ಸ್ಯಾಮ್‌ ಬಿಲ್ಲಿಂಗ್ಸ್‌ ಪರಿ​ಸರ ಸ್ನೇಹಿ ಗ್ಲೌಸ್‌ಗೆ ಐಸಿ​ಸಿ ನಿಷೇ​ಧ!

ಇಂಗ್ಲೆಂಡ್ ಉಪನಾಯಕ ಸ್ಯಾಮ್ ಬಿಲ್ಲಿಂಗ್ಸ್  ಗ್ಲೌಸ್ ಇದೀಗ ಐಸಿಸಿ ಕೆಂಗಣ್ಣಿಗೆ ಗುರಿಯಾಗಿದೆ. ಪರಿಸರಸ್ನೇಹಿ ಗ್ಲೌಸ್ ಬಳಸುವ ವಿಚಾರವಾಗಿ ಐಸಿಸಿ ಖ್ಯಾತೆ ತರೆದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

England vice captain Sam Billings Banned by ICC from Wearing Eco friendly Gloves

ಕ್ರೈಸ್ಟ್‌​ಚರ್ಚ್[ನ.03]: ನ್ಯೂಜಿ​ಲೆಂಡ್‌ ವಿರು​ದ್ಧದ ಮೊದ​ಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ನ ಸ್ಯಾಮ್‌ ಬಿಲ್ಲಿಂಗ್ಸ್‌ ಪರಿ​ಸರ ಸ್ನೇಹಿ ಗ್ಲೌಸ್‌ ಧರಿ​ಸು​ವು​ದನ್ನು ಐಸಿಸಿ ತಡೆ​ದಿ​ದೆ.

ಧೋನಿ ಗ್ಲೌಸ್ ವಿವಾದ- ಐಸಿಸಿಯಿಂದ ಖಡಕ್ ವಾರ್ನಿಂಗ್!

ನ್ಯೂಜಿ​ಲೆಂಡ್‌​ ಪ್ರವಾ​ಸದ ಅಭ್ಯಾಸ ಪಂದ್ಯ​ಗ​ಳಲ್ಲಿ ಬಿಲ್ಲಿಂಗ್ಸ್‌ ಪರಿ​ಸರ ಸ್ನೇಹಿ ಗ್ಲೌಸ್‌ ಧರಿ​ಸಿ​ದ್ದರು. ಆದರೆ ಅಂತಾ​ರಾ​ಷ್ಟ್ರೀಯ ಪಂದ್ಯ​ದಲ್ಲಿ ಬಣ್ಣ ಬಣ್ಣದ ಗ್ಲೌಸ್‌ ಐಸಿಸಿ ನಿಯ​ಮ ಉಲ್ಲಂಘಿ​ಸು​ತ್ತ​ದೆ. ಸೀ​ಮಿತ ಓವರ್‌ನಲ್ಲಿ ಗ್ಲೌಸ್‌ನ ಶೇ.50ರಷ್ಟುಬಿಳಿ ಬಣ್ಣ ಇರ​ಬೇ​ಕು. ಉಳಿದ ಭಾಗ ತಂಡದ ಜೆರ್ಸಿ ಬಣ್ಣ ಇರ​ಬೇ​ಕು. ಆದರೆ ಪರಿ​ಸರ ಸ್ನೇಹಿ ಗ್ಲೌಸ್‌ ವಿವಿಧ ಬಣ್ಣ​ಗ​ಳನ್ನು ಹೊಂದಿದೆ. ಕೇವಲ ಐಪಿ​ಎಲ್‌, ಟಿ10ನಂತಹ ಟೂರ್ನಿ​ಗ​ಳಲ್ಲಿ ಬಿಲ್ಲಿಂಗ್ಸ್‌ ಈ ಗ್ಲೌಸ್‌ ಬಳ​ಸ​ಬ​ಹು​ದು.

ಧೋನಿ ಗ್ಲೌಸಲ್ಲಿ IA ಚಿಹ್ನೆಗೆ ICC ವಿರೋಧ: ಪಾಕ್‌ಗಿಲ್ಲದ ನಿಯಮ ನಮಗ್ಯಾಕೆ?

ಗ್ಲೌಸ್ ಬಗೆಗಿನ ಐಸಿಸಿ ವಿವಾದ ಮೊದಲೇನಲ್ಲ: ಹೌದು, ಈ ಮೊದಲು ಐಸಿಸಿ ಏಕದಿನ ವಿಶ್ವಕಪ್ ವೇಳೆ ಟೀಂ ಇಂಡಿಯಾ ಮಾಜಿ ನಾಯಕ, ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮಹೇಂದ್ರ ಸಿಂಗ್ ಧೋನಿ ಭಾರತೀಯ ಸೇನೆಯ ಬಲಿದಾನ್ ಚಿನ್ಹೆ ಇರುವ ಗ್ಲೌಸ್ ಧರಿಸಿ ಮೈದಾನಕ್ಕಿಳಿದಿದ್ದರು. ಇದಕ್ಕೆ ಐಸಿಸಿ ಆಕ್ಷೇಪ ವ್ಯಕ್ತಪಡಿಸಿತ್ತು.

 

Latest Videos
Follow Us:
Download App:
  • android
  • ios