ಎರಡು ಬಾರಿ ಪೆಟ್ಟು ತಿಂದರೂ ಮತ್ತದೇ ತಪ್ಪು ರಿಪೀಟ್ ಮಾಡಿದ ಯುವ ಕ್ರಿಕೆಟರ್..! ಈತನಿಗೆ ಆಟಕ್ಕಿಂತ ಆ್ಯಟಿಟ್ಯೂಡ್ ಹೆಚ್ಚು
ಟೀಂ ಇಂಡಿಯಾದ ಯುವ ವೇಗಿ ಹರ್ಷಿತ್ ರಾಣಾ, ಮತ್ತೆ ಮತ್ತೆ ಮಾಡಿದ ತಪ್ಪನ್ನೇ ಮಾಡುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.
ಬೆಂಗಳೂರು: ಟೀಂ ಇಂಡಿಯಾದ ಈ ಆಟಗಾರನ ಟ್ಯಾಲೆಂಟ್ ಬಗ್ಗೆ ಎರಡು ಮಾತಿಲ್ಲ. ಆದ್ರೆ, ಈ ಯಂಗ್‌ಸ್ಟರ್ ತನ್ನ ಆಟಕ್ಕಿಂತ ಆ್ಯಟಿಟ್ಯುಡ್ ಮೂಲಕವೇ ಹೆಚ್ಚು ಸುದ್ದಿಯಾಗ್ತಿದ್ದಾನೆ. ಮಾಡಿದ ತಪ್ಪುಗಳನ್ನೇ ಪದೇ-ಪದೇ ಮಾಡುತ್ತಿದ್ದಾನೆ. ಅಷ್ಟಕ್ಕೂ ಯಾರು ಆ ಆಟಗಾರ..? ಏನ್ ಕಥೆ ಅಂತೀರಾ..? ಇಲ್ಲಿದೆ ನೋಡಿ ಡಿಟೇಲ್ಸ್..!!
ಟ್ಯಾಲೆಂಟ್ ಬಗ್ಗೆ ಎರಡು ಮಾತಿಲ್ಲ..ಆದ್ರೆ ಈ ವರ್ತನೆ ಸರಿಯಲ್ಲ..!
ಹರ್ಷಿತ್ ರಾಣಾ.! ಸದ್ಯ ಭಾರತೀಯ ಕ್ರಿಕೆಟ್‌ನ ಒನ್ ಆಫ್ ದಿ ಬೆಸ್ಟ್ ಬೌಲರ್. ಡೊಮೆಸ್ಟಿಕ್ ಮತ್ತು IPLನಲ್ಲಿ ಈ ಯಂಗ್ ಪೇಸರ್, ಈಗಾಗ್ಲೇ ತನ್ನ ಸಾಮರ್ಥ್ಯ ಪ್ರೂವ್ ಮಾಡಿದ್ದಾನೆ. ಅದ್ಭುತ ಬೌಲಿಂಗ್ ಮೂಲಕ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿಗೆ ನೀರು ಕುಡಿಸಿದ್ದಾನೆ. ಅದಕ್ಕೆ ಈ ವರ್ಷದ ಐಪಿಎಲ್ ಬೆಸ್ಟ್ ಎಕ್ಸಾಂಪಲ್. ಟೂರ್ನಿಯಲ್ಲಿ ಈ ಡೆಲ್ಲಿ ಹುಡುಗ, 13 ಪಂದ್ಯಗಳಿಂದ 19 ವಿಕೆಟ್ ಬೇಟೆಯಾಡಿದ್ದ. ಆ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಚಾಂಪಿಯನ್ಸ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ.
ಗಣೇಶೋತ್ಸವದಲ್ಲಿ ವಿಶ್ವಕಪ್ ಗೆಲುವಿನ ಸಂಭ್ರಮ ರಿಪೀಟ್; ಸ್ಪೆಷಲ್ ಗೆಸ್ಟ್ ಆಗಿ ರೋಹಿತ್ ಭಾಗಿ
ರಾಣಾ ಟ್ಯಾಲೆಂಟ್, ಬೌಲಿಂಗ್ ತಾಕತ್ತಿನ ಬಗ್ಗೆ ದೂಸ್ರಾ ಮಾತೇ ಇಲ್ಲ. ಆದ್ರೆ, ಈ ಯಂಗ್‌ಸ್ಟರ್ ತನ್ನ ಆಟಕ್ಕಿಂತ ಆ್ಯಟಿಟ್ಯುಡ್ ಮೂಲಕವೇ ಹೆಚ್ಚು ಸುದ್ದಿಯಾಗ್ತಿದ್ದಾನೆ. ಮಾಡಿದ ತಪ್ಪುಗಳನ್ನೇ ಪದೇ. ಪದೇ ಮಾಡುತ್ತಿದ್ದಾನೆ. ಆ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗ್ತಿದ್ದಾನೆ.
ಟ್ಯಾಲೆಂಟ್ ಬಗ್ಗೆ ಎರಡು ಮಾತಿಲ್ಲ, ಆದ್ರೆ ಈ ವರ್ತನೆ ಸರಿಯಲ್ಲ..!
