* ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ* ಜುಲೈ 01ರಿಂದ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯ* ಟೆಸ್ಟ್‌ ಪಂದ್ಯಕ್ಕೂ ಮುನ್ನ ಕೋವಿಡ್‌ಗೆ ಒಳಗಾಗಿರುವ ರೋಹಿತ್ ಬಗ್ಗೆ ಮಾಹಿತಿ ನೀಡಿದ ಮಗಳು ಸಮೈರಾ

ಲೀಸೆಸ್ಟರ್‌(ಜೂ.28): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪುನರ್‌ನಿಗದಿಯಾಗಿರುವ 5ನೇ ಟೆಸ್ಟ್‌ ಪಂದ್ಯಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕೋವಿಡ್ 19 ಸೋಂಕು ತಗುಲಿದೆ. ಜುಲೈ 01ರಿಂದ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಬಹುನಿರೀಕ್ಷಿತ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮಹತ್ವದ ಟೆಸ್ಟ್‌ ಪಂದ್ಯ ಜರುಗಲಿದೆ. ಇದೆಲ್ಲದರ ನಡುವೆ ಸದ್ಯ ರೋಹಿತ್ ಶರ್ಮಾ ಆರೋಗ್ಯ ಪರಿಸ್ಥಿತಿ ಹೇಗಿದೆ ಎನ್ನುವುದರ ಅಪ್ಡೇಟ್‌ ನೀಡಿದ್ದಾರೆ ಮಗಳು ಸಮೈರಾ..!

ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಂ ಇಂಡಿಯಾ (Team India), ಲೀಸೆಸ್ಟರ್‌ಶೈರ್ ಎದುರು 4 ದಿನಗಳ ಅಭ್ಯಾಸ ಪಂದ್ಯವನ್ನಾಡಿತ್ತು. ಈ ವೇಳೆ ಕಳೆದ ಶನಿವಾರ ನಡೆದ ಕೋವಿಡ್ ಟೆಸ್ಟ್‌ನಲ್ಲಿ ರೋಹಿತ್‌ ಶರ್ಮಾಗೆ ಕೊರೋನಾ ವೈರಸ್ (Coronavirus) ತಗುಲಿರುವುದು ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಹಿಟ್‌ಮ್ಯಾನ್ ಲೀಸೆಸ್ಟರ್‌ನ ಹೋಟೆಲ್‌ವೊಂದರಲ್ಲಿ ಐಸೋಲೇಷನ್‌ಗೆ ಒಳಗಾಗಿದ್ದಾರೆ. ಇದೀಗ ಎಲ್ಲರ ಚಿತ್ತ ರೋಹಿತ್ ಶರ್ಮಾ ಅವರ ಆರೋಗ್ಯದ ಮೇಲಿದೆ. ಇದೀಗ ರೋಹಿತ್ ಶರ್ಮಾ ಆರೋಗ್ಯ ಹೇಗಿದೆ ಎನ್ನುವುದನ್ನು ಅವರ ಮಗಳು ಸಮೈರಾ ಮುದ್ದಾಗಿ ಅಪ್‌ಡೇಟ್ ನೀಡಿದ್ದಾಳೆ. ಇಂಗ್ಲೆಂಡ್‌ನಲ್ಲಿರುವ ಪತ್ರಕರ್ತರು, ಹೋಟೆಲ್‌ನಿಂದ ಹೊರಬರುತ್ತಿದ್ದ ಸಮೈರಾ (Samaira) ಅವರನ್ನು ರೋಹಿತ್ ಶರ್ಮಾ ಈಗ ಹೇಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಪತ್ರಕರ್ತರ ಪ್ರಶ್ನೆಗ ಮುಗ್ದತೆಯಲ್ಲಿ ಉತ್ತರ ನೀಡಿರುವ ಸಮೈರಾ, ತಮ್ಮ ತಂದೆ ಹೋಟೆಲ್‌ನಲ್ಲಿ ನಿದ್ರೆ ಮಾಡುತ್ತಿದ್ದಾರೆ ಎಂದು ಉತ್ತರ ನೀಡಿದ್ದಾಳೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ರೋಹಿತ್ ಶರ್ಮಾ ಅಭಿಮಾನಿಗಳು ಈ ವಿಡಿಯೋವನ್ನು ಟ್ರೆಂಡ್ ಮಾಡಿದ್ದಾರೆ.

Scroll to load tweet…

ಜುಲೈ ಒಂದರೊಳಗೆ ಒಂದು ವೇಳೆ ರೋಹಿತ್ ಶರ್ಮಾ ಅವರ ಕೋವಿಡ್ ಟೆಸ್ಟ್ (COVID Test) ನೆಗೆಟಿವ್ ಬಂದರೆ ಸಹಜವಾಗಿಯೇ ಅವರು ಭಾರತ ಕ್ರಿಕೆಟ್ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಯಾಕೆಂದರೆ ಇಂಗ್ಲೆಂಡ್‌ನಲ್ಲಿ ಕೋವಿಡ್ ದೃಢಪಟ್ಟರೇ ಕ್ವಾರಂಟೈನ್ ಕಡ್ಡಾಯವಲ್ಲ ಎನ್ನುವ ನಿಯಮವಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಈಗಾಗಲೇ ಬಿಸಿಸಿಐ ತನ್ನ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ವೈದ್ಯರು ರೋಹಿತ್ ಶರ್ಮಾ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ ಎಂದು ತಿಳಿಸಿದೆ.

ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ವಿರೇಂದ್ರ ಸೆಹ್ವಾಗ್..!

ಕ್ರಿಕ್‌ಬಜ್ ವರದಿಯ ಪ್ರಕಾರ, ಒಂದು ವೇಳೆ ರೋಹಿತ್ ಶರ್ಮಾ, ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯದಿಂದ ಹೊರಬಿದ್ದರೇ ಯಾರನ್ನು ನಾಯಕನನ್ನಾಗಿ ನೇಮಕ ಮಾಡಬೇಕು ಎನ್ನುವುದನ್ನು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಇಂಗ್ಲೆಂಡ್ ತಲುಪಿದ ಬಳಿಕ ತೀರ್ಮಾನಿಸಲಿದ್ದಾರೆ ಎನ್ನಲಾಗಿದೆ. ಸದ್ಯ ಚೇತನ್ ಶರ್ಮಾ, ಐರ್ಲೆಂಡ್‌ನಲ್ಲಿದ್ದು, ಜೂನ್ 28ರಂದು ಐರ್ಲೆಂಡ್ ವಿರುದ್ದ ನಡೆಯಲಿರುವ ಎರಡನೇ ಟಿ20 ಪಂದ್ಯವನ್ನು ಮುಗಿಸಿ ಇಂಗ್ಲೆಂಡ್‌ನತ್ತ ಮುಖ ಮಾಡಲಿದ್ದಾರೆ. ಆ ವೇಳೆಗೆ ರೋಹಿತ್ ಶರ್ಮಾ ಫಿಟ್ನೆಸ್‌ ಪರಿಸ್ಥಿತಿಯನ್ನು ಅವಲೋಕಿಸಿ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ.

ಇಂಗ್ಲೆಂಡ್ ಎದುರಿನ ಬರ್ಮಿಂಗ್‌ಹ್ಯಾಮ್ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡ ಹೀಗಿದೆ:

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಮಯಾಂಕ್‌ ಅಗರ್‌ವಾಲ್ ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮಾ ವಿಹಾರಿ, ರಿಷಭ್ ಪಂತ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ , ಶ್ರೀಕರ್ ಭರತ್.