ಇಂಗ್ಲೆಂಡ್‌ನ ಲೀಡ್ಸ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ (New Zealand) ನಡುವಿನ ಟೆಸ್ಟ್ ಪಂದ್ಯ ನೋಡಲು ಬಂದ ಇಂಗ್ಲೆಂಡ್ ಪ್ರಧಾನಿ ಜಾನ್ಸನ್ ಬೋರಿಸ್ ಅವರನ್ನೇ ಪೊಲೀಸರು ಓಡಿಸಿದ್ದಾರೆ. ಅದರ ದೃಶ್ಯ ಈಗ ವೈರಲ್ ಆಗಿದೆ.
ನವದೆಹಲಿ: ಇಂಗ್ಲೆಂಡ್‌ನ ಲೀಡ್ಸ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ (New Zealand) ನಡುವಿನ ಟೆಸ್ಟ್ ಪಂದ್ಯ ನೋಡಲು ಬಂದ ಇಂಗ್ಲೆಂಡ್ ಪ್ರಧಾನಿ ಜಾನ್ಸನ್ ಬೋರಿಸ್ ಅವರನ್ನೇ ಪೊಲೀಸರು ಓಡಿಸಿದ್ದಾರೆ. ಅದರ ದೃಶ್ಯ ಈಗ ವೈರಲ್ ಆಗಿದೆ. ಅಯ್ಯೋ ದೇವ ಅಷ್ಟೊಂದು ಭದ್ರತೆ ಇರುವ ದೇಶದ ಪ್ರಧಾನಿಯೊಬ್ಬರನ್ನು ಪೊಲೀಸರು ಓಡಿಸೋದ ಇದು ಹೇಗೆ ಸಾಧ್ಯ, ಇಂಗ್ಲೆಂಡ್‌ನ ಪ್ರಧಾನಿಗೆ ಸ್ವಲ್ಪವೂ ಮರ್ಯಾದೆ ಇಲ್ವಾ ಅಂತ ಯೋಚಿಸಬಹುದು. ಆದ್ರೆ ಇಲ್ಲಿ ಪೊಲೀಸರು ಓಡಿಸಿರೋದು ಸ್ವತಃ ಪ್ರಧಾನಿಯನ್ನಲ್ಲಾ. ಪ್ರಧಾನಿ ರೂಪದಲ್ಲಿದ್ದ ಡಮ್ಮಿ ವ್ಯಕ್ತಿಯನ್ನು ಪೊಲೀಸರು ಬೆನ್ನಟ್ಟಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ ಆಗಿದೆ.
ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯಗಳು ನಡೆಯುತ್ತಿರುವ ವೇಳೆ ಕೆಲವು ಸ್ವಾರಸ್ಯಕರ ಘಟನೆಗಳು ನಡೆಯುತ್ತಿರುತ್ತವೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಪ್ರಪೋಸ್ ಮಾಡುವುದು, ಚಿತ್ರ ವಿಚಿತ್ರ ಪ್ಲೇ ಕಾರ್ಡ್‌ಗಳನ್ನು ತೋರಿಸುವುದು ನಡೆಯುತ್ತಿರುತ್ತದೆ. ಆದರೆ ಈಗ ಇಂಗ್ಲೆಂಡ್‌ನ ((England)ಲೀಡ್ಸ್‌ನಲ್ಲಿರುವ ಹೆಡಿಂಗ್ಲಿ ಮೈದಾನದಲ್ಲಿ ನಡೆದ ಘಟನೆಯೊಂದು ನೋಡುಗರನ್ನು ಅಚ್ಚರಿಗೆ ದೂಡಿದೆ. ಇಂಗ್ಲೆಂಡ್‌ನ ಪ್ರಧಾನಿಯಂತೆ ಕಾಣುವ ವ್ಯಕ್ತಿಯೊಬ್ಬರನ್ನು ಪೊಲೀಸರು ಓಡಿಸುತ್ತಿದ್ದಾರೆ. ಆದರೆ ವಾಸ್ತವಾಗಿ ಈತ ಪ್ರಧಾನಿಯಂತೆ ವೇಷ ಧರಿಸಿರುವ ವ್ಯಕ್ತಿಯಷ್ಟೇ. ಅಲ್ಲದೇ ಇವರನ್ನು ಓಡಿಸುತ್ತಿರುವ ಪೊಲೀಸರು ಕೂಡ ಪೊಲೀಸ್ ವೇಷದಲ್ಲಿದ್ದ ಕ್ರಿಕೆಟ್ ಅಭಿಮಾನಿಗಳಂತೆ.
