ಥಿತಿಯಲ್ಲಿ ಬಿಸಿಸಿಐ (BCCI) ಕೆಎಲ್ ರಾಹುಲ್ ಅವರನ್ನು ಟೆಸ್ಟ್ ಸರಣಿಗೆ ಉಪನಾಯಕರನ್ನಾಗಿ ಘೋಷಣೆ ಮಾಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಾಗಿ ಮುಂಬೈನಲ್ಲಿ ನಡೆದ ಅಭ್ಯಾಸ ಪಂದ್ಯದ ವೇಳೆ ರೋಹಿತ್ ಶರ್ಮ ಸ್ನಾಯುಸೆಳೆತಕ್ಕೆ ತುತ್ತಾಗಿದ್ದರು. ಅವರ ಬದಲಿಗೆ ಬಿಸಿಸಿಐ ಪ್ರಿಯಾಂಕ್ ಪಾಂಚಾಲ್ ರನ್ನು ತಂಡಕ್ಕೆ ಆಯ್ಕೆ ಮಾಡಿತ್ತು. ಕಳೆದ ಕೆಲವು ವರ್ಷಗಳಿಂದ ಟೀಂ ಇಂಡಿಯಾ ಟೆಸ್ಟ್ ತಂಡದ ಉಪನಾಯಕರಾಗಿದ್ದ ಮುಂಬೈನ ಅಜಿಂಕ್ಯ ರಹಾನೆ (Ajinkya Rahane) ಅವರನ್ನು ಕಳಪೆ ಫಾರ್ಮ್ ನ ಕಾರಣದಿಂದಾಗಿ ವಜಾ ಮಾಡಲಾಗಿತ್ತು.
India Tour of South Africa: ಕನ್ನಡಿಗ ಕೆ ಎಲ್ ರಾಹುಲ್‌ಗೆ ಟೀಂ ಇಂಡಿಯಾ ಟೆಸ್ಟ್ ಉಪನಾಯಕ ಪಟ್ಟ..!
ಭಾರತ ತಂಡ ಈವರೆಗೂ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಪಂದ್ಯ ಗೆದ್ದಿದ್ದರೂ ಟೆಸ್ಟ್ ಸರಣಿ ಗೆಲ್ಲುವಲ್ಲಿ ಯಶ ಕಂಡಿಲ್ಲ. ಈ ಬಾರಿಯೂ ಗಾಯದ ಸಮಸ್ಯೆಯೊಂದಿಗೆ ಟೀಂ ಇಂಡಿಯಾ ಹರಿಣಗಳ ನಾಡಿಗೆ ಕಾಲಿಟ್ಟಿದೆ. ರೋಹಿತ್ ಶರ್ಮ ಅಲ್ಲದೆ, ಕಳೆದ ನ್ಯೂಜಿಲೆಂಡ್ ವಿರುದ್ಧ ತವರಿನ ಟೆಸ್ಟ್ ಸರಣಿಯಲ್ಲಿ ಮೊಣಕಾಲು ಗಾಯಕ್ಕೆ ತುತ್ತಾಗಿರುವ ಅಗ್ರ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ಟೆಸ್ಟ್ ಸರಣಿಗೆ ಲಭ್ಯರಿಲ್ಲ.
Virat vs BCCI : ಕೊಹ್ಲಿ ಆಡಿದ ಅರ್ಧದಷ್ಟು ಪಂದ್ಯಗಳನ್ನು ಆಯ್ಕೆ ಸಮಿತಿಯಲ್ಲಿರುವ ಎಲ್ಲರೂ ಸೇರಿ ಆಡಿಲ್ಲ.!
ಆರಂಭಿಕ ಆಟಗಾರ ಶುಭ್ ಮಾನ್ ಗಿಲ್, ಸ್ಪಿನ್ನರ್ ಅಕ್ಸರ್ ಪಟೇಲ್ ಕೂಡ ಗಾಯಾಳುವಾಗಿದ್ದ ಕಾರಣ ಸಾಕಷ್ಟು ಎಚ್ಚರಿಕೆಯಲ್ಲಿ ಪ್ರವಾಸಕ್ಕೆ ತಂಡವನ್ನು ಆಯ್ಕೆ ಮಾಡಲಾಗಿದೆ. ಡಿಸೆಂಬರ್ 26 ರಿಂದ 30ರವರೆಗೆ ಸೆಂಚುರಿಯನ್ ನಲ್ಲಿ ಮೊದಲ ಪಂದ್ಯ ನಡೆಯಲಿದ್ದರೆ, ಜನವರಿ 3-7ರವರೆಗೆ ಜೊಹಾನ್ಸ್ ಬರ್ಗ್ ನಲ್ಲಿ ನ್ಯೂ ಇಯರ್ ಟೆಸ್ಟ್ ನಡೆಯಲಿದೆ. ಅಂತಿಮ ಪಂದ್ಯ ಜನವರಿ 11 ರಿಂದ 15ರವರೆಗೆ ಕೇಪ್ ಟೌನ್ ನಲ್ಲಿ ನಿಗದಿಯಾಗಿದೆ.