* ಪಾಕಿಸ್ತಾನ ವಿರುದ್ದದ ಏಕದಿನ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ* ಲಂಕಾ ವಿರುದ್ದ ಕಣಕ್ಕಿಳಿದ ತಂಡವೇ ಪಾಕ್‌ ವಿರುದ್ದ ಕಣಕ್ಕಿಳಿಯಲಿದೆ.* ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಜುಲೈ 08ರಿಂದ ಆರಂಭ

ಲಂಡನ್‌(ಜು.05): ಪಾಕಿಸ್ತಾನ ವಿರುದ್ದ ಜುಲೈ 08ರಿಂದ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಗೆ 16 ಆಟಗಾರರನ್ನೊಳಗೊಂಡ ಬಲಿಷ್ಠ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ಲಂಕಾ ವಿರುದ್ದದ ಸರಣಿಯಲ್ಲಿ ಪಾಲ್ಗೊಂಡಿದ್ದ ತಂಡವೇ ಪಾಕ್ ವಿರುದ್ದವೂ ಕಣಕ್ಕಿಳಿಯಲಿದ್ದಾರೆ.

ಗಾಯದ ಸಮಸ್ಯೆಯಿಂದ ಜೋಸ್‌ ಬಟ್ಲರ್ ಹೊರಬಿದ್ದಿದ್ದರೆ, ಫಿಟ್ನೆಸ್‌ ಗಳಿಸದ ಹಿನ್ನೆಲೆಯಲ್ಲಿ ಬೆನ್ ಸ್ಟೋಕ್ಸ್‌ಗೆ ಮತ್ತೊಮ್ಮೆ ವಿಶ್ರಾಂತಿ ನೀಡಲಾಗಿದೆ. ಡೇವಿಡ್ ಮಲಾನ್‌ ಬದಲಿಗೆ ಟಾಮ್ ಕರ್ರನ್‌ ಇಂಗ್ಲೆಂಡ್ ತಂಡ ಕೂಡಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ದದ ಮೂರು ಪಂದ್ಯಗಳ ಸರಣಿಯನ್ನು ಇಯಾನ್‌ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ತಂಡವು 2-0 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಮೂರನೇ ಏಕದಿನ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು.

Scroll to load tweet…

ಸ್ಯಾಮ್ ಕರ್ರನ್‌ಗೆ 5 ವಿಕೆಟ್; ಲಂಕಾ ಎದುರಿನ ಏಕದಿನ ಸರಣಿ ಇಂಗ್ಲೆಂಡ್ ಪಾಲು

ಐಸಿಸಿ ಕ್ರಿಕೆಟ್‌ ವಿಶ್ವಕಪ್ ಸೂಪರ್ ಲೀಗ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ಹಾಗೂ ಪಾಕಿಸ್ತಾನ ಕ್ರಮವಾಗಿ ಮೊದಲ ಹಾಗೂ 3ನೇ ಸ್ಥಾನದಲ್ಲಿದ್ದು, ಈ ಏಕದಿನ ಸರಣಿ ಸಾಕಷ್ಟು ಪೈಪೋಟಿಯಿಂದ ಕೂಡಿರುವ ನಿರೀಕ್ಷೆಯಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಜುಲೈ 08ರಂದು ಕಾರ್ಡಿಫ್‌ನಲ್ಲಿ ನಡೆದರೆ, ಜುಲೈ 10ರಂದು ಲಾರ್ಡ್ಸ್‌ ಹಾಗೂ ಜುಲೈ 13ರಂದು ಎಡ್ಜ್‌ಬಾಸ್ಟನ್‌ ಮೈದಾನದಲ್ಲಿ ನಡೆಯಲಿದೆ.

ಇಂಗ್ಲೆಂಡ್ ತಂಡ ಹೀಗಿದೆ ನೋಡಿ:
ಇಯಾನ್ ಮಾರ್ಗನ್‌(ನಾಯಕ), ಜಾನಿ ಬೇರ್‌ಸ್ಟೋವ್, ಜೇಸನ್ ರಾಯ್, ಜೋ ರೂಟ್, ಸ್ಯಾಮ್ ಬಿಲ್ಲಿಂಗ್ಸ್, ಮೋಯಿನ್ ಅಲಿ, ಸ್ಯಾಮ್ ಕರ್ರನ್, ಡೇವಿಡ್ ವಿಲ್ಲೇ, ಟಾಮ್ ಕರ್ರನ್, ಆದಿಲ್ ರಶೀದ್, ಮಾರ್ಕ್‌ ವುಡ್, ಲಿಯಾಮ್ ಲಿವಿಂಗ್‌ಸ್ಟೋನ್, ಕ್ರಿಸ್ ವೋಕ್ಸ್, ಲಿಯಾಮ್ ಡಾಸನ್, ಜಾರ್ಜ್ ಗಾರ್ಟನ್‌ ಮತ್ತು ಟಾಮ್ ಬಾಂಟನ್.