ಪ್ರಸಕ್ತ ದುಲೀಪ್ ಟ್ರೋಫಿಯಲ್ಲಿ ರಾಣಾ, ಇಂಡಿಯಾ D ಪರ ಆಡುತ್ತಿದ್ದು, ಇಂಡಿಯಾ C ವಿರುದ್ಧದ ಪಂದ್ಯದಲ್ಲಿ ಅದ್ಭುತ ಬೌಲಿಂಗ್ನಿಂದ ಮಿಂಚಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಬೇಟೆಯಾಡಿದ್ದಾರೆ. ಆದ್ರೆ, ಇಂಡಿಯಾ D ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್ ವಿಕೆಟ್ ಪಡೆದಾಗ, ಫ್ಲೈಯಿಂಗ್ ಕಿಸ್ ನೀಡಿ ಸಂಭ್ರಮಿಸಿದ್ದಾನೆ. ಇದೇ ಈಗ ವಿವಾದಕ್ಕೆ ಕಾರಣವಾಗಿದೆ.
And Harshit Rana didn't disappoint them 🦁🔥 pic.twitter.com/aI33QJAOJs
— Brendon Mishra 🇮🇳🔥 (@KKRKaFan) September 6, 2024
ದೇಶದಲ್ಲೇ ಅತಿಹೆಚ್ಚು ಟ್ಯಾಕ್ಸ್ ಕಟ್ಟುವ ಆಟಗಾರ ವಿರಾಟ್ ಕೊಹ್ಲಿ; ಧೋನಿ, ಸಚಿನ್ ಕಟ್ಟುವ ತೆರಿಗೆ ಎಷ್ಟು?
ನಿಷೇಧದ ಶಿಕ್ಷೆ ಅನುಭವಿಸಿದ ಮೇಲೂ ಪಾಠ ಕಲಿತಿಲ್ಲ..!
ಯೆಸ್, ಐಪಿಎಲ್ ಸೀಸನ್ 17ರ ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ರಾಣಾ ಇಂತದ್ದೇ ಸೆಲೆಬ್ರೇಷನ್ ಮಾಡಿದ್ರು. ತನಗಿಂತ ಸೀನಿಯರ್ ಮಯಾಂಕ್ ಅಗರ್‌ವಾಲ್‌ಗೆ ಫ್ಲೈಯಿಂಗ್ ಕಿಸ್ ನೀಡಿ, ಪೆವಿಲಿಯನ್ ದಾರಿ ತೋರಿಸಿದ್ರು. ರಾಣಾರ ಈ ವರ್ತನೆ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಅಭಿಮಾನಿಗಳು ಮತ್ತು ಮಾಜಿ ಆಟಗಾರರು ರಾಣಾ ವಿರುದ್ಧ ಕಿಡಿಕಾರಿದ್ರು. ಐಪಿಎಲ್ ಶಿಸ್ತು ಸಮಿತಿ ರಾಣಾಗೆ ಪಂದ್ಯದ ಶುಲ್ಕದಲ್ಲಿ ಶೇಕಡಾ 60ರಷ್ಟು ದಂಡ ವಿಧಿಸಿತ್ತು.
Harshit Rana gives Mayank Agarwal a send off. pic.twitter.com/xRkuqMBnrq
— Mufaddal Vohra (@mufaddal_vohra) March 23, 2024
ದಂಡ ವಿಧಿಸಿದ ಮೇಲೂ ರಾಣಾ ತಪ್ಪಿನಿಂದ ಪಾಠ ಕಲಿಯಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ ಅದೇ ಸೇಮ್ ಮಿಸ್ಟೇಕ್ ರಿಪೀಟ್ ಮಾಡಿದ್ರು. ಆ ಮೂಲಕ ಒಂದು ಪಂದ್ಯದಿಂದ ಬ್ಯಾನ್ ಆಗಿದ್ರು. ಅಲ್ಲದೇ ಪಂದ್ಯದ ಶುಲ್ಕದಲ್ಲಿ ಶೇಕಡಾ 100ರಷ್ಟು ದಂಡ ಕಟ್ಟಿದ್ರು. ಆದ್ರೆ, ಇಷ್ಟೆಲ್ಲಾ ಆದ್ಮೇಲೂ ರಾಣಾ ಮತ್ತದೇ ತಪ್ಪು ಮಾಡಿದ್ದಾರೆ.
ಅದೇನೆ ಇರಲಿ, ಇನ್ಮೇಲಾದ್ರೂ ರಾಣಾ ತಮ್ಮ ತಪ್ಪುಗಳನ್ನ ತಿದ್ದಿಕೊಳ್ತರಾ..? ಅಥವಾ ಇದೇ ವರ್ತನೆ ಮುಂದುವರಿಸ್ತಾರಾ..? ಅನ್ನೋದನ್ನ ಕಾದು ನೋಡಬೇಕಿದೆ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್