ದುಲೀಪ್ ಟ್ರೋಫಿಯಲ್ಲಿ ಸ್ಟಾರ್ ಆಟಗಾರರ ಫ್ಲಾಪ್ ಶೋ..! ಗಂಭೀರ್‌ಗೆ ಹೆಚ್ಚಾಯ್ತು ತಲೆನೋವು
ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಕೆಲ ಬ್ಯಾಟರ್‌ಗಳ ನೀರಸ ಪ್ರದರ್ಶನ, ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ತಲೆನೋವು ಹೆಚ್ಚುವಂತೆ ಮಾಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು: ಈ ಆಟಗಾರರೆಲ್ಲಾ ಟೀಂ ಇಂಡಿಯಾ ಪರ ಆಡಿದ್ದಾರೆ. ವಿದೇಶಿ ಬೌಲರ್‌ಗಳ ವಿರುದ್ಧ ಅಬ್ಬರಿಸಿದ್ದಾರೆ. ಆದ್ರೆ, ದೇಶಿಯ ಕ್ರಿಕೆಟ್‌ನಲ್ಲಿ ರನ್‌ಗಳಿಸಲು ಪರದಾಡ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ ದುಲೀಪ್ ಟ್ರೋಫಿಯಲ್ಲಿ ಮಕಾಡೆ ಮಲಗಿದ್ದಾರೆ. ಯಾರು ಆ ಆಟಗಾರರು ಅಂತೀರಾ? ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.
ಬಾಂಗ್ಲಾ ಟೆಸ್ಟ್ ಸರಣಿಗು ಮುನ್ನ ರೋಹಿತ್- ಗಂಭೀರ್‌ಗೆ ಟೆನ್ಷನ್..!
ಸದ್ಯ ಟೀಂ ಇಂಡಿಯಾ ಆಟಗಾರರು ದುಲೀಪ್ ಟ್ರೋಫಿ ಆಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಕೆಲ ಆಟಗಾರರಿಗೆ ಈ ಟೂರ್ನಿ ಮಹತ್ವದ್ದಾಗಿದೆ. ಆದ್ರೆ, ಈ ಸರಣಿಯಲ್ಲಿ ಸ್ಟಾರ್ ಆಟಗಾರರು ಫ್ಲಾಪ್ ಶೋ ನೀಡಿದ್ದಾರೆ. ಇದು ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ಚಿಂತೆ ಹೆಚ್ಚಿಸಿದೆ.
2024ರ ಟಿ20 ವಿಶ್ವಕಪ್ ಆಡಿದ್ದ ಇಂಗ್ಲೆಂಡ್ ಸ್ಟಾರ್ ಕ್ರಿಕೆಟಿಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ..!
ತವರಿನ ಅಂಗಳದಲ್ಲಿ ರನ್ಗಳಿಸಲು ರಾಹುಲ್ ಪರದಾಟ..!
ಬೆಂಗಳೂರಿನಲ್ಲಿ ಇಂಡಿಯಾ A ಮತ್ತು ಇಂಡಿಯಾ B ತಂಡಗಳ ನಡುವೆ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ KL ರಾಹುಲ್ ತಮ್ಮ ಖ್ಯಾತಿಗೆ ತಕ್ಕಂತೆ ಆಡುವಲ್ಲಿ ಫೇಲ್ ಆಗಿದ್ದಾರೆ. ಇಂಡಿಯಾ A ಪರ ಆಡ್ತಿರೋ ರಾಹುಲ್ ಮೊದಲ ಇನ್ನಿಂಗ್ಸ್ನಲ್ಲಿ 111 ಎಸೆತಗಳಲ್ಲಿ ಕೇವಲ 33 ರನ್ ಬಾರಿಸಿ ಔಟಾದ್ರು. ಆಡಿ ಬೆಳೆದ ಅಂಗಳದಲ್ಲೂ ರಾಹುಲ್ ಫಿಯರ್ಲೆಸ್ ಆಗಿ ಆಡಲು ಒದ್ದಾಡ್ತಿದ್ದಾರೆ. ಇದ್ರಿಂದ ರಾಹುಲ್ಗೆ ಏನಾಗಿದೆ...? ರನ್ಗಳಿಸಲು ಯಾಕಿಷ್ಟು ಪರದಾಡ್ತಿದ್ದಾರೆ ಅನ್ನೋ ಪ್ರಶ್ನೆ ಮೂಡಿದೆ.
