ದೇಶದಲ್ಲೇ ಅತಿಹೆಚ್ಚು ಟ್ಯಾಕ್ಸ್ ಕಟ್ಟುವ ಆಟಗಾರ ವಿರಾಟ್ ಕೊಹ್ಲಿ; ಧೋನಿ, ಸಚಿನ್ ಕಟ್ಟುವ ತೆರಿಗೆ ಎಷ್ಟು?
ಬೆಂಗಳೂರು: ರನ್ ಮಿಷನ್ ವಿರಾಟ್ ಕೊಹ್ಲಿ ಮೈದಾನದಲ್ಲಿ ರನ್ ಬಾರಿಸಿ ದಾಖಲೆಗಳನ್ನು ಬರೆದಿದ್ದಾರೆ. ಅದೇ ರೀತಿ, ಮೈದಾನದ ಹೊರಗೆ ಗಳಿಕೆಯಲ್ಲೂ ಇತಿಹಾಸವನ್ನು ಸೃಷ್ಟಿಸುತ್ತಿದ್ದಾರೆ. ಅತಿ ಹೆಚ್ಚು ತೆರಿಗೆ ಪಾವತಿಸಿದ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ ಎಂಎಸ್ ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ.
ವಿರಾಟ್ ಕೊಹ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ್ದಾರೆ: ಭಾರತದ ದಿಗ್ಗಜ ಸ್ಟಾರ್ ಆಟಗಾರರಲ್ಲಿ ವಿರಾಟ್ ಕೊಹ್ಲಿ ಒಬ್ಬರು. ಪ್ರಸ್ತುತ ಕ್ರಿಕೆಟ್ ಆಡುತ್ತಿರುವವರಲ್ಲಿ ಟಾಪ್ ಕ್ರಿಕೆಟರ್ ಆಗಿ ಮುಂದುವರೆದಿದ್ದಾರೆ.
ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಭಾರತಕ್ಕೆ ಕೊಹ್ಲಿ ಏಕಾಂಗಿಯಾಗಿ ಹಲವು ಅದ್ಭುತ ಗೆಲುವುಗಳನ್ನು ತಂದುಕೊಟ್ಟಿದ್ದಾರೆ.
ಈಗಾಗಲೇ ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಅವರ ಹಲವು ಕ್ರಿಕೆಟ್ ದಾಖಲೆಗಳನ್ನು ಮುರಿದಿರುವ ವಿರಾಟ್ ಕೊಹ್ಲಿ.. ಈಗ ಗಳಿಕೆಯಲ್ಲೂ ಈ ಆಟಗಾರರನ್ನು ಹಿಂದಿಕ್ಕಿದ್ದಾರೆ.
ಸದ್ಯ ಕ್ರಿಕೆಟ್‌ನಿಂದ ತಾತ್ಕಾಲಿಕ ಬಿಡುವು ಪಡೆದುಕೊಂಡಿರುವ ಅವರ ಬಗ್ಗೆ ಒಂದು ಕುತೂಹಲಕಾರಿ ಸುದ್ದಿ ಹೊರಬಿದ್ದಿದೆ. ವಿರಾಟ್ ಕೊಹ್ಲಿ ಭಾರತದ ದಿಗ್ಗಜ ಆಟಗಾರರನ್ನು ಹಿಂದಿಕ್ಕಿ ಅತಿಹೆಚ್ಚು ತೆರಿಗೆ ಪಾವತಿಸುವ ಭಾರತೀಯ ಕ್ರೀಡಾಪಟು ಎನಿಸಿಕೊಂಡಿದ್ದಾರೆ . ಫಾರ್ಚೂನ್ ಇಂಡಿಯಾ ವರದಿಯ ಪ್ರಕಾರ ವಿರಾಟ್ ಕೊಹ್ಲಿ 2023-24ನೇ ಸಾಲಿನಲ್ಲಿ 66 ಕೋಟಿ ತೆರಿಗೆ ಪಾವತಿಸಿದ್ದಾರೆ.
ಭಾರತದ ಮಾಜಿ ಆಟಗಾರರಾದ ಎಂಎಸ್ ಧೋನಿ (ರೂ. 38 ಕೋಟಿ), ಸಚಿನ್ ತೆಂಡೂಲ್ಕರ್ (ರೂ. 28 ಕೋಟಿ) ಈ ಪಟ್ಟಿಯಲ್ಲಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.