ದಾದಾಗಿರಿಯ ಆ ದಿನದಳು ಮತ್ತೆ ಶುರುವಾಗಲಿ/ ಬಿಸಿಸಿಐ  ಚುಕ್ಕಾಣಿ ಸೌರವ್ ಗಂಗೂಲಿ ಕೈಗೆ/ ಗೆಲುವಿನ ರುಚಿ ಹತ್ತಿಸಿದ ನಾಯಕನಿಗೆ ಈಗ ದೊಡ್ಡ ಜವಾಬ್ದಾರಿ

ಸೌರವ್ ಗಂಗೂಲಿ... ಹೌದು ಕ್ರಿಕೆಟ್ ಜಗತ್ತಿನ ಮಟ್ಟಿಗೆ ದೊಡ್ಡ ನಾಯಕತ್ವದ ಹೆಸರು.. ಭಾರತಕ್ಕೆ ಗೆಲುವಿನ ರುಚಿ ಹತ್ತಿಸಿದ ನಾಯಕ...ಫಿಕ್ಸಿಂಗ್ ಭೂತದಿಂದ ತಂಡವನ್ನು ಹೊರಕ್ಕೆ ತಂದ ಲೀಡರ್, ವಿಶ್ವ ಶ್ರೇಷ್ಠ ಆಟಗಾರರನ್ನು ಬೆಳೆಸಿದ ಮಹಾರಾಜ.. ಇಂಥ ಸೌರವ್ ಇದೀಗ ಬಿಸಿಸಿಐನ ನೂತನ ಅಧ್ಯಕ್ಷ.

ಭಾರ​ತೀಯ ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯ​ಕ​ರಲ್ಲಿ ಒಬ್ಬ​ರಾದ ಸೌರವ್‌ ಗಂಗೂಲಿ, ಬುಧ​ವಾರ ಭಾರ​ತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿ​ಸಿ​ಸಿ​ಐ​)​ನ 39ನೇ ಅಧ್ಯಕ್ಷರಾಗಿ ಅಧಿ​ಕಾರಿ ಸ್ವೀಕ​ರಿ​ಸ​ಲಿ​ದ್ದಾರೆ.  ಸೌರವ್ ಗಂಗೂಲಿಯವರ ಬಗ್ಗೆ ಬರೆದಷ್ಟು ಖಾಲಿಯಾಗದ ವಿಷಯಗಳಿವೆ.

ಗಂಗೂಲಿ ಹೋರಾಟದ ಹಾದಿ

ಸೌರವ್ ಗಂಗೂಲಿ... ಹೌದು ಕ್ರಿಕೆಟ್ ಜಗತ್ತಿನ ಮಟ್ಟಿಗೆ ದೊಡ್ಡ ನಾಯಕತ್ವದ ಹೆಸರು.. ಭಾರತಕ್ಕೆ ಗೆಲುವಿನ ರುಚಿ ಹತ್ತಿಸಿದ ನಾಯಕ...ಫಿಕ್ಸಿಂಗ್ ಭೂತದಿಂದ ತಂಡವನ್ನು ಹೊರಕ್ಕೆ ತಂದ ಲೀಡರ್, ವಿಶ್ವ ಶ್ರೇಷ್ಠ ಆಟಗಾರರನ್ನು ಬೆಳೆಸಿದ ಮಹಾರಾಜ.. ಅಂದಿನ ಅನಭಿಷಿಕ್ತ ಆಸ್ಟ್ರೇಲಿಯಾಕ್ಕೆ ಮುಟ್ಟಿ ನೋಡಿಕೊಳ್ಳುವ ಏಟು ಕೊಟ್ಟ ಸೇನಾನಿ.

