ಚುನಾವಣಾ ಪ್ರಚಾರದ ವೇಳೆ ಮಹಿಳೆಗೆ ಕಿಸ್ ಕೊಟ್ಟ ಬಿಜೆಪಿ ಅಭ್ಯರ್ಥಿ, ಫೋಟೋ ವೈರಲ್!
khagen murmur kissing woman ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಖಾಗೇನ್ ಮುರ್ಮು, ಮಹಿಳೆಯೊಬ್ಬರಿಗೆ ಕಿಸ್ ನೀಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲಿಯೇ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ಟೀಕೆ ಮಾಡಿದೆ.
ನವದೆಹಲಿ (ಏ.10): ಬಂಗಾಳದ ಉತ್ತರ ಮಾಲ್ಡಾ ಕ್ಷೇತ್ರದ ಪಕ್ಷದ ಲೋಕಸಭಾ ಅಭ್ಯರ್ಥಿ ಹಾಗೂ ಬಿಜೆಪಿ ಸಂಸದ ಖಗೇನ್ ಮುರ್ಮು ಪ್ರಚಾರದ ವೇಳೆ ಮಹಿಳೆಯ ಕೆನ್ನೆಗೆ ಮುತ್ತಿಡುತ್ತಿರುವ ಚಿತ್ರ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಅಭ್ಯರ್ಥಿ ತಮ್ಮ ಸಂಸದೀಯ ಕ್ಷೇತ್ರವಾದ ಚಂಚಲ್‌ನ ಶ್ರೀಹಿಪುರ ಗ್ರಾಮದಲ್ಲಿ ಸೋಮವಾರ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಖಗೆನ್ ಮುರ್ಮು ಮಹಿಳೆಯನ್ನು ಚುಂಬಿಸುತ್ತಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ತೃಣಮೂಲ ಕಾಂಗ್ರೆಸ್ ಪಕ್ಷವು "ಮಹಿಳಾ ವಿರೋಧಿ ರಾಜಕಾರಣಿಗಳ ಪಕ್ಷದಲ್ಲಿ ಕೊರತೆಯಿಲ್ಲ" ಎಂದು ಹೇಳುವ ಮೂಲಕ ಬಿಜೆಪಿಯನ್ನು ಟೀಕಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ನೀವು ಈಗ ನೋಡಿರುವ ಪೋಟೋವನ್ನು ನಂಬಲು ಕೂಡ ಸಾಧ್ಯವಿಲ್ಲ. ಅದಕ್ಕಾಗಿ ನಾವೇ ಸ್ಪಷ್ಟವಾಗಿ ತಿಳಿಸ್ತೇವೆ. ಹೌದು ಇದು ಬಿಜೆಪಿ ಎಂಪಿ ಹಾಗೂ ಮಾಲ್ಡಾ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಖಗೇನ್ ಮುರ್ಮು, ತಮ್ಮ ಚುನಾವಣಾ ಪ್ರಚಾರದ ವೇಳೆ ಮಹಿಳೆಯನ್ನು ಚುಂಬಿಸುತ್ತಿರುವ ದೃಶ್ಯವಾಗಿದೆ. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುವ ಸಂಸದರಿಂದ ಹಿಡಿದು ಬಂಗಾಳಿ ಮಹಿಳೆಯರ ಬಗ್ಗೆ ಅಶ್ಲೀಲ ಹಾಡುಗಳನ್ನು ಹಾಡುವ ನಾಯಕರವರೆಗೂ ಬಿಜೆಪಿ ಪಾಳಯದಲ್ಲಿ ಮಹಿಳಾ ವಿರೋಧಿ ರಾಜಕಾರಣಿಗಳಿಗೆ ಎಂದೂ ಕೊರತೆಯಾಗಿಲ್ಲ. ನಾರಿ ಕಾ ಸಮ್ಮಾನ್ ನಲ್ಲಿ ಮೋದಿ ಕಾ ಪರಿವಾರ್ ತೊಡಗಿದ್ದು ಹೀಗೆ! ಅವರು ಅಧಿಕಾರಕ್ಕೆ ಬಂದರೆ ಅವರು ಏನು ಮಾಡಬಲ್ಲರು ಎನ್ನುವುದನ್ನೂ ನೀವೇ ಊಹಿಸಿ, ”ಎಂದು ಬಂಗಾಳದ ಆಡಳಿತ ಪಕ್ಷವು ಮೈಕ್ರೋ ಬ್ಲಾಗಿಂಗ್ ಸೈಟ್‌ನಲ್ಲಿ ಬರೆದಿದೆ.