ನಾಯಕನ ಆಟ ಆಡುವಲ್ಲಿ ಪಂಜಾಬ್ ಪುತ್ತರ್ ಗಿಲ್ ಫೇಲ್..!
ಪಂಜಾಬ್ ಪುತ್ತರ್ ಶುಭ್ಮನ್ ಗಿಲ್ ಕೂಡ ಕಳಪೆ ಪ್ರದರ್ಶನ ನೀಡಿದ್ದಾರೆ. ಇಂಡಿಯಾ A ತಂಡದ ನಾಯಕರಾಗಿರೋ ಗಿಲ್, ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 25 ರನ್ಗಳಿಸಿ ಔಟಾದ್ರು. ಇನ್ನು ಯಶಸ್ವಿ ಜೈಸ್ವಾಲ್ ಕಥೆಯು ಸೇಮ್. ಇಂಡಿಯಾ ಬಿ ಪರ ಆಡ್ತಿರೋ ಯಂಗ್ಸ್ಟರ್ , ಎರಡು ಇನ್ನಿಂಗ್ಸ್ಗಳಿಂದ ಗಳಿಸಿದ್ದು ಜಸ್ಟ್ 39ರನ್. ಮೊದಲ ಇನ್ನಿಂಗ್ಸ್ನಲ್ಲಿ 30 ರನ್ಗಳಿಸಿದ್ದ ಯಶಸ್ವಿ, 2ನೇ ಇನ್ನಿಂಗ್ಸ್ನಲ್ಲಿ 9 ರನ್ಗಳಿಸಿ ಔಟಾದ್ರು.
ಟೀಕಾಕಾರರಿಗೆ ತಿರುಗೇಟು ನೀಡಲು ರೋಹಿತ್ ಶರ್ಮಾ ಮಾಸ್ಟರ್ ಪ್ಲ್ಯಾನ್..!
ಹಳೆಯ ಖದರ್‌ಗೆ ಮರಳಿದ ಡೆಲ್ಲಿ ಡ್ಯಾಷರ್ ರಿಷಭ್ ಪಂತ್..!
ಇಂಡಿಯಾ ಬಿ ಪರ ಆಡ್ತಿರೋ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್, ಮೊದಲ ಇನ್ನಿಂಗ್ಸ್ನಲ್ಲಿ ಫೇಲ್ ಆಗಿದ್ರು. ಆದ್ರೆ, ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 47 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 61 ರನ್ ಸಿಡಿಸಿದ್ರು. ಆ ಮೂಲಕ ತಮ್ಮ ಹಳೆಯ ಖದರ್ಗೆ ಮರಳಿದ್ರು.
ಇಂಡಿಯಾ B ಪರ ಆಡ್ತಿರೋ ಮತ್ತೊಬ್ಬ ಆಟಗಾರ ಸರ್ಫರಾಜ್ ಖಾನ್, ಮೊದಲ ಇನ್ನಿಂಗ್ಸ್ನಲ್ಲಿ ನಿರಾಸೆ ಮೂಡಿಸಿದ್ರು. ಆದ್ರೆ, 2ನೇ ಇನ್ನಿಂಗ್ಸ್ನಲ್ಲಿ ಟಿ20 ರೀತಿಯಲ್ಲಿ ಜಸ್ಟ್ 36 ಎಸೆತಗಳಲ್ಲಿ 46 ರನ್ ಚಚ್ಚಿದ್ರು. ಆಕಾಶ್ದೀಪ್ ಎಸೆದ ಒಂದೇ ಓವರ್ನಲ್ಲಿ ಸತತ 5 ಬೌಂಡರಿ ಬಾರಿಸಿ ಅಬ್ಬರಿಸಿದ್ರು. ಆ ಮೂಲಕ ಫಾರ್ಮ್ ಕಂಡುಕೊಂಡ್ರು. ಇವರಂತೆ ರಾಹುಲ್, ಗಿಲ್, ಎರಡನೇ ಇನ್ನಿಂಗ್ಸ್ನಲ್ಲಿ ಅಬ್ಬರಿಸ್ತಾರಾ..? ಅನ್ನೋದನ್ನ ಕಾದು ನೋಡಬೇಕಿದೆ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್