Asianet Suvarna News Asianet Suvarna News

ಟೀಕಾಕಾರರಿಗೆ ತಿರುಗೇಟು ನೀಡಲು ರೋಹಿತ್ ಶರ್ಮಾ ಮಾಸ್ಟರ್ ಪ್ಲ್ಯಾನ್..!

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಬಾಂಗ್ಲಾದೇಶ ಎದುರಿನ ಟೆಸ್ಟ್ ಸರಣಿಯಲ್ಲಿ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ

Team India Captain Rohit Sharma eyes on Bangladesh Test Series kvn
Author
First Published Sep 7, 2024, 5:32 PM IST | Last Updated Sep 7, 2024, 5:32 PM IST

ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅಬ್ಬರಿಸಲು ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ರೆಡಿಯಾಗ್ತಿದ್ದಾರೆ. ಇದಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದಾರೆ. ಟೀಕಾಕಾರರ ತಿರುಗೇಟು ನೀಡಲು ಭರ್ಜರಿ ಪ್ಲ್ಯಾನ್ ಮಾಡಿದ್ದಾರೆ. ಅದ್ಹೇಗೆ ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ..

ಇಷ್ಟು ದಿನ ಒಂದು ಲೆಕ್ಕ..ಇನ್ಮೇಲೆ ಮತ್ತೊಂದು ಲೆಕ್ಕ..!

ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ನಂತರ, ಟೀಂ ಇಂಡಿಯಾ ಯಾವುದೇ ಸರಣಿ ಆಡಿಲ್ಲ. ಆದ್ರೆ, ಸೆಪ್ಟೆಂಬರ್ 19ರಿಂದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿಗಾಗಿ ರೋಹಿತ್ ಶರ್ಮಾ  ಪಡೆಯ ಆಟಗಾರರರು ಒಬ್ಬೊಬ್ಬರಾಗಿಯೇ ಸಿದ್ಧತೆ ಆರಂಭಿಸಿದ್ದಾರೆ. ಈಗಾಗ್ಲೇ ವೇಗಿ ಜಸ್ಪ್ರೀತ್ ಬುಮ್ರಾ ಅಭ್ಯಾಸ ಶುರು ಆರಂಭಿಸಿದ್ದಾರೆ. ಈಗ ನಾಯಕ ರೋಹಿತ್ ಕೂಡ ಪ್ರಿಪರೇಷನ್ ಶುರು ಮಾಡಿದ್ದಾರೆ. 

ಯೆಸ್, ಬಾಂಗ್ಲಾ ಟೆಸ್ಟ್ ಸರಣಿಯಲ್ಲಿ ಅಬ್ಬರಿಸಲು ರೋಹಿತ್, ರೆಡಿ ಯಾಗ್ತಿದ್ದಾರೆ. ಮುಂಬೈನಲ್ಲಿ ಕ್ರಿಕೆಟ್ ಅಸೋಸಿಯೇಷನ್‌ನ ನೂತನ ಜಿಮ್ನಲ್ಲಿ ಕಸರತ್ತು ನಡೆಸಿದ್ದಾರೆ. ಟೀಂ ಇಂಡಿಯಾ ಮುಂದಿನ 4 ತಿಂಗಳಲ್ಲಿ ಸತತ 3 ಟೆಸ್ಟ್ ಸರಣಿಗಳನ್ನಾಡಲಿದೆ. ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ 2 ಮತ್ತು ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಸರಣಿ ಆಡಲಿದೆ. ಇದರ ನಂತರ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಕಾಂಗರೂ ನಾಡಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಾದಾಟ ನಡೆಸಲಿದೆ.

ಗಣೇಶೋತ್ಸವದಲ್ಲಿ ವಿಶ್ವಕಪ್ ಗೆಲುವಿನ ಸಂಭ್ರಮ ರಿಪೀಟ್; ಸ್ಪೆಷಲ್ ಗೆಸ್ಟ್ ಆಗಿ ರೋಹಿತ್ ಭಾಗಿ

ಮುಂದಿನ ವರ್ಷ ನಡೆಯೋ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ದೃಷ್ಟಿಯಿಂದ ಈ 3 ಸರಣಿಗಳು ಭಾರತಕ್ಕೆ ಮಹತ್ವದ್ದಾಗಿವೆ. ಈ ಸಾಲು, ಸಾಲು ಸರಣಿಗಳಲ್ಲಿ ಆಡೋಕೆ ಫಿಟ್ನೆಸ್ ತುಂಬಾನೇ ಮುಖ್ಯ. ಹೀಗಾಗಿ ರೋಹಿತ್ ಫಿಟ್ನೆಸ್ ಕಡೆ ಗಮನಹರಿಸಿದ್ದಾರೆ. ಕಳೆದ ಟಿ20 ವಿಶ್ವಕಪ್ನಲ್ಲಿ ರೋಹಿತ್ ಫಿಟ್ನೆಸ್ ಸಾಕಷ್ಟು ಟ್ರೋಲ್ ಆಗಿತ್ತು. ಆದ್ರೆ, ರೋಹಿತ್ ಮಾತ್ರ ಟ್ರೋಲ್ ಬಗ್ಗೆ ತಲೆಕೆಡಿಸಿಕೊಳ್ಳದೇ, ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ರು. ಆದ್ರೀಗ, ಫಿಟ್ನೆಸ್ ಮೂಲಕವೂ ಟೀಕಾಕಾರರ ಬಾಯಿ ಮುಚ್ಚಿಸಲು ಮುಂಬೈಕರ್ ಪ್ಲ್ಯಾನ್ ಮಾಡಿದ್ದಾರೆ. 