ತೃಣಮೂಲ ಕಾಂಗ್ರೆಸ್‌ನ ಮಾಲ್ಡಾ ಜಿಲ್ಲಾ ಉಪಾಧ್ಯಕ್ಷ ದುಲಾಲ್ ಸರ್ಕಾರ್ ಕೂಡ ಘಟನೆಯನ್ನು ಖಂಡಿಸಿದ್ದು, ಇದು ಬಂಗಾಳಿ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ‘ಮತ ಭಿಕ್ಷೆ’ ಮಾಡುವಾಗ ಇಂತಹ ಸನ್ನಿವೇಶಗಳು ಬಂದರೆ, ಗೆದ್ದ ನಂತರ ಬಿಜೆಪಿಯ ಮನಸ್ಥಿತಿ ಹೇಗಿರಬಹುದು ಎನ್ನುವುದನ್ನು ಊಹಿಸಲು ಅಸಾಧ್ಯ ಎಂದಿದ್ದಾರೆ. ಹಾಗಾಗಿ ಇಂಥ ಉದ್ದಟತನದ ವರ್ತನೆಯ ಬಗ್ಗೆ ಜನರೇ ನಿರ್ಧಾರ ಮಾಡಲಿದ್ದಾರೆ ಎಂದು ದುಲಾಲ್ ಸರ್ಕಾರ್ ತಿಳಿಸಿದ್ದಾರೆ.
ಈ ನಡುವೆ ಖಗೇನ್ ಮುರ್ಮು ಕೂಡ ಪ್ರತಿಕ್ರಿಯೆ ನೀಡಿದ್ದು, ಆಕೆ ಮಗುವಿನಂತೆ ಎಂದು ಹೇಳುವ ಮೂಲಕ ತಾವು ಮುತ್ತುಕೊಟ್ಟಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. "ಮಗುವಿಗೆ ಮುತ್ತು ಕೊಡುವುದರಲ್ಲಿ ತಪ್ಪೇನಿಲ್ಲ. ಇದು ಸಂಪೂರ್ಣ ತಳಮಟ್ಟದ ಪಿತೂರಿ. ಅವರಿಗೆ ಅಂತಹ ಕೆಟ್ಟ ಮೌಲ್ಯಗಳಿವೆ" ಎಂದು ಬಿಜೆಪಿ ಅಭ್ಯರ್ಥಿ ಹೇಳಿದ್ದಾರೆ.
ಚುಂಬನದ ಘಟನೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ವಿರುದ್ಧ ದೂರು ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ. ಇಂತಹ ಚಿತ್ರಗಳನ್ನು ತಿರುಚುವ ಮೂಲಕ ಪಕ್ಷಗಳು ಮತ್ತು ವ್ಯಕ್ತಿಗಳ ಮಾನಹಾನಿ ಮಾಡಲಾಗುತ್ತಿದೆ ಎಂದು ಖಗೆನ್ ಮುರ್ಮು ಹೇಳಿದ್ದಾರೆ. ಈ ನಡುವೆ ಖಗೇನ್ ಮುರ್ಮು ಅವರಿಗೆ ಮುತ್ತು ಸ್ವೀಕರಿಸಿದ ಮಹಿಳೆ ಕೂಡ ತೃಣಮೂಲ ಕಾಂಗ್ರೆಸ್‌ಅನ್ನು ಟೀಕೆ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿಯನ್ನು ಸಮರ್ಥಿಸಿಕೊಂಡಿರುವ ಅವರು, ವೈರಲ್ ಆಗಿರುವ ಚಿತ್ರದಲ್ಲಿ ಅಶ್ಲೀಲತೆ ಮಾತ್ರವೇ ಎತ್ತಿ ತೋರಿಸಿದವರು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತನ್ನ ಮಗಳಂತೆ ಎಂದು ಹೇಳುವ ವ್ಯಕ್ತಿಯಿಂದ ಮುತ್ತು ಸ್ವೀಕರಿಸಿದರೆ, ತಪ್ಪೇನಿಲ್ಲ ಎಂದು ಹೇಳಿದ್ದಾರೆ.
Turning Point: ಅದೊಂದು ರಾತ್ರಿ.. "ಅಮ್ಮಾ ಎದ್ದು ಹೊರಡು.." ಅಂದಿದ್ದರು ಸಂಜಯ್ ಗಾಂಧಿ..!
'ತನ್ನ ಮಗಳಿಗೆ ಮುತ್ತು ನೀಡೋದಿಲ್ಲವೇ. ಅದೇ ರೀತಿಯಲ್ಲಿ ಒಂದು ಹೆಣ್ಣಿಗೆ ಮುತ್ತು ನೀಡಿದರೆ ಆಗುವ ತೊಂದರೆಯೇನು? ಇಂತಹ ಘಟನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ಜನರ ಮನಸ್ಥಿತಿ ಕೊಳಕು, ಖಗೇನ್ ಮುರ್ಮು ನನ್ನನ್ನು ಮಗಳಂತೆ ನೋಡುತ್ತಾರೆ. ಈ ಚಿತ್ರ ತೆಗೆಯುವ ಸಮಯದಲ್ಲಿ ನನ್ನ ತಂದೆ ತಾಯಿ ಕೂಡ ಇದ್ದರು ಎಂದು ಮಹಿಳೆ ಹೇಳಿದ್ದಾರೆ.
ಮುಂದಿನ 10 ವರ್ಷದಲ್ಲಿ 3 ಬಾರಿ ಫೈನಲ್ ಆಡಲಿದೆ ಆರ್‌ಸಿಬಿ, ಒಮ್ಮೆ ಚಾಂಪಿಯನ್, ಪ್ರೆಡಿಕ್ಟ್ ಮಾಡಿದ AI