ಬಂಗಾಳದ ಮಹಾರಾಜ ಕ್ರೀಡಾಂಗಣದಲ್ಲಿಯೂ ಮಹಾರಾಜನಾಗಿಯೇ ಮೆರೆದ ಅದೆಷ್ಟೋ ಉದಾಹರಣೆಗಳು ಇಲ್ಲಿವೆ. ಇಂಗ್ಲೆಂಡ್ ವಿರುದ್ಧದ ನಾಟ್ ವೆಸ್ಟ್ ಸರಣಿ ಗೆದ್ದಾಗ ಶರ್ಟ್ ಬಿಚ್ಚಿ ವಿಜೃಂಭಿಸಿದ್ದನ್ನು ಭಾರತದ ಯಾವ ಕ್ರಿಕೆಟ್ ಪ್ರೇಮಿ ತಾನೆ ಮರೆಯಲು ಸಾಧ್ಯ. ಇಂಥ ದಾದಾ ಕೈಗೆ ಇದೀಗ ಬಿಸಿಸಿಐ ಅಂದರೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ ಚುಕ್ಕಾಣಿ ಸಿಕ್ಕಿದೆ.

ಭಾರತ ತಂಡಕ್ಕೆ ಸೌರವ್ ನಾಯಕನಾದ ಸಂದರ್ಭವನ್ನು ಉಲ್ಲೇಖ ಮಾಡಲೇಬೇಕು. ಮ್ಯಾಚ್ ಫಿಕ್ಸಿಂಗ್ ಎಂಬ ಭೂತಕ್ಕೆ ಸಿಕ್ಕು ದೀರ್ಘಕಾಲ ಭಾರತದ ಕ್ರಿಕೆಟ್ ತಂಡದ ನಾಯಕರಾಗಿದ್ದ ಮೊಹಮದ್ ಅಜರುದ್ದೀನ್, ಅಜಯ್ ಜಡೇಜಾ, ಆಕಾಶ್ ಛೋಪ್ರಾ, ನಯನ್ ಮೋಂಗಿಯಾರಂಥವರು ಟೀಂ ನಿಂದ ಹೊರಬಿದ್ದಿದ್ದರು. ಸಚಿನ್ ತೆಂಡೂಲ್ಕರ್ ಫಾರ್ಮ್ ಹುಡುಕಾಟದಲ್ಲಿ ಇದ್ದರು.

ಈ ಸಂಸರ್ಭದಲ್ಲಿಯೇ ನಾಯಕತ್ವ ಸೌರವ್  ಕೈಗೆ ಬಂದ ಮೇಲೆ ಶುರುವಾಗಿದ್ದೆ ದಾದಾಗಿರಿಯ ದಿನಗಳು.. ಇಂದು ಜಗತ್ತೆ ಕೊಂಡಾಡುವ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಎಂಎಸ್ ಧೋನಿ, ಜಹೀರ್ ಖಾನ್, ಹರ್ಭಜನ್ ಸಿಂಗ್, ಇರ್ಪಾನ್ ಪಠಾಣ್,.. ಅದೆಷ್ಟೋ ಪ್ರತಿಭೆಗಳು ಮಿಂಚಲು ಹಿಂದಿದ್ದ ಶಕ್ತಿ ದಾದಾ. ವೀರೇಂದ್ರ ಸೆಹ್ವಾಗ್ ಗಾಗಿ ತನ್ನ ಆರಂಭಿಕ ಸ್ಥಾನವನ್ನೇ ಬಿಟ್ಟುಕೊಟ್ಟವರು ದಾದಾ, ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಯಬೇಕಾದವ ಅತ್ಯುತ್ತಮ ಆಲ್ ರೌಂಡರ್ ಆಗಿರಬೇಕು. ಬ್ಯಾಟಿಂಗ್ ಜತೆಗೆ ವೇಗದ ಬೌಲಿಂಗ್ ಮಾಡುವ ಶಕ್ತಿ ಹೊಂದಿರಬೇಕು ಎಂದು ದಾದಾ ಅಂದೇ ಹೇಳಿದ್ದರು. ಅನೇಕ ಪ್ರಯೋಗಗಳನ್ನು ಮಾಡಿದ್ದರು. ನಂತರ ವಿಶ್ವದ ಇತರೆ ತಂಡಗಳಲ್ಲಿಯೂ ಇದೊಂದು ಕ್ರಮಾಂಕ ಟ್ರೆಂಡ್ ಆಗಿ ಬದಲಾಯಿತು,.