ಪೋಲೀಸರ ವೇಷದಲ್ಲಿದ್ದ ಕ್ರಿಕೆಟ್ ಅಭಿಮಾನಿಗಳು ಬೋರಿಸ್ ವೇಷಧಾರಿಯನ್ನು ಹಿಂಬಾಲಿಸುತ್ತಿದ್ದರೆ, ಅವರು ಪ್ರೇಕ್ಷಕರ ಗ್ಯಾಲರಿಯಲ್ಲಿ ಓಡಿ ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇಂಗ್ಲೆಂಡ್‌ನ ಬಾರ್ಮಿ ಆರ್ಮಿ ಶನಿವಾರ (ಜೂನ್ 25, 2022) ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ. ವ್ಯಕ್ತಿಯೊಬ್ಬರು ಹೊಂಬಣ್ಣದ ವಿಗ್, ಬಿಳಿ ಶರ್ಟ್, ನೀಲಿ ಟೈ ಮತ್ತು ಕಪ್ಪು ಸನ್ ಗ್ಲಾಸ್ ಧರಿಸಿ ಇಂಗ್ಲೆಂಡ್ ಪ್ರಧಾನಿ ಜಾನ್ಸನ್ ಬೋರಿಸ್ ಅವರಂತೆ ಕಾಣಿಸುತ್ತಿದ್ದಾರೆ.
Ind vs Eng: ರೋಹಿತ್ ಶರ್ಮಾ ಆರೋಗ್ಯದ ಅಪ್‌ಡೇಟ್ ನೀಡಿದ ಮಗಳು ಸಮೈರಾ..! ವಿಡಿಯೋ ವೈರಲ್
ಈ ವಿಡಿಯೋಗೆ ಬೋರಿಸ್ ಜಾನ್ಸನ್ (Boris Johnson) ಅವರನ್ನು ಪೊಲೀಸರು ಓಡಿಸಿದ್ದಾರೆ ಎಂದು ಕ್ಯಾಪ್ಷನ್ ನೀಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗುತ್ತಿದ್ದಂತೆ ಸಾಕಷ್ಟು ವೈರಲ್ ಆಗಿದ್ದು, 4.94 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಟ್ವಿಟರ್‌ನಲ್ಲಿ 9,500 ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದು ಕಾಮೆಂಟ್‌ಗಳ ಸುರಿಮಳೆ ಬಂದಿದೆ.
ಇತ್ತ ನ್ಯೂಜಿಲೆಂಡ್ ವಿರುದ್ಧದ 3ನೇ ಹಾಗೂ ಕೊನೆ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ 7 ವಿಕೆಟ್ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿಕೊಂಡಿದೆ. ಸರಣಿಯುದ್ದಕ್ಕೂ ಪ್ರವಾಸಿ ನ್ಯೂಜಿಲೆಂಡ್ ಎದುರು ಪ್ರಾಬಲ್ಯ ಮೆರೆದ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿ ಕ್ಲೀನ್‌ಸ್ವೀಪ್ ಮಾಡಿದೆ.
Eng vs NZ ಕಿವೀಸ್ ಎದುರು ಟೆಸ್ಟ್ ಸರಣಿ ಕ್ಲೀನ್‌ಸ್ವೀಪ್ ಮಾಡಿ ಬೀಗಿದ ಬೆನ್ ಸ್ಟೋಕ್ಸ್ ಪಡೆ..!
ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ 296 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ 5ನೇ ದಿನದ ಮೊದಲ ಸೆಷನ್ ಮಳೆಯಿಂದಾಗಿ ಸ್ಥಗಿತಗೊಂಡಿತ್ತು. ನಾಲ್ಕನೇ ದಿನದಾಟದಂತ್ಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿದ್ದ ಇಂಗ್ಲೆಂಡ್ ತಂಡವು ಕೊನೆಯ ದಿನದಾಟದಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಸುಲಭ ಜಯ ಸಾಧಿಸಿತು. ಓಲಿ ಪೋಪ್ 82, ಜೋ ರೂಟ್ 86, ಜಾನಿ ಬೇರ್‌ಸ್ಟೋವ್ 71(44 ಎಸೆತ) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.