ಕಳೆದೊಂದು ವರ್ಷದಿಂದ ಅದ್ಭುತ ಫಾರ್ಮ್ನಲ್ಲಿ ರೋಹಿತ್ ಶರ್ಮಾ..! 

ಯೆಸ್, ಕಳೆದೊಂದು ವರ್ಷದಿಂದ ರೋಹಿತ್ ಜಬರ್ದಸ್ತ್ ಫಾರ್ಮ್ನಲ್ಲಿದ್ದಾರೆ. ಏಕದಿನ ವಿಶ್ವಕಪ್ನಲ್ಲಿ ರೋಹಿತ್, ಫಿಯರ್ಲೆಸ್ ಬ್ಯಾಟಿಂಗ್ನಿಂದ ಧೂಳೆಬ್ಬಿಸಿದ್ರು. 11 ಪಂದ್ಯಳಲ್ಲಿ ಬ್ಯಾಟ್ ಬೀಸಿ,  125.94ರ ಸರಾಸರಿಯಲ್ಲಿ 597 ರನ್ ಕಲೆಹಾಕಿದ್ರು. ಆ ಮೂಲಕ ಟೂರ್ನಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದವ್ರ ಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿದ್ರು. 

ದುಲೀಪ್ ಟ್ರೋಫಿ: ಭಾರತ 'ಎ'ವಿರುದ್ದ ಅಬ್ಬರಿಸಿದ ಸರ್ಫರಾಜ್ ಖಾನ್ ಸಹೋದರ ಮುಶೀರ್ ಖಾನ್

ಟಿ20 ವಿಶ್ವಕಪ್ ಸಮರದಲ್ಲೂ ರೋಹಿತ್ ಆರ್ಭಟಿಸಿದ್ರು. 8 ಪಂದ್ಯಗಳಿಂದ 156.70ರ ಸ್ಟ್ರೈಕ್ರೇಟ್ನಲ್ಲಿ 3 ಅರ್ಧಶತಕ ಸಹಿತ 257 ರನ್ ಕಲೆಹಾಕಿದ್ರು. ಆ ಮೂಲಕ ಭಾರತ ವಿಶ್ವಕಪ್ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ್ರು. ಲಿಮಿಟೆಡ್ ಓವರ್ ಫಾರ್ಮೆಟ್ ಮಾತ್ರ ಅಲ್ಲ, ಟೆಸ್ಟ್ ಕ್ರಿಕೆಟ್ನಲ್ಲೂ ರೋಹಿತ್ ಅಬ್ಬರಿಸಿದ್ದಾರೆ. 

ಈ ವರ್ಷ 11 ಇನ್ನಿಂಗ್ಸ್ಗಳಲ್ಲಿ ರೋಹಿತ್ ಕ್ರೀಸ್ಗಿಳಿದಿದ್ದು,  45.50ರ ಸರಾಸರಿಯಲ್ಲಿ 455 ರನ್‌ ಗಳಿಸಿದ್ದಾರೆ. ಇದ್ರಲ್ಲಿ ಎರಡು ಶತಕ ಮತ್ತು 1 ಅರ್ಧಶತಕ ಸೇರಿವೆ. ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಭಾರತದ ಪರ ಅತಿಹೆಚ್ಚು ರನ್ಗಳಿಸಿದ ದಾಖಲೆಯೂ ರೋಹಿತ್ ಹೆಸರಿನಲ್ಲಿದೆ. 54 ಇನ್ನಿಂಗ್ಸ್ಗನ್ನಾಡಿರೋ ರೋಹಿತ್, 50.03ರ ಸರಾಸರಿಯಲ್ಲಿ  2552 ರನ್ ಕಲೆಹಾಕಿದ್ದಾರೆ. ಇದ್ರಲ್ಲಿ 9 ಶತಕ ಮತ್ತು 7 ಅರ್ಧಶತಕ ಸೇರಿವೆ. 

ಬಾಂಗ್ಲಾದೇಶ ವಿರುದ್ಧ ಮುಂಬೈಕರ್ ಕಳಪೆ ದಾಖಲೆ..! 

ಯೆಸ್, ಟೆಸ್ಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ರೋಹಿತ್ ಕಳಪೆ ದಾಖಲೆ ಹೊಂದಿದ್ದಾರೆ. ಈವರೆಗೂ ಆಡಿರೋ 3 ಇನ್ನಿಂಗ್ಸ್‌ಗಳಿಂದ ಜಸ್ಟ್ 33 ರನ್ ಗಳಿಸಿದ್ದಾರೆ. ಇದ್ರಿಂದ ಈ ಬಾರಿ ಬಾಂಗ್ಲಾ ಹುಲಿಗಳ ವಿರುದ್ಧ ಆರ್ಭಟಿಸಲು ವರ್ಲ್ಡ್‌ಕಪ್ ವಿನ್ನಿಂಗ್ ಕ್ಯಾಪ್ಟನ್ ತುದಿಗಾಲಲ್ಲಿ ನಿಂತಿದ್ದಾರೆ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Latest Videos
Follow Us:
Download App:
  • android
  • ios