Emerging Asia Cup 2023: ಭಾರತ- ಪಾಕಿಸ್ತಾನ ಫೈನಲ್ ಕದನ ಇಂದು

ಉದಯೋನ್ಮುಖ ಆಟಗಾರರ ನಡುವಿನ ರೋಚಕ ಹಣಾಹಣಿಗೆ ವೇದಿಕೆ ಸಜ್ಜು
ಅಂಡರ್‌-23 ಏಷ್ಯಾಕಪ್‌ ಫೈನಲ್‌ನಲ್ಲಿ ಭಾರತ -ಪಾಕಿಸ್ತಾನ ಮುಖಾಮುಖಿ
ಪ್ರಶಸ್ತಿಗಾಗಿ ಭಾರತ ‘ಎ’ ಹಾಗೂ ಪಾಕಿಸ್ತಾನ ‘ಎ’ ತಂಡಗಳು ಸೆಣಸಾಟ

Emerging Asia Cup 2023 Final India A vs Pakistan A Another Thriller On Cards kvn

ಕೊಲಂಬೊ(ಜು.23): ಐಸಿಸಿ ಏಕದಿನ ವಿಶ್ವಕಪ್‌ ಮತ್ತು ಏಷ್ಯಾಕಪ್‌ನ ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ದಿನಗಣನೆ ಆರಂಭವಾಗಿರುವಾಗಲೇ ಉಭಯ ದೇಶಗಳ ಉದಯೋನ್ಮುಖ ಆಟಗಾರರ ನಡುವಿನ ರೋಚಕ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಭಾನುವಾರ 5ನೇ ಆವೃತ್ತಿಯ ಅಂಡರ್‌-23 ಏಷ್ಯಾಕಪ್‌ ಟೂರ್ನಿಯ ಫೈನಲ್‌ ಪಂದ್ಯ ನಡೆಯಲಿದ್ದು, ಪ್ರಶಸ್ತಿಗಾಗಿ ಭಾರತ ‘ಎ’ ಹಾಗೂ ಪಾಕಿಸ್ತಾನ ‘ಎ’ ತಂಡಗಳು ಸೆಣಸಾಡಲಿವೆ.

ಉಭಯ ತಂಡಗಳು ಈಗಾಗಲೇ ಗುಂಪು ಹಂತದಲ್ಲಿ ಮುಖಾಮುಖಿಯಾಗಿದ್ದು, ಭಾರತ 8 ವಿಕೆಟ್‌ಗಳಿಂದ ಗೆದ್ದಿತ್ತು. ಟೂರ್ನಿಯಲ್ಲಿ ಅಜೇಯವಾಗಿರುವ ಭಾರತ ಫೈನಲ್‌ನಲ್ಲೂ ಗೆಲ್ಲುವ ಫೇವರಿಟ್‌ ಎನಿಸಿದೆ. 2013ರ ಚೊಚ್ಚಲ ಆವೃತ್ತಿಯಲ್ಲಿ ಪಾಕಿಸ್ತಾನವನ್ನೇ ಮಣಿಸಿ ಚಾಂಪಿಯನ್‌ ಆಗಿದ್ದ ಭಾರತ, 2018ರಲ್ಲಿ ರನ್ನರ್‌-ಅಪ್‌ ಆಗಿತ್ತು. ಅತ್ತ ಪಾಕ್‌ 2019ರಲ್ಲಿ ಚಾಂಪಿಯನ್‌ ಆಗಿದ್ದು, ಪ್ರಶಸ್ತಿ ತನ್ನಲ್ಲೇ ಉಳಿಸಿಕೊಳ್ಳಲು ಹೋರಾಡಲಿದೆ.

ಪಂದ್ಯ: ಮಧ್ಯಾಹ್ನ 2ಕ್ಕೆ
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಫ್ಯಾನ್‌ಕೋಡ್‌ ಆ್ಯಪ್‌

ಭಾರತ ಎಡವಟ್ಟು: ಟೈ ಆದ ಪಂದ್ಯ!

ಮೀರ್‌ಪುರ: 6 ವಿಕೆಟ್‌ ಇದ್ದು ಕೊನೆ 9 ಓವರ್‌ಗಳಲ್ಲಿ 35 ರನ್‌ ಗಳಿಸಬೇಕಿದ್ದಾಗ ನಾಟಕೀಯ ಕುಸಿತಕ್ಕೊಳಗಾದ ಭಾರತ ಮಹಿಳಾ ತಂಡ, ಬಾಂಗ್ಲಾದೇಶ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೈಗೆ ತೃಪ್ತಿಪಟ್ಟಿದೆ. ಸಮಯಾವಕಾಶದ ಕೊರತೆಯಿಂದ ಸೂಪರ್‌ ಓವರ್‌ ಕೂಡಾ ನಡೆಯಲಿಲ್ಲ. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು ಇತ್ತಂಡಗಳು 1-1ರಿಂದ ಹಂಚಿಕೊಂಡವು.

ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿ: ಅಭಿನವ್‌, ಮಯಾಂಕ್‌ಗೆ ಬಂಪರ್‌! ಯಾವ ಆಟಗಾರರು ಯಾವ ತಂಡಕ್ಕೆ?

ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ 4 ವಿಕೆಟ್‌ಗೆ 225 ರನ್‌ ಕಲೆಹಾಕಿತು. ಫರ್ಜಾನ ಹಕ್‌(107) ಹಾಗೂ ಶಮೀಮಾ ಸುಲ್ತಾನ(52)ರ ಆಕರ್ಷಕ ಆಟ ತಂಡಕ್ಕೆ ಆಸರೆಯಾಯಿತು. ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಭಾರತ, ಸ್ಮೃತಿ ಮಂಧನಾ(59), ಹರ್ಲೀನ್‌ ದೇವಲ್(77) ನೆರವಿನಿಂದ ಇನ್ನಿಂಗ್ಸ್‌ನ ಬಹುತೇಕ ಭಾಗ ಗೆಲ್ಲುವ ಫೇವರಿಟ್‌ ಎನಿಸಿತ್ತು. ಆದರೆ 41.1 ಓವರ್‌ಗಳಲ್ಲಿ 4 ವಿಕೆಟ್‌ಗೆ 191 ರನ್‌ ಗಳಿಸಿದ್ದ ಹರ್ಮನ್‌ ಪಡೆ ಬಳಿಕ ದಿಢೀರ್‌ ಕುಸಿತಕ್ಕೊಳಗಾಗಿ 49.3 ಓವರ್‌ಗಳಲ್ಲಿ ಆಲೌಟಾಯಿತು. ಜೆಮಿಮಾ ರೋಡ್ರಿಗಸ್‌ 33 ರನ್‌ ಗಳಿಸಿ ಔಟಾಗದೆ ಉಳಿದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ.

ಅಂಪೈರಿಂಗ್‌ ಬಗ್ಗೆ ಹರ್ಮನ್‌ಪ್ರೀತ್‌ ಕೌರ್ ಕೆಂಡ!

ಹಲವು ವಿವಾದಾತ್ಮಕ ತೀರ್ಪುಗಳಿಗೆ ಸರಣಿ ಸಾಕ್ಷಿಯಾಯಿತು. ಫೈನಲ್‌ನಲ್ಲೂ ಅಂಪೈರ್‌ ತಮ್ಮ ವಿರುದ್ಧ ನೀಡಿದ ಎಲ್‌ಬಿಡಬ್ಲ್ಯು ತೀರ್ಪಿಗೆ ಸಿಟ್ಟಾಗಿ ಬ್ಯಾಟ್‌ನಿಂದ ಸ್ಟಂಪ್ಸ್‌ಗೆ ಹೊಡೆದ ಭಾರತದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ಪಂದ್ಯದ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭದ ವೇಳೆ ಬಹಿರಂಗವಾಗಿಯೇ ಅಂಪೈರ್‌ಗಳನ್ನು ಟೀಕಿಸಿದರು. ‘ಮುಂದಿನ ಸರಿ ಬಾಂಗ್ಲಾದೇಶಕ್ಕೆ ಬರುವಾಗ ಕೆಟ್ಟ ಅಂಪೈರಿಂಗ್‌ಗೆ ಸಿದ್ಧರಾಗೇ ಬರಬೇಕು’ ಎಂದು ಹರ್ಮನ್‌ ಹೇಳಿದರು.

ವಿರಾಟ್ ಕೊಹ್ಲಿಗೆ ಮುತ್ತಿಕ್ಕಿ ಆನಂದ ಭಾಷ್ಪ ಸುರಿಸಿದ ವಿಂಡೀಸ್‌ ಕ್ರಿಕೆಟಿಗನ ತಾಯಿ...! ವಿಡಿಯೋ ವೈರಲ್

ತಟಸ್ಥ ಅಂಪೈರ್‌ಗಳ ನೇಮಕ ಅಗತ್ಯ: ಸ್ಮೃತಿ!

ಮೀರ್‌ಪುರ: ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಅಂಪೈರಿಂಗ್‌ ಗುಣಮಟ್ಟ ಕಳಪೆಯಾಗಿತ್ತು ಎಂದು ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಉಪನಾಯಕಿ ಸ್ಮೃತಿ ಮಂಧನಾ ಸಹ ನಾಯಕಿಯ ಹೇಳಿಕೆಗೆ ಧ್ವನಿಗೂಡಿಸಿದ್ದಾರೆ. 3ನೇ ಏಕದಿನ ಮುಕ್ತಾಯಗೊಂಡ ಬಳಿಕ ಮಾತನಾಡಿದ ಸ್ಮೃತಿ, ‘ಐಸಿಸಿ, ಬಿಸಿಸಿಐ ಹಾಗೂ ಬಾಂಗ್ಲಾ ಕ್ರಿಕೆಟ್‌ ಮಂಡಳಿ ಅಂಪೈರಿಂಗ್‌ ವಿವಾದದ ಬಗ್ಗೆ ಚರ್ಚಿಸಲಿವೆ ಎನ್ನುವ ವಿಶ್ವಾಸವಿದೆ. ಪಂದ್ಯಗಳಿಗೆ ಸ್ಥಳೀಯ ಅಂಪೈರ್‌ಗಳ ಬದಲು ತಟಸ್ಥ ಅಂಪೈರ್‌ಗಳನ್ನು ನೇಮಿಸುವ ಅಗತ್ಯವಿದೆ’ ಎಂದಿದ್ದಾರೆ.

Latest Videos
Follow Us:
Download App:
  • android
  • ios