Asianet Suvarna News

ಮಹಿಳಾ ಏಕದಿನ ಪಂದ್ಯ: ಭಾರತ ಎದುರು ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ

* ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್‌ ಬೌಲಿಂಗ್ ಆಯ್ಕೆ

* ಭಾರತ ತಂಡದಲ್ಲಿ 3 ಬದಲಾವಣೆ

* ಜೆಮಿಯಾ ರೋಡ್ರಿಗಸ್‌, ಸ್ನೆಹ್ ರಾಣಾ ಹಾಗೂ ಪೂನಂ ಯಾದವ್‌ಗೆ ಸ್ಥಾನ

England Women Cricket Team Won the toss and elected to field first Against India in Taunton kvn
Author
Taunton, First Published Jun 30, 2021, 6:28 PM IST
  • Facebook
  • Twitter
  • Whatsapp

ಟಾಂಟನ್‌(ಜೂ.30): ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕಿ ಹೀಥರ್ ನೈಟ್‌ ಬೌಲಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಭಾರತ ಮಹಿಳಾ ಕ್ರಿಕೆಟ್‌ ತಂಡದಲ್ಲಿ 3 ಬದಲಾವಣೆಗಳನ್ನು ಮಾಡಲಾಗಿದ್ದು, ಜೆಮಿಯಾ ರೋಡ್ರಿಗಸ್‌, ಸ್ನೆಹ್ ರಾಣಾ ಹಾಗೂ ಪೂನಂ ಯಾದವ್ ತಂಡ ಕೂಡಿಕೊಂಡಿದ್ದಾರೆ. ಪೂನಂ ರಾವತ್, ಪೂಜಾ ವಸ್ತ್ರಾಕರ್ ಹಾಗೂ ಏಕ್ತಾ ಬಿಶ್ತ್‌ಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಇಂಗ್ಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಇಂಗ್ಲೆಂಡ್‌ಗೆ ತಿರುಗೇಟು ನೀಡಲು ಸಜ್ಜಾದ ಮಿಥಾಲಿ ರಾಜ್ ಪಡೆ

ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಮಿಥಾಲಿ ರಾಜ್ ನೇತೃತ್ವದ ಟೀಂ ಇಂಡಿಯಾ 8 ವಿಕೆಟ್‌ಗಳ ಆಘಾತಕಾರಿ ಸೋಲು ಕಂಡಿತ್ತು. ಇದೀಗ ಎರಡನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ತಿರುಗೇಟು ನೀಡಲು ಭಾರತೀಯ ಮಹಿಳಾ ಕ್ರಿಕೆಟ್ ತಂಡ ಎದುರು ನೋಡುತ್ತಿದೆ. ಮತ್ತೊಂದೆಡೆ ಈ ಪಂದ್ಯವನ್ನು ಗೆದ್ದು, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಏಕದಿನ ಸರಣಿಯನ್ನು ಕೈವಶ ಮಾಡಿಕೊಳ್ಳಲು ಇಂಗ್ಲೆಂಡ್‌ ಮಹಿಳಾ ತಂಡ ಹವಣಿಸುತ್ತಿದೆ.

ತಂಡಗಳು ಹೀಗಿವೆ ನೋಡಿ:

ಭಾರತ ತಂಡ:

ಇಂಗ್ಲೆಂಡ್ ತಂಡ: 


 

Follow Us:
Download App:
  • android
  • ios