ಎಲ್ಲಿಯೋ ಇದ್ದ ತಂಡವನ್ನು 2003ರ ವಿಶ್ವಕಪ್ ಫೈನಲ್ ಗೆ ಏರಿಸಿದ್ದನ್ನು ಯಾರು ತಾನೆ ಮರೆತಾರು? ಜಿಂಬಾಬ್ವೆ, ಕೀನ್ಯಾ, ಪಾಕಿಸ್ತಾನಗಳ ಜತೆ ಆಡಿಕೊಂಡು ಇದ್ದ ತಂಡ ಆಸ್ಟ್ರೇಲಿಯಾಗೆ ಠಕ್ಕರ್ ಕೊಡುವ ರೀತಿ ಬೆಳೆಸಿದ್ದು ದಾದಾ. ಟೀಂ ಆಯ್ಕೆಯಲ್ಲಿ ದಾದಾಗಿರಿ ಹೇಗಿರುತ್ತಿರುತ್ತಿತ್ತು ಎಂದರೆ ಅದೆಷ್ಟೋ ಪಂದ್ಯಗಳಲ್ಲಿ ಎರಡಂಕಿಯನ್ನು ದಾಟದೇ ಒದ್ದಾಡುತ್ತಿದ್ದ ವೀರೇಂದ್ರ ಸೆಹ್ವಾಗ್ ಅವರನ್ನು ಮತ್ತೆ ಮತ್ತೆ ಆರಂಭಿಕರನ್ನಾಗಿಯೇ ಕಣಕ್ಕೆ ಇಳಿಸುತ್ತಿದ್ದುದ್ದು ದಾದಾ. ಕೊನೆಗೆ ಫಾರ್ಮ್ ಕಂಡುಕೊಂಡ ಸೆಹ್ವಾಗ್ ಮೂನ್ನೂರು ಬಾರಿಸಿದ್ದು ಗೊತ್ತೆ ಇದೆ.

ಸ್ಟೀವಾ ನಾಯಕತ್ವದ ಟೆಸ್ಟ್ ತಂಡ ನಿರಂತರ 16 ಟೆಸ್ಡ್ ಗೆದ್ದು ವಿಶ್ವವಿಜಯಿಯಾಗಿ ಬಂದಾಗ ಲಕ್ಷ್ಮಣ ಮತ್ತು ದ್ರಾವಿಡ್ ಸೇರಿ ಕೋಲ್ಕತ್ತಾದಲ್ಲಿ ಕೊಟ್ಟ ಏಟು.. ಫಾಲೋ ಆನ್ ಇದ್ದಾಗ ಎರಡನೇ ಇನಿಂಗ್ಸ್ ನಲ್ಲಿ ಒನ್ ಡೌನ್ ದ್ರಾವಿಡ್ ಬದಲು ಮೊದಲ ಇನಿಂಗ್ಸ್ ನಲ್ಲಿ ಹೋರಾಟದ ಅರ್ಧ ಶತಕ ಬಾರಿಸಿದ್ದ ಲಕ್ಷ್ಮಣ ಅವರನ್ನು ದಾದಾ ಕಳಿಸಿಕೊಟ್ಟರು. ನಂತರ ಆಸ್ಟ್ರೇಲಿಯಾ ಬೆಂಡೆತ್ತಿದ ವಿವಿಎಸ್ 280 ರನ್ ಬಾರಿಸಿದ್ದು ಇತಿಹಾಸ. ಅಬ್ಬಬ್ಬಾ ಇವತ್ತಿಗೂ ಬಾಯಿ ಚಪ್ಪರಿಸಬೇಕು.. ಹಿಂದಿದ್ದ ಶಕ್ತಿ ದಾದಾ..

ಆಫ್ ಸೈಡ್ ಮಹಾರಾಜಾ ಎಂದೆ ಕರೆಸಿಕೊಂಡ ಗಂಗೂಲಿ ತಾನು ಬೆಳೆದಿದ್ದು ಅಲ್ಲದೇ ತಂಡವನ್ನು ಬೆಳೆಸಿದರು. ಇಂದು ಏಕದಿನ ಶ್ರೇಯಾಂಕದಲ್ಲಿ ನಾವೇ ನಂಬರ್ 1, ಟೆಸ್ಟ್ ಕ್ರಮಾಂಕದಲ್ಲಿ ನಾವೇ ಚಾಂಪಿಯನ್ ಎಂದು ಬೀಗುತ್ತೇವೆ.. ಆದರೆ ತಂಡವೊಂದನ್ನು ಹೇಗೆ ಸಿದ್ಧ ಮಾಡಬೇಕು? ಯಾವ ದೇಶದ ಪಿಚ್ ಗೆ ಯಾವ ಸಂಯೋಜನೆ ಬೇಕು? ಆಸ್ಟ್ರೇಲಿಯಾದಲ್ಲಿ ಆದರೆ ಹೇಗೆ? ವೆಸ್ಟ್ ಇಂಡೀಸ್ ನಲ್ಲಿ ಆದರೆ ಹೇಗೆ? ದಕ್ಷಿಣ ಆಫ್ರಿಕಾದಲ್ಲಿ ಆದರೆ ಹೇಗೆ? ಉಪಖಂಡದಲ್ಲಿ ಆದರೆ ಹೇಗೆ? ಎಷ್ಟು ಜನ ವೇಗಿಗಳಿರಬೇಕು? ಯಾವ ಸ್ಪಿನ್ನರ್ ಆಡಿಸಬೇಕು.... ಪೀಲ್ಡ್ ಸೆಟ್ಟಿಂಗ್ ಹೇಗೆ.. ಇಂಥ ನೂರಾರು ಸಂಗತಿಗಳಿಗೆ ದಾದಾ ಅಲಿಖಿತವಾಗಿ ಬರೆದ ಪುಸ್ತಕ ಭಾರತದ ಕ್ರಿಕೆಟ್ ಗೆಂತೂ ಮಾದರಿ.

ಗಂಗೂಲಿ ಬಗ್ಗೆ ಬರೆಯುತ್ತಾ ಹೋದರೆ ಬರೆಯುತ್ತಲೇ ಇರುತ್ತೇನೆ. ಗಂಗೂಲಿ ಇದೀಗ ಬಿಸಿಸಿಐ ಅಧ್ಯಕ್ಷ , 1990 ರಿಂದ 2010ರವರೆಗೆ ದಾದಾ ಕ್ರೀಡಾಂಗಣದಲ್ಲಿ ಮಾಡಿದ ಮೋಡಿ, ಅವರ ಸ್ಟ್ರಾಟಜಿ, ವಿರೋಧಿಗಳಿಗೆ ಕೊಟ್ಟ ಠಕ್ಕರ್ ಎಲ್ಲವನ್ನು ನೋಡಿ ಅನುಭವಿಸಿದ್ದೇವೆ. ಈಗ ದಾದಾ ಕೈಗೆ ಬಿಸಿಸಿಐ ಸಿಕ್ಕಿದೆ. ಹಣಕಾಸು ವಿಚಾರದಲ್ಲಿ ಅತಿ ಶ್ರೀಮಂತ ಸಂಸ್ಥೆ...

ಭಾರತೀಯ ಕ್ರಿಕೆಟ್ ಹಿಂದೆ ಅನುಭವಿಸುತ್ತಿದ್ದ ಸಮಸ್ಯೆಗಳು ಈಗಿಲ್ಲ. ಉದಯೋನ್ಮುಖ ಆಟಗಾರರಿಗೂ ಕೊರತೆ ಏನಿಲ್ಲ.. ಮುಂಬೈ ಮಾಫಿಯಾದಿಂದ ಆಲ್ ಮೋಸ್ಟ್ ಹೊರಕ್ಕೆ ಬಂದಿದೆ.. ಪಂದ್ಯಾವಳಿ ನಡೆಸುವುದು ಸಂಘಟಿಸುವುದು ಸವಾಲಾಗಿಲ್ಲ.. ಇಷ್ಟೆಲ್ಲಾ ಇದ್ದರೂ ದಾದಾ ಅಭಿಮಾನಿಗಳಿಂದ ಹೊಸತನದ ನಿರೀಕ್ಷೆ ಇದ್ದೆ ಇದೆ.

ಗುಡ್ ಲಕ್ ಸೌರವ್... ನಿಮ್ಮ ದಾದಾಗಿರಿಯ ದಿನಗಳು ಮತ್ತೆ ಶುರುವಾಗಲಿ...