ನವದೆಹಲಿ(ನ.16) : ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌ ಧೋನಿ ನಾಲ್ಕು ತಿಂಗಳ ಬಳಿಕ ನೆಟ್ಸ್‌ಗೆ ಮರಳಿದ್ದಾರೆ. ಆದರೂ ಅವ​ರು ಡಿ.6ರಿಂದ ಆರಂಭವಾಗಲಿರುವ ವೆಸ್ಟ್‌ ಇಂಡೀಸ್‌ ವಿರು​ದ್ಧದ ಸರಣಿಗೆ ಲಭ್ಯವಿರುವುದಿಲ್ಲ ಎಂದು ಬಿಸಿ​ಸಿಐ ಅಧಿ​ಕಾ​ರಿ​ಯೊ​ಬ್ಬರು ತಿಳಿ​ಸಿ​ದ್ದಾರೆ. ಗುರುವಾರ ಜಾರ್ಖಂಡ್‌ ರಾಜ್ಯ ಕ್ರಿಕೆಟ್‌ ಸಂಸ್ಥೆ (ಜೆಎಸ್‌ಸಿಎ) ಕ್ರೀಡಾಂಗಣದಲ್ಲಿ ಧೋನಿ ಅಭ್ಯಾಸ ನಡೆಸಿದರು. 

 

ಇದನ್ನೂ ಓದಿ: ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುವ ಇಬ್ಬರು ವಿಕೆಟ್ ಕೀಪರ್ ಯಾರು..?.

2019ರ ಐಸಿಸಿ ಏಕದಿನ ವಿಶ್ವಕಪ್‌ ಸೆಮಿಫೈನಲ್‌ ಬಳಿಕ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿ​ಸಿ​ಕೊಂಡಿಲ್ಲ. ವಿಶ್ವಕಪ್ ಸರಣಿ ಮುಗಿದ ಬೆನ್ನಲ್ಲೇ ದೇಶ ಸೇವೆಗಾಗಿ ಸೈನ್ಯಕ್ಕೇ ಸೇರಿದ್ದ ಧೋನಿ, ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅಲಭ್ಯರಾಗಿದ್ದರು. ಇದಾದ ಬಳಿಕ ಸೌತ್ ಆಫ್ರಿಕಾ ವಿರುದ್ದದ ಸರಣಿಯಿಂದ ಹೊರಗುಳಿದ ಧೋನಿ, ಬಾಂಗ್ಲಾದೇಶ ಸರಣಿಗ ಲಭ್ಯವಿದ್ದರೂ ಆಯ್ಕೆಯಾಗಿಲ್ಲ.

ಇದನ್ನೂ ಓದಿ: ಧೋನಿ ಮಾಡಿದ 5 ಅದ್ಭುತ ಟ್ವೀಟ್‌: ಮಿಸ್ ಮಾಡದೇ ನೋಡಿ

ಸದ್ಯ ಬಾಂಗ್ಲಾದೇಶ ವಿರುದ್ದದ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಸರಣಿ ಬಳಿಕ  ಭಾರತ ಹಾಗೂ ವಿಂಡೀಸ್‌ ನಡುವೆ 3 ಟಿ20, 3 ಏಕ​ದಿನ ಪಂದ್ಯ​ಗಳ ಸರಣಿ ನಡೆ​ಯ​ಲಿದೆ. ಈ ಸರಣಿಗೂ ಧೋನಿ ಅಲಭ್ಯ ಎನ್ನಲಾಗುತ್ತಿದೆ. ಆದರೆ ಯುವ ಕ್ರಿಕೆಟಿಗರಿಗೆ ಅವಕಾಶ ನೀಡೋ  ನಿಟ್ಟಿನಲ್ಲಿ ಉದ್ದೇಶಪೂರ್ವಕವಾಗಿ ಧೋನಿಯನ್ನು ಕಡೆಗಣಿಸಲಾಗುತ್ತಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.