Asianet Suvarna News Asianet Suvarna News

ಭಾರತ ಮಹಿಳಾ ತಂಡಕ್ಕೆ ಮತ್ತೊಂದು ಸೋಲು; ಸರಣಿ ಇಂಗ್ಲೆಂಡ್ ಪಾಲು

* ಮಿಥಾಲಿ ರಾಜ್ ಪಡೆ ಎದುರು ಏಕದಿನ ಸರಣಿ ಗೆದ್ದ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡ

* ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ಗೆ 5 ವಿಕೆಟ್‌ಗಳ ಜಯ

* 3 ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಗೆಲುವು ಸಾಧಿಸಿದ ಇಂಗ್ಲೆಂಡ್

 

England Womens Cricket Team Beat India and  Clinch the ODI Series kvn
Author
Taunton, First Published Jul 1, 2021, 11:43 AM IST

ಟಾಂಟನ್‌(ಜು.01): ಕೇಟ್ ಕ್ರಾಸ್‌ ಮಾರಕ ದಾಳಿಯ ನೆರವಿನಿಂದ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡವು ಎರಡನೇ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಭಾರತ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ಮಹಿಳಾ ಕ್ರಿಕೆಟ್ ತಂಡ 221 ರನ್‌ ಬಾರಿಸಿ ಸರ್ವಪತನ ಕಂಡಿತು. ಶಫಾಲಿ ವರ್ಮಾ 44 ರನ್‌ ಬಾರಿಸಿದರೆ, ನಾಯಕಿ ಮಿಥಾಲಿ ರಾಜ್ ಸತತ ಎರಡನೇ ಅರ್ಧಶತಕ ಬಾರಿಸಿದರು. ಒಟ್ಟು 92 ಎಸೆತಗಳನ್ನು ಎದುರಿಸಿದ ಮಿಥಾಲಿ ರಾಜ್ 6 ಬೌಂಡರಿ ಸಹಿತ 59 ರನ್‌ ಬಾರಿಸಿ ರನೌಟ್‌ ಆದರು. 

ಇಂಗ್ಲೆಂಡ್ ಪರ ಮಾರಕ ದಾಳಿ ನಡೆಸಿದ ಕೇಟ್‌ ಕ್ರಾಸ್‌ 34 ರನ್‌ ನೀಡಿ 5 ವಿಕೆಟ್‌ ಕಬಳಿಸಿದರು. ಕ್ರಾಸ್ ಭಾರತದ ಸ್ಮೃತಿ ಮಂಧನಾ, ಜೆಮಿಯಾ ರೋಡ್ರಿಗಸ್‌, ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ ಹಾಗೂ ಸ್ನೆಹ್ ರಾಣಾ ಅವರನ್ನು ಪೆವಿಲಿಯನ್ನಿಗಟ್ಟುವ ಮೂಲಕ ಭಾರತ ತಂಡ ದೊಡ್ಡ ಮೊತ್ತ ಗಳಿಸುವ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡಿದರು.

ಮಹಿಳಾ ಏಕದಿನ ಪಂದ್ಯ: ಭಾರತ ಎದುರು ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ

ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ತಂಡಕ್ಕೆ ಅನುಭವಿ ವೇಗಿ ಜೂಲನ್‌ ಗೋಸ್ವಾಮಿ ಆರಂಭದಲ್ಲೇ ಶಾಕ್‌ ನೀಡಿದರು. ಟಾಮಿ ಬಿಯೂಮೌಟ್‌ 10 ರನ್ ಗಳಿಸಿ ಪೆವಿಲಿಯನ್ ಸೇರಿದರು. ಮತ್ತೋರ್ವ ಆರಂಭಿಕ ಬ್ಯಾಟರ್ ವಿನ್‌ಫೀಲ್ಡ್‌ ಹಿಲ್‌ 42 ರನ್‌ ಬಾರಿಸಿದರು. ಮಧ್ಯದಲ್ಲಿ ಪೂನಂ ಯಾದವ್ 2 ವಿಕೆಟ್ ಕಬಳಿಸುವ ಮೂಲಕ ಭಾರತದ ಗೆಲುವಿನ ಆಸೆ ಮೂಡಿಸಿದರು. ಒಂದು ಹಂತದಲ್ಲಿ ಇಂಗ್ಲೆಂಡ್ ತಂಡವು 133 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಆದರೆ ಆರನೇ ವಿಕೆಟ್‌ಗೆ ಡಂಕ್ಲೇ ಹಾಗೂ ಬ್ರೆಂಟ್ ಮುರಿಯದ 92 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಭರ್ಜರಿಯಾದ ಗೆಲುವನ್ನು ತಂದಿಟ್ಟರು. ಇನ್ನು ಮೂರನೇ ಏಕದಿನ ಪಂದ್ಯವು ಜುಲೈ 03ರಂದು ನಡೆಯಲಿದೆ.
 

Follow Us:
Download App:
  • android
  • ios