Asianet Suvarna News Asianet Suvarna News

ಗಂಗೂಲಿ ಜೊತೆ ಉತ್ತಮ ಸಂಬಂಧ ಮುಂದುವರಿಸುವೆ; ಕೊಹ್ಲಿ!

ನಾಯಕ ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಡುವಿನ ಸಂಬಂಧ ಚೆನ್ನಾಗಿಲ್ವಾ? ಈ ಪ್ರಶ್ನೆ 2017ರಿಂದ ಅಭಿಮಾನಿಗಳನ್ನು ಬಲವಾಗಿ ಕಾಡುತ್ತಿದೆ. ಇದೀಗ ಕೊಹ್ಲಿ, ಗಂಗೂಲಿ ಬೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಇದಕ್ಕೂ ಮುನ್ನ ಆರೋಗ್ಯಕರ ಚರ್ಚೆ ಮಾಡಲಿದ್ದೇವೆ ಎಂದು ಹೇಳೋ ಮೂಲಕ, ಕೆಲ ಸೂಚನೆ ನೀಡಿದ್ದಾರೆ.

Expecting Healthy discussion with bcci president sourav ganguly says kohli
Author
Bengaluru, First Published Oct 24, 2019, 5:52 PM IST

ಮುಂಬೈ(ಅ.24): ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಡುವಿನ ಸಂಬಂಧ ಹಲವು ಬಾರಿ ಚರ್ಚೆಯಾಗಿದೆ.  ಅನಿಲ್ ಕುಂಬ್ಳೆ ಬದಲು ರವಿ ಶಾಸ್ತ್ರಿ ಕೋಚ್ ಆಗಬೇಕು ಎಂದು ಕೊಹ್ಲಿ ಪಟ್ಟು ಹಿಡಿದಾಗ, ಗಂಗೂಲಿ-ಕೊಹ್ಲಿ ಸಂಬಂಧದಲ್ಲೂ ಏರುಪೇರಾಗಿತ್ತು. ಇದೀಗ ಇವರಿಬ್ಬರು ಉತ್ತಮ ಸಂಬಂಧ ಮುಂದುವರಿಸುವ ಮಾತನಾಡಿದ್ದಾರೆ. 

ಇದನ್ನೂ ಓದಿ: ಗಂಗೂಲಿಗೆ ಬೇಕು ಧೋನಿ ಭವಿಷ್ಯದ ಸ್ಪಷ್ಟತೆ, ಪತ್ರಕರ್ತನ ಪ್ರಶ್ನೆಗೆ ಕೊಹ್ಲಿ ಉತ್ತರ!

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಜೊತೆ ಆರೋಗ್ಯಕರ ಚರ್ಚೆ ಎದುರನೋಡುತ್ತಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ. ಟೀಂ ಇಂಡಿಯಾದ ಅವಕಶ್ಯತೆಗಳು, ನಮ್ಮ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ಇದೆ. ಗಂಗೂಲಿ ಕ್ರಿಕೆಟಿಗನಾಗಿ, ಆಡಳಿತಗಾರನಾಗಿ ಯಶಸ್ಸು ಕಂಡಿದ್ದಾರೆ. ಹೀಗಾಗಿ ಬಿಸಿಸಿಐಯನ್ನು ಉತ್ತಮ ದಿಕ್ಕಿನಲ್ಲಿ ಕೊಂಡೊಯ್ಯಲಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ಕ್ರಿಕೆಟಿಗ to ಬಿಸಿಸಿಐ ಅಧ್ಯಕ್ಷ; ಗಂಗೂಲಿ ಹೋರಾಟದ ಹಾದಿ!

ಗಂಗೂಲಿ ಜೊತೆ ಹಿಂದಿನಿಂದಲೂ ಉತ್ತಮ ಸಂಬಂಧ ಹೊಂದಿದ್ದೇನೆ. ಹಲವು ಬಾರಿ ಮಾತುಕತೆ ನಡೆಸಿದ್ದೇನೆ. ಇದೀಗ ಬಿಸಿಸಿಐ ಅಧ್ಯಕ್ಷರಾದ ಬಳಿಕ ಹೈಲೆವೆಲ್ ಮಾತುಕತೆ ನಡೆಸಲಿದ್ದೇನೆ. ಈ ಹಿಂದೆ ಇರುವ ಉತ್ತಮ ಸಂಬಂಧ ಮುಂದುವರಿಯಲಿದೆ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಿಸಿಸಿಐಗೆ ಗಂಗೂಲಿ ಬಾಸ್, 'ದಾದಾಗಿರಿ'ಯ ಆ ದಿನಗಳು ಮತ್ತೆ ಬಂದಿವೆ

ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸೌರವ್ ಗಂಗೂಲಿ, ಕೊಹ್ಲಿ ಟೀಂ ಇಂಡಿಯಾವನ್ನು ಹೊಸ ದಿಕ್ಕಿನಲ್ಲಿ ಕೊಂಡೊಯ್ಯಿದ್ದಾರೆ. ಕೊಹ್ಲಿ ಹಾಗೂ ತಂಡದ ಎಲ್ಲಾ ಬೇಡಿಕೆಗಳನ್ನು ಪೂರೈಸುತ್ತೇನೆ ಎಂದಿದ್ದರು. ಕೊಹ್ಲಿ ಹಾಗೂ ತಂಡ ಪ್ರದರ್ಶನದತ್ತ ಗಮನ ನೀಡಬೇಕು. ಬಿಸಿಸಿಐ ತಂಡದ ಜೊತೆಗಿರಲಿದೆ ಎಂದಿದ್ದರು.

Follow Us:
Download App:
  • android
